ಆ್ಯಪ್ನಗರ

'ಹೌದು ನಾನು ಕುಡೀತೀನಿ, ಧೂಮಪಾನ ಮಾಡ್ತೀನಿ' ಎಂದ ನಟಿ

"ನೀವು ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದೀರಾ. ನನ್ನ ವರ್ತನೆ ಇಷ್ಟವಾಗದಿದ್ದರೆ ಅನ್‌ಫಾಲೋ ಆಗಬಹುದು" ಎಂದು ಬರೆದು ಮದ್ಯಪಾನ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

TIMESOFINDIA.COM 30 Oct 2018, 3:02 pm
"ಧೂಮಪಾನ, ಮದ್ಯಪಾನ ಮಾಡುವುದರಿಂದ ನಾನು ಕೆಟ್ಟ ತಾಯಿ ಹೇಗಾಗುತ್ತೇನೆ" ಎಂದು ಟ್ರೋಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ನಟಿ ಶ್ವೇತಾ ಸಾಲ್ವೆ. ಇತ್ತೀಚೆಗೆ ಶ್ವೇತಾ ತನ್ನ ಕುಟುಂಬಿಕರ ಜತೆಗೆ ಗೋವಾಗೆ ಪ್ರವಾಸ ಹೋಗಿದ್ದರು. ಬಿಕಿನಿ ತೊಟ್ಟು ಧೂಮಪಾನ ಮಾಡುತ್ತಿರುವ ಫೋಟೋವನ್ನು ಶ್ವೇತಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.
Vijaya Karnataka Web shvetha


ಈ ಫೋಟೋ ಟ್ರೋಲ್ ಆಗಿತ್ತು. "ಈ ರೀತಿ ಮಾಡಲು ನಿಮಗೆ ನಾಚಿಕೆಯಾಗಲ್ಲವೇ? ನೀವು ಒಳ್ಳೆಯ ತಾಯಿ ಅಲ್ಲವೇ ಅಲ್ಲ. ನಿಮ್ಮ ಮಕ್ಕಳಿಗೂ ಈ ಅಭ್ಯಾಸ ಬರಲ್ಲವೇ?" ಎಂದು ಕಾಮೆಂಟ್ ಮಾಡಿದ್ದರು. ಈ ಕಾಮೆಂಟ್‌ಗಳ ಬಗ್ಗೆ ಶ್ವೇತಾ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

"ಹೌದು ನಾನು ಕುಡಿಯುತ್ತೇನೆ, ಧೂಮಪಾನ ಮಾಡುತ್ತೇನೆ. ನಾನು ಪ್ರಾಮಾಣಿಕವಾಗಿ ಇರುತ್ತೇನೆ. ಕೇವಲ ಮದ್ಯ, ಸಿಗರೇಟ್ ಸೇದುವುದರಿಂದ ಕೆಟ್ಟ ತಾಯಿ ಹೇಗಾಗುತ್ತೇನೆ? ನನ್ನ ಜೀವನವನ್ನು ವ್ಯರ್ಥ ಮಾಡಿಕೊಳ್ಳುವುದನ್ನು ನೀವು ನೋಡಿದ್ದೀರಾ? ಕೆಲಸ ಮಾಡದೆ ಸುಮ್ಮನೆ ಕುಳಿತಿರುವುದನ್ನು ನೋಡಿದ್ದೀರಾ? ನನ್ನ ಮಕ್ಕಳ ಬಗ್ಗೆ ನಿರ್ಲಕ್ಷಿಸುತ್ತಿರುವುದನ್ನು ನೀವು ನೋಡಿದ್ದೀರಾ? ನಿತ್ಯ ಅದೆಷ್ಟೋ ಕೆಲಸಗಳಲ್ಲಿ ಬಿಝಿ ಇರುತ್ತೇನೆ. ನಾನೊಬ್ಬ ನಟಿ, ಡ್ಯಾನ್ಸರ್, ಉದ್ಯಮಿ" ಎಂದಿದ್ದಾರೆ.

View this post on Instagram A Day off Looks something like this .. . Yes I Drink and Smoke ... I am real , honest and basic like that. It has to be of no reason that anyone ever judge me for the person I am or the Mommy I am .. I don’t propagate it and neither do I question anyone else who does , so I would respect the same back . Today I got a few random DM’s by totally random people about my actions , and I usually let such things go pass me but for some reason today I felt like addressing it . How does this make me a bad person or a bad mom ?? Do you see me wasting my Life ? Do you see me sitting unemployed n jobless ? Do you see me neglecting my child ? I work , I work multiple jobs , I’m an actor , dancer , an entrepreneur . I successfully live in two major cities of our glorious country . I have beautiful friends whom I love and I know who love me back for the person I am . Risking the fact that I might sound aggressive , don’t ever question my abilities of being a bad example to my child !! So tell me does an honest sex worker who sells her body to feed her family , to maybe get an education or to provide a life for her children is a Bad Person ? A Bad Mother ? A stigma to society ? Who are you and I to Judge ?? My parents taught me well and exposed me to the good and evil of everything . They smoked and drank too but they did a mighty fine job of raising my brother and I . As children we knew that this was not something we could practice until a certain age . And that too if we ever wanted to.. a choice that we were allowed to take as adults ... Today I share a drink with them , and celebrate the fact that they gave me a fabulous childhood n Life and I aspire to do the same with my Baby . . . I don’t pay for likes and followers , you choose to follow me for who I am . And hence what you see is me being me and you always have the option to unfollow me :) . Live and Let Live ✌🏼.. this rant has gotten me all irked so I’m gonna go pour myself a red and light up .. #micdrop 👊🏼 . #bekindtooneanother #peaceout A post shared by ⓢⓗⓥⓔⓣⓐ ⓢⓐⓛⓥⓔ (@shveshve) on Oct 28, 2018 at 5:51am PDT

"ಬೇರೆಯವರನ್ನು ನಾನು ಈ ರೀತಿ ಪ್ರಶ್ನಿಸಲ್ಲ. ಆದಕಾರಣ ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ನೀವು ಈ ರೀತಿ ಪ್ರಶ್ನಿಸಬೇಡಿ. ನನ್ನ ತಂದೆತಾಯಿ ನನ್ನನ್ನು ಜವಾಬ್ದಾರಿಯುತವಾಗಿ ಬೆಳೆಸಿದ್ದಾರೆ. ಸಮಾಜದಲ್ಲಿ ಒಳ್ಳೆಯದು, ಕೆಟ್ಟದ್ದನ್ನು ತಿಳಿಸಿದ್ದಾರೆ. ಅವರು ಸಹ ಮದ್ಯಪಾನ, ಧೂಮಪಾನ ಮಾಡುತ್ತಿದ್ದರು. ಈಗಲೂ ಏನಾದರೂ ಸಮಾರಂಭ ಮಾಡಿಕೊಳ್ಳಬೇಕಾದರೆ ನಮ್ಮ ತಂದೆತಾಯಿ ಜತೆಗೆ ಮದ್ಯಪಾನ ಮಾಡುತ್ತೇನೆ. ನೀವು ನನ್ನ ಪೋಸ್ಟ್‌ಗಳಿಗೆ ಮಾಡುವ ಲೈಕ್‌ಗಳು, ಫಾಲೋವರ್ಸ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನೀವು ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದೀರಾ. ನನ್ನ ವರ್ತನೆ ಇಷ್ಟವಾಗದಿದ್ದರೆ ಅನ್‌ಫಾಲೋ ಆಗಬಹುದು" ಎಂದು ಬರೆದು ಮದ್ಯಪಾನ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌