ಆ್ಯಪ್ನಗರ

ಉತ್ಸವಕ್ಕೆ ಹೊರಟ ದಿಗಂತ್‌

ಸ್ಯಾಂಡಲ್‌ವುಡ್‌ನ ಮೊಸ್ಟ್‌ ಹ್ಯಾಂಡ್‌ಸಮ್‌ ಹೀರೊ ದಿಗಂತ್‌ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ...

Vijaya Karnataka Web 15 Mar 2017, 5:00 am

ಸ್ಯಾಂಡಲ್‌ವುಡ್‌ನ ಮೊಸ್ಟ್‌ ಹ್ಯಾಂಡ್‌ಸಮ್‌ ಹಿರೋ ದಿಗಂತ್‌ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಚೌಕ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ದಿಗಂತ 'ಉತ್ಸವ್‌' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಯ್‌ ಎನ್ನು ವ ಸಿನಿಮಾ ನಿರ್ದೇಶನ ಮಾಡಿದ್ದ ರುದ್ರೇಶ್‌ ಉತ್ಸವ್‌ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಮಲಯಾಳಂನಲ್ಲಿ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸಾಗಿದ್ದ 'ಚಾರ್ಲಿ' ಸಿನಿಮಾದ ರಿಮೇಕ್‌ ಆಗಿರುವ ಈ ಉತ್ಸವ್‌ನಲ್ಲಿ ದಿಗಂತ್‌ ಲತಾ ಹೆಗಡೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂನಲ್ಲಿ ದುಲ್ಕರ್‌ ಸಲ್ಮಾನ್‌ ನಟಿಸಿದ್ದ ಈ ಸಿನಿಮಾದಲ್ಲಿ ದುಲ್ಕರ್‌ಗೆ ಪಾರ್ವತಿ ಮೆನನ್‌ ಜೋಡಿಯಾಗಿದ್ದರು.

ಹೊನ್ನಾವರ ಮೂಲದ ಲತಾ ನ್ಯೂಜಿಲೆಂಡ್‌ನಲ್ಲಿ ಮಾಡೆಲ್‌ ಆಗಿದ್ದವರು. ಈಗ ಕನ್ನಡದಲ್ಲೂ ಬಿಝಿಯಾಗುತ್ತಿದ್ದಾರೆ. ಈ ಚಿತ್ರವನ್ನು ಹರ್ಷ ಪ್ರವೇಟ್‌ ಲಿಮಿಟೆಡ್‌ ವತಿಯಿಂದ ಸಂಜೀವ್‌ ಕಾಸಿ ಹಾಗೂ ಹರ್ಷ ಕಾಸಿ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಐರಾ', ಶಾದಿಭಾಗ್ಯ' ಚಿತ್ರವನ್ನು ನಿರ್ಮಿಸುತ್ತಿರುವ ಇವರು ಈಗ ದಿಗಂತ್‌ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಸೆಲ್ವಂ ಛಾಯಾಗ್ರಹಣ, ಆಶೆ ಮೆಂಡೂಕ್‌ ಸಂಗೀತವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌