ಹೊಸ ರೀತಿಯ ಕನ್ನಡ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತಮ ಚಿತ್ರ ಎಂದು ಪ್ರಶಂಸೆಯನ್ನೂ ಗಳಿಸುತ್ತಿವೆ. ಆದರೆ, ಹೆಚ್ಚು ದಿನ ಚಿತ್ರಮಂದಿರದಲ್ಲಿ ಉಳಿಯಲು ಸಾಧ್ಯವಾಗದೆ ಚಿತ್ರತಂಡ ನಿರಾಶೆಯನ್ನನ್ನುಭವಿಸುತ್ತಿದೆ. ಹೀಗಿರುವಾಗ ಯಾವುದಾದರೂ ಒಂದು ಚಿತ್ರ ನೂರು ದಿನ ಚಿತ್ರಮಂದಿರದಲ್ಲಿ ಉಳಿದುಕೊಳ್ಳುವುದು ಅಪರೂಪ. ಲೋಹಿತ್ ನಿರ್ದೇಶನದ ಹಾರರ್ ಥ್ರಿಲ್ಲರ್ ಚಿತ್ರ ನೂರು ದಿನ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದೆ.
ಸ್ಯಾಂಡಲ್ವುಡ್ನಲ್ಲಿ ಅಧಿಕ ಸಂಖ್ಯೆಯಲ್ಲಿ ಹಾರರ್ ಚಿತ್ರಗಳು ದಾಳಿ ಇಟ್ಟಿದ್ದವು. ಇವುಗಳ ನಡುವೆ ಸ್ವಲ್ಪ ಭಿನ್ನ ಎನ್ನುವಂತೆ ಹಾರರ್ ಚಿತ್ರ ನಿರ್ದೇಶನ ಮಾಡಿದ್ದಾರೆ ಲೋಹಿತ್. ಅಮ್ಮ ಮತ್ತು ಪುಟ್ಟ ಮಗಳು ಎದುರಿಸುವ ಆತಂಕಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮೊದಲ ಚಿತ್ರದಲ್ಲೇ ಲೋಹಿತ್ ಪ್ರಶಂಸೆ ಗಳಿಸಿದ್ದಾರೆ. ಚಿತ್ರ ಪರಭಾಷಾ ಚಿತ್ರರಂಗದವರ ಗಮನವನ್ನೂ ಸೆಳೆದಿತ್ತು. ಪರಭಾಷೆಗೆ ರಿಮೇಕ್ ಮಾಡುವ ಪ್ರಯತ್ನವೂ ನಡೆದಿದೆ.
ಲೋಹತ್ ಈಗ ಉಪೇಂದ್ರ ಅಭಿನಯದ ಹೊಸ ಚಿತ್ರವನ್ನು ನಿರ್ದೇಶನ ಮಾಡುವ ಉತ್ಸಾಹದಲ್ಲಿದ್ದಾರೆ. ಪ್ರಿಯಾಂಕಾ ಅಭಿನಯದ ಇನ್ನೊಂದು ಚಿತ್ರವನ್ನೂ ನಿರ್ದೇಶನ ಮಾಡಲಿದ್ದಾರೆ. ಇದಕ್ಕಾಗಿ ಸ್ಕ್ರಿಪ್ಟ್ ವರ್ಕ್ ಮಾಡುತ್ತಿದ್ದಾರೆ.