ಆ್ಯಪ್ನಗರ

ಬೆಳೆಗೆ ನ್ಯಾಯವಾದ ಬೆಲೆ ಕೊಡಿ, ರೈತರೇ ಸಾಲ ಮನ್ನಾ ಮಾಡ್ಕೋತಾರೆ: ನಟ ದರ್ಶನ್

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೆಸರನ್ನು ಪ್ರಸ್ತಾಪಿಸಿದರೆ ಪರೋಕ್ಷವಾಗಿ ಮಾತನಾಡಿದ ದರ್ಶನ್, ಕೆಲವರು ಸಾಲ ಮನ್ನಾ ಮಾಡಿದ್ದೀವಿ ಅಂತಾರೆ. ಆದರೆ ರೈತರ ಸಾಲ ಮನ್ನಾ ಮಾಡೋದು ಬೇಡ, ಅವರು ಬೆಳೆದ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಕೊಟ್ರೆ ಸಾಕು, ಅವರೇ ಸಾಲ ಮರುಪಾವತಿ ಮಾಡುತ್ತಾರೆ ಎಂದರು.

Vijaya Karnataka Web 27 Apr 2019, 2:24 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ರೈತರ ಪರವಾಗಿ ಧ್ವನಿಯೆತ್ತಿದ್ದಾರೆ. ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಶನಿವಾರ (ಏಪ್ರಿಲ್ 27) ನಡೆದ ಜೈ ಜವಾನ್ ಜೈ ಕಿಸಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
Vijaya Karnataka Web darshan


"ರೈತರಿಗೆ ಸಾಲ ಮನ್ನಾ ಮಾಡುವುದು ಬೇಡ. ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಕೊಟ್ರೆ ಸಾಕು. ರೈತರೇ ಸಾಲ ಮರು ಪಾವತಿ ಮಾಡಿಕೊಳ್ಳುತ್ತಾರೆ" ಎಂದು ನಟ ದರ್ಶನ್ ಈ ಸಂದರ್ಭದಲ್ಲಿ ಹೇಳಿದರು.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೆಸರನ್ನು ಪ್ರಸ್ತಾಪಿಸಿದರೆ ಪರೋಕ್ಷವಾಗಿ ಮಾತನಾಡಿದ ದರ್ಶನ್, ಕೆಲವರು ಸಾಲ ಮನ್ನಾ ಮಾಡಿದ್ದೀವಿ ಅಂತಾರೆ. ಆದರೆ ರೈತರ ಸಾಲ ಮನ್ನಾ ಮಾಡೋದು ಬೇಡ, ಅವರು ಬೆಳೆದ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಕೊಟ್ರೆ ಸಾಕು, ಅವರೇ ಸಾಲ ಮರುಪಾವತಿ ಮಾಡುತ್ತಾರೆ ಎಂದರು.

ಈ ಹಿಂದೆ ಮಂಡ್ಯದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರೈತರ ಮಗ, ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರಲ್ಲ, ಅವರು ಒಂದು ಲೋಟ ಹಾಲು ಕರೆದು ತೋರಿಸಲಿ ನೋಡೋಣ. ಬೇಡ, ಹಸು ಮರಿ ಹಾಕಿದಾಗ ಅದಕ್ಕೆ ಏನು ಆಹಾರ ಕೊಡುತ್ತಾರೋ ಹೇಳಿ ಬಿಡಲಿ ನೋಡೋಣ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಖಿಲ್‌ಗೆ ದರ್ಶನ್‌ ಸವಾಲು ಹಾಕಿದ್ದನ್ನು ಸ್ಮರಿಸಬಹುದು.

ದರ್ಶನ್ ಹಾಲು ಕರೆದ ಬಗ್ಗೆ ಮಾತನಾಡಿದ್ದ ಸುಮಲತಾ ಅಂಬರೀಷ್, "ಮಗನೇ ದರ್ಶನ್, ನೀನು ಈ ಕಾರಣಕ್ಕೆ ನಂಗೆ ತುಂಬಾ ಇಷ್ಟವಾಗುತ್ತೀಯ. ಕೈ ನೋವಿದ್ದರೂ ನೀನು ಇಂದು ಹಸುವಿನ ಹಾಲು ಕರೆದಿದ್ದು ನನ್ನನ್ನು ಮಂತ್ರಮುಗ್ಧಗೊಳಿಸಿದೆ. ಹ್ಯಾಟ್ಸಾಪ್ ಕಂದ.." ಎಂದು ತಮ್ಮ ಮಗನ ಸಮಾನರಾದ ನಟ ದರ್ಶನ್ ಅವರನ್ನು ಹಾಡಿ ಹೊಗಳಿ ಹರಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌