ಆ್ಯಪ್ನಗರ

ನರೇಂದ್ರ ಮೋದಿ ಬಯೋಪಿಕ್‌ಗಾಗಿ ರೈಲಿಗೆ ಬೆಂಕಿ: ಭಾರಿ ಪ್ರತಿರೋಧ

ಆದರೆ, ಗುಜರಾತ್ ಗೋದ್ರಾ ರೈಲು ದುರಂತದಲ್ಲಿ ಆರೋಪಿ ಎಂದು ಹೇಳಲಾಗಿದ್ದ ಮೋದಿಯವರಿಗೆ ನ್ಯಾಯಾಲಯ ಈಗಾಗಲೇ ಕ್ಲೀನ್ ಚಿಟ್ ನೀಡಿದೆ. ಹೀಗಿರುವಾಗ, ಮತ್ತೆ ಹಳೆ ಘಟನೆಯನ್ನು ಕೆಣಕುವಂತೆ ಶೂಟಿಂಗ್ ಮಾಡಿರುವುದು ಹಲವರ ಕೋಪಕ್ಕೆ ಕಾರಣವಾಗಿದೆ.

Vijaya Karnataka Web 6 Mar 2019, 12:22 pm
ಇತ್ತೀಚಿಗೆ ಚಿತ್ರರಂಗದಲ್ಲಿ ಬಯೋಪಿಕ್‌ಗಳ ಭರಾಟೆ ಜೋರಾಗಿದೆ. ಬಾಲಿವುಡ್ ಅಂಗಳದಲ್ಲಿ ಬಂದ ಮಿಲ್ಕಾ ಸಿಂಗ್ ಸೂಪರ್ ಹಿಟ್ ಆಗಿದ್ದೇ ತಡ, ಸಾಲಾಗಿ ಬಯೋಪಿಕ್‌ಗಳು ಬರಲಾರಂಭಿಸಿವೆ ಎನ್ನಬಹುದು. ಕ್ರಿಕೆಟ್, ರಾಜಕಾರಣಿಗಳು, ಸಿನಿಮಾ ಪರ್ಸನಾಲಿಟಿಗಳು ಹೀಗೆ ಬಹಳಷ್ಟು ಜನರ ಜೀವನ ಚರಿತ್ರೆಗಳು ತೆರೆಯ ಮೇಲೆ ಬರತೊಡಗಿವೆ. ಇತ್ತೀಚಿಗಷ್ಟೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಯೋಪಿಕ್ ಒಂದಷ್ಟು ಸದ್ದು ಮಾಡಿತ್ತು.
Vijaya Karnataka Web pmmodi0603


ಹೊಸ ಸುದ್ದಿ ಏನಪ್ಪಾ ಅಂದ್ರೆ, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್ ಸಿದ್ಧವಾಗುತ್ತಿದ್ದು ಅದಕ್ಕಾಗಿ ರೈಲೊಂದಕ್ಕೆ ಬೆಂಕಿ ಹಾಕಲಾಗಿದೆಯಂತೆ. ಶೂಟಿಂಗ್ ಹಂತದಲ್ಲಿರುವ ಪ್ರಧಾನಿ ಮೋದಿ ಅವರ ಬಯೋಪಿಕ್‌ 'ಪಿಎಮ್ ನರೇಂದ್ರ ಮೋದಿ' ಚಿತ್ರೀಕರಣಕ್ಕೆ, ರೈಲಿಗೆ ಬೆಂಕಿ ಹಾಕಿರುವುದು ಹಲವು ಜನರನ್ನು ಕೆರಳಿಸಿದೆ ಎನ್ನಲಾಗುತ್ತಿದೆ. ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಗುಜರಾತ್‌ನಲ್ಲಿ ನಡೆದ ರೈಲು ದುರಂತಕ್ಕೆ ಸಂಬಂಧಿಸಿದಂತೆ ಈ ಶೂಟಿಂಗ್ ನಡೆದಿದೆ ಎನ್ನಲಾಗಿದೆ.

ಆದರೆ, ಗುಜರಾತ್ ಗೋದ್ರಾ ರೈಲು ದುರಂತದಲ್ಲಿ ಆರೋಪಿ ಎಂದು ಹೇಳಲಾಗಿದ್ದ ಮೋದಿಯವರಿಗೆ ನ್ಯಾಯಾಲಯ ಈಗಾಗಲೇ ಕ್ಲೀನ್ ಚಿಟ್ ನೀಡಿದೆ. ಹೀಗಿರುವಾಗ, ಮತ್ತೆ ಹಳೆ ಘಟನೆಯನ್ನು ಕೆಣಕುವಂತೆ ಶೂಟಿಂಗ್ ಮಾಡಿರುವುದು ಹಲವರ ಕೋಪಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಚಿತ್ರತಂಡವು ರೈಲಿಗೆ ಬೆಂಕಿ ಇಟ್ಟು ಆ ಸ್ಥಳದಲ್ಲಿ ಆವರಿಸಿದ ಹೊಗೆ ನೋಡಿ ಸ್ಥಳೀಯರು ಭಯಭೀತರಾಗಿದ್ದಾರೆ ಎನ್ನಲಾಗಿದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ರೈಲ್ವೇ ಇಲಾಖೆಯು "ಚಿತ್ರೀಕರಣಕ್ಕೆ 'ಮೋಕ್ ಡ್ರಿಲ್' ಬೋಗಿಯನ್ನು ನೀಡಲಾಗಿತ್ತು. ಶೂಟಿಂಗ್ ವೇಳೆ ನಮ್ಮ ಅಧಿಕಾರಿಗಳು ಕೂಡ ಸ್ಥಳದಲ್ಲಿ ಹಾಜರಿದ್ದರು" ಎಂದು ಹೇಳಿರುವುದು ವರದಿಯಾಗಿವೆ. ಅಂದಹಾಗೆ, 'ಪಿಎಮ್ ನರೇಂದ್ರ ಮೋದಿ ' ಬಯೋಪಿಕ್' ಚಿತ್ರದಲ್ಲಿ ನಟ ವಿವೇಕ್ ಒಬೆರಾಯ್ 'ಪಿಎಮ್ ನರೇಂದ್ರ ಮೋದಿ'ಯವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ, 'ಬಯೋಪಿಕ್‌ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ, ತಮ್ಮ ಕಥಗೆ ಅಗತ್ಯವಿತ್ತು. ಹೀಗಾಗಿ ನಾವು ರೈಲನ್ನು ಸುಡಬೇಕಾಯ್ತು' ಎಂದು ಚಿತ್ರತಂಡ ಹೇಳಿಕೊಂಡಿದೆ ಎಂದು ವರದಿಯಾಗಿದೆ. ಆದರೆ, ರೈಲಿಗೆ ಬೆಂಕಿ ಹಾಕಿ ಚಿತ್ರೀಕರಣ ಮಾಡಿದ್ದಾರೆ ಎಂದರೆ, ಕಥೆ ಹೇಗಿರಬಹುದು ಎಂಬ ಚರ್ಚೆ ಈಗ ಎಲ್ಲೆಡೆ ಪ್ರಾರಂಭವಾಗಿದೆ. ಅದೇನೇ ಇರಲಿ, 'ಬಯೋಪಿಕ್ ಹೆಸರಿನಲ್ಲಿ ನಡೆದ ಘಟನೆಯನ್ನು ಕೆದಕುತ್ತಾ, ಹಲವರ ಹೆಸರಿಗೆ ಮಸಿ ಬಳಿಯುವ ಕೆಲಸ ಆದಷ್ಟು ಬೇಗ ನಿಂತರೆ ಒಳ್ಳೆಯದು' ಎಂಬ ಮಾತು ಬಾಲಿವುಡ್ ಸೇರಿದಂತೆ, ಹಲವು ದಿಕ್ಕುಗಳಿಂದ ಕೇಳಿ ಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌