ಆ್ಯಪ್ನಗರ

ಧ್ರುವ ಸರ್ಜಾ ಮದುವೆ ದಿನಾಂಕ ಫಿಕ್ಸ್! 'ಪೊಗರು' ಹುಡುಗನ ಮದುವೆ ಹೇಗಿರಲಿದೆ?

ಚಂದನವನದ ಬಹುನಿರೀಕ್ಷಿತ ಸಿನಿಮಾಗಳಲ್ಲಿ 'ಪೊಗರು' ಕೂಡ ಒಂದು. ಇದೀಗ ಈ ಚಿತ್ರದ ನಾಯಕ ಮದುವೆ ಡೇಟ್ ಫಿಕ್ಸ್ ಆಗಿದೆ, ತಮ್ಮ ಬಾಲ್ಯದ ಗೆಳತಿ ಕೈ ಹಿಡಿಯಲು ಧ್ರುವ ಸರ್ಜಾ ಅಣಿಯಾಗಿದ್ದಾರೆ. ಹಾಗಾದ್ರೆ ಮದುವೆ ಯಾವಾಗ? ಇಲ್ಲಿದೆ ಅದರ ಡಿಟೇಲ್ಸ್.

Vijaya Karnataka Web 25 Sep 2019, 2:35 pm
‘ಅದ್ಧೂರಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಧ್ರುವ ಸರ್ಜಾ, ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರೋದು ‘ಪೊಗರು’ ಚಿತ್ರದಿಂದ. ತಮ್ಮ ರಫ್ ಅಂಡ್ ಟಫ್ ಲುಕ್‌ನಿಂದ ಅಭಿಮಾನಿಗಳ ಮನಸ್ಸಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿರುವ ಧ್ರುವ, ಸಿನಿಮಾ ಬಿಡುಗಡೆಗೂ ಮುನ್ನವೇ ತಮ್ಮ ಜೀವನದ ಮಹತ್ವದ ಘಟ್ಟದ ಬಗ್ಗೆ ವಿಶೇಷವಾದ ಮಾಹಿತಿಯನ್ನು ಹೊರಹಾಕಿದ್ದಾರೆ.
Vijaya Karnataka Web dhruva1-1544348598


ಧ್ರುವ ಸರ್ಜಾ ಕಾರು ಅಪಘಾತದ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ 'ಪೊಗರು'

ನವೆಂಬರ್‌ನಲ್ಲಿ ಹಸೆಮಣೆ ಏರಲಿದ್ದಾರೆ ‘ಆ್ಯಕ್ಷನ್ ಪ್ರಿನ್ಸ್’
ಕಳೆದ ವರ್ಷ ತಮ್ಮ ಬಹುದಿನಗಳ ಬಾಲ್ಯದ ಗೆಳತಿ ಪ್ರೇರಣಾ ಅವರ ಫೋಟೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ರು ಧ್ರುವ ಸರ್ಜಾ. ನಂತರ ಈ ಜೋಡಿಯ ನಿಶ್ಚಿತಾರ್ಥ ಡಿಸೆಂಬರ್ 9ರಂದು ಅದ್ಧೂರಿಯಾಗಿ ನಡೆದಿತ್ತು. ಸ್ಯಾಂಡಲ್‌ವುಡ್‌ನ ಸಾಕಷ್ಟು ತಾರೆಯರು ಈ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ರುವ ಮತ್ತು ಪ್ರೇರಣಾರನ್ನು ಹರಸಿದ್ರು. ಇದೀಗ ಈ ಜೋಡಿ ಇದೇ ನವೆಂಬರ್ 23-24ರಂದು ಭರ್ಜರಿಯಾಗಿ ಮದುವೆಯಾಗಲು ಅಣಿಯಾಗಿದೆ.

ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಬಂಪರ್ ಸುದ್ದಿ ಕೊಡ್ತಾರಂತೆ
ಧ್ರುವ ಸರ್ಜಾ ಅವರ ನೆರೆಮನೆಯ ಹುಡುಗಿ ಪ್ರೇರಣಾ. ಬಹುದಿನಗಳಿಂದಲೂ ಪರಿಚಯವಿದ್ದ ಪ್ರೇರಣಾ ಅವರ ವ್ಯಕ್ತಿತ್ವ, ಧ್ರುವ ಸರ್ಜಾರನ್ನು ಸೆಳೆದಿತ್ತು. ಹೀಗಾಗಿ ಬಾಲ್ಯದ ಗೆಳತಿಯನ್ನು ತಮ್ಮ ಜೀವನದ ಸಂಗಾತಿಯನ್ನಾಗಿಸಿಕೊಂಡ್ರು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಹಸೆಮಣೆ ಏರಲು ಸಜ್ಜಾಗಿದೆ. ಅಂದ್ಹಾಗೇ ಧ್ರುವ ಸರ್ಜಾ ಅಭಿನಯ ಕ್ಷೇತ್ರದಲ್ಲಿ ಮೋಡಿ ಮಾಡ್ತಿದ್ರೆ, ಪ್ರೇರಣಾ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಮದುವೆಗೆ ಇಡೀ ಸ್ಯಾಂಡಲ್‌ವುಡ್ ಎದುರು ನೋಡ್ತಿದೆ.

ಧ್ರುವ ಸರ್ಜಾ ಇಷ್ಟೊಂದು 'ಪೊಗರು' ತೋರಿಸೋಕೆ ಇವರೇ ಕಾರಣ!!!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌