ದಕ್ಷಿಣ ಆಫ್ರಿಕಾ ವಿರುದ್ಧದ ಆರನೇ ಏಕದಿನ ಸರಣಿಯಲ್ಲಿ ಭಾರತ ಜಯಗೊಳಿಸಿದ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಮ್ಮ ಪತ್ನಿ ಅನುಷ್ಕಾ ಶರ್ಮರಿಗೆ ಧನ್ಯವಾದ ಹೇಳಿದ್ದಾರೆ. ಗೆಲುವಿನ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಅನುಷ್ಕಾರನ್ನು ಸ್ಮರಿಸಿದ್ದು ವಿಶೇಷವಾಗಿತ್ತು. ನನ್ನ ಪತ್ನಿ ನನಗೆ ಸದಾ ಪ್ರೇರಣೆ ನೀಡುತ್ತಾಳೆ. ಈ ಗೆಲುವಿನ ಕ್ರೆಡಿಟ್ ಆಕೆಗೆ ಸಲ್ಲಬೇಕು. ಈ ಹಿಂದೆಯೆಲ್ಲಾ ಅನುಷ್ಕಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾಳೆ. ಆದರೆ ಈ ಟೂರ್ನಲ್ಲಿ ಆಕೆಯೇ ನನಗೆ ಸ್ಫೂರ್ತಿ ತುಂಬಿದ್ದಾಳೆ. ಕಷ್ಟದ ಸಮಯದಲ್ಲಿ ಆಕೆ ನನಗೆ ಹುರಿದುಂಬಿಸಿದ್ದಾಳೆ ಎಂದು ವಿರಾಟ್ ಹೇಳಿರುವ ವಿಡಿಯೊ ತುಣುಕು ಈಗ ವೈರಲ್ ಆಗಿದೆ.
ಅನುಷ್ಕಾರಿಗೆ ಥ್ಯಾಂಕ್ಸ್ ಹೇಳಿದ ಕೊಹ್ಲಿ
ದಕ್ಷಿಣ ಆಫ್ರಿಕಾ ವಿರುದ್ಧದ ಆರನೇ ಏಕದಿನ ಸರಣಿಯಲ್ಲಿ ಭಾರತ ಜಯಗೊಳಿಸಿದ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಮ್ಮ ಪತ್ನಿ ...
Vijaya Karnataka 20 Feb 2018, 5:00 am