ಆ್ಯಪ್ನಗರ

ಎಲ್ಲ ಒಪ್ಪಿಕೊಳ್ಳೋಕೆ ಧಮ್ ಬೇಕಲೇ: ಅಬ್ಬರಿಸಿದ ನಟ ಧನಂಜಯ್

ಇತ್ತೀಚೆಗೆ, ರೆಬಲ್ ಸ್ಟಾರ್ ಅಂಬರೀಷ್ ಮಗ ಅಭಿಷೇಕ್ ಅವರು ಮಂಡ್ಯ ಚುನಾವಣಾ ಪ್ರಚಾರದ ವೇಳೆ ನಟ ದರ್ಶನ್ ಸ್ಟೈಲ್‌ನಲ್ಲಿ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ನಟ ಧನಂಜಯ್ ಅವರು 'ಡಿ ಬಾಸ್' ಶೈಲಿಯಲ್ಲಿ ಡೈಲಾಗ್ ಹೊಡೆದು ಭಾರೀ ಗಮನ ಸೆಳೆದಿದ್ದಾರೆ.

Vijaya Karnataka Web 29 Mar 2019, 7:10 pm
ಸ್ಯಾಂಡಲ್‌ವುಡ್‌ನಲ್ಲಿ ನಟ ಟಗರು ಖ್ಯಾತಿಯ ಧನಂಜಯ್ ಅಂದರೆ ಬಹಳಷ್ಟು ಜನರಿಗೆ ಗೊತ್ತು ಎಂಬುದು ಎಲ್ಲರಿಗೂ ಗೊತ್ತು. ಇತ್ತೀಚೆಗೆ ಅವರು 'ಜೀ ಕನ್ನಡ ವಾಹಿನಿ'ಯ 'ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ಸ್ವೀಕರಿಸಿ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತೆ ಡೈಲಾಗ್ ಹೊಡೆದು ಬಹಳಷ್ಟು ಚಪ್ಪಾಳೆ ಗಿಟ್ಟಿಸಿದ್ದಾರೆ.
Vijaya Karnataka Web dhanajay2903


ಇತ್ತೀಚೆಗೆ, ರೆಬಲ್ ಸ್ಟಾರ್ ಅಂಬರೀಷ್ ಮಗ ಅಭಿಷೇಕ್ ಅವರು ಮಂಡ್ಯ ಚುನಾವಣಾ ಪ್ರಚಾರದ ವೇಳೆ ನಟ ದರ್ಶನ್ ಸ್ಟೈಲ್‌ನಲ್ಲಿ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ನಟ ಧನಂಜಯ್ ಅವರು 'ಡಿ ಬಾಸ್' ಶೈಲಿಯಲ್ಲಿ ಡೈಲಾಗ್ ಹೊಡೆದು ಭಾರೀ ಗಮನ ಸೆಳೆದಿದ್ದಾರೆ.

ಜೀ ಕನ್ನಡ ವಾಹಿನಿ ನೀಡುವ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭದಲ್ಲಿ ಟಗರು 'ಡಾಲಿ' ಖ್ಯಾತಿಯ ಧನಂಜಯ್ ವರ್ಷದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಒಬ್ಬ ಹೀರೋ ಆಗಿದ್ದರೂ 'ಪೋಷಕ ನಟ' ಪ್ರಶಸ್ತಿ ಪಡೆದ ಧನಂಜಯ್ ಬಹಳ ಹೆಮ್ಮೆಯಿಂದ ಅದನ್ನು ಸ್ವೀಕರಿಸಿದ್ದಾರೆ. ಈ ಬಗ್ಗೆ ತಮ್ಮ ಖುಷಿಯನ್ನು ಅವರು ನಟ ದರ್ಶನ್ ಸ್ಟೈಲ್‌ನಲ್ಲಿ ಹೇಳಿ ಇನ್ನೂ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

"ಹೀರೋನೂ ನಾನೇ, ವಿಲನ್ನು ನಾನೇ, ಪೋಷಕ ನಟನೂ ನಾನೇ.... ಎಲ್ಲವನ್ನೂ ಹಂಗೇ ಒಪ್ಪಿಕೊಳ್ಳೋಕೆ ಧಮ್ ಬೇಕಲೇ'' ಎಂದು ಧನಂಜಯ್ ಅವರು 'ಜಗ್ಗುದಾದ' ಸ್ಟೈಲ್‌ನಲ್ಲಿ ಡೈಲಾಗ್ ಹೇಳಿದ್ದಾರೆ. ಈ ಡೈಲಾಗ್ ಈಗ ಟ್ರೆಂಡ್ಆಗುತ್ತಿದೆ.

ಒಬ್ಬ ಕಲಾವಿದ ಹೀರೋ, ವಿಲನ್ ಹಾಗೂ ಪೋಷಕ ನಟನಾಗಿ ಗುರುತಿಸಿಕೊಳ್ಳುವುದು ಇಂದಿನ ಬೆಳವಣಿಗೆಯಲ್ಲಿ ಬಹಳ ಅಪರೂಪವೇ ಸರಿ. ಹೀರೋ ಆಗಿ ಸಕ್ಸಸ್ ಆದ್ರೆ ಹೀರೋ ಆಗಿಯೇ ಮುಂದುವರಿಯುವ ಟ್ರೆಂಡ್ ಸಹಜ ಎನ್ನುವಂತಿದೆ. ಆದರೆ ನಟ ಧನಂಜಯ್ ಸಾಕಷ್ಟು ಸಿನಿಮಾಗಳಲ್ಲಿ ಹೀರೋ, ಟಗರು ಚಿತ್ರದಲ್ಲಿ ವಿಲನ್ ಹಾಗೂ 'ಯಜಮಾನ' ಚಿತ್ರದಲ್ಲಿ ಪೋಷಕ ನಟನಾಗಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದಾರೆ.

ಒಟ್ಟಿನಲ್ಲಿ, ನಟ ಧನಂಜಯ್ ಅವರು ದರ್ಶನ್ ಅಭಿಮಾನಿಗಳ ಮನಸ್ಸನ್ನು ಕದ್ದು ಬಿಟ್ಟಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌