ಆ್ಯಪ್ನಗರ

ಕೊಡಗು ಆಸ್ಪತ್ರೆ ಅಭಿಯಾನಕ್ಕೆ ಧ್ವನಿಗೂಡಿಸಿದ ಕಿಚ್ಚ ಸುದೀಪ್

ನಾವು ಕೊಡಗಿನ ನಾಗರೀಕರು ನಮ್ಮ ವೈದ್ಯಕೀಯ ಅಗತ್ಯಕ್ಕಾಗಿ ಮಂಗಳೂರು ಮತ್ತು ಮೈಸೂರಿನ ಆಸ್ಪತ್ರೆಗಳನ್ನು ಅವಲಂಬಿಸಿದ್ದೇವೆ. ಕೊಡಗಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯಿಲ್ಲದ ಕಾರಣ ಎಲ್ಲ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಕೊಡಗು ಕರ್ನಾಟಕದ ಒಂದು ಭಾಗವೇ ಆಗಿದೆ. ನಾವೂ ಸಹ ಕರ್ನಾಟಕ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತೇವೆ.

Vijaya Karnataka Web 16 Jun 2019, 12:50 pm
ಕೆಸಿ ಕಾರ್ಯಪ್ಪ ಅವರು ಕೊಡಗಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಬೇಕೆಂಬ ಅಭಿಯಾನ ಶುರುಮಾಡಿದ್ದಾರೆ. ಅದಕ್ಕೆ ಈಗಾಗಲೇ ಕನ್ನಡ ಮೂಲದ ಸೌತ್ ಇಂಡಿಯಾದ ಫೇಮಸ್ ನಟಿ ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಕೈ ಜೋಡಿಸಿದ್ದಾರೆ. ಕೆಸಿ ಕರಿಯಪ್ಪ ಅವರು ಹೊರಡಿಸಿದ ಧ್ವನಿಗೆ ಕೈ ಜೋಡಿಸಿರುವ ನಟಿ ರಶ್ಮಿಕಾ ಮಂದಣ್ಣ ಕೈ ಜೋಡಿಸಿ ತಮ್ಮ ಹುಟ್ಟೂರು ಕೊಡಗಿನ ಜನರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.
Vijaya Karnataka Web kichchasudeep1606


ನಟಿ ರಶ್ಮಿಕಾ ಅವರು ತಮ್ಮ ಸೋಷಿಯಾ ಮೀಡಿಯಾ ಪೇಜ್‌ನಲ್ಲಿ "ಯಾವುದೇ ಊರಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಅತ್ಯಗತ್ತಯಗಳಲ್ಲಿ ಒಂದು. ಆದರೆ ನಮ್ಮ ಕೊಡಗಿನಲ್ಲಿ ನಾವು ಅದನ್ನು ಹೊಂದಿಲ್ಲ. ಉತ್ತಮ ಚಿಕಿತ್ಸೆ ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ನಾವು ಒಳ್ಳೆಯ ಹಾಗೂ ಉತ್ತಮ ಆಸ್ಪತ್ರೆ ಹುಡುಕಿಕೊಂಡು ಬಹಳ ದೂರ ಹೋಗಬೇಕಾದ ಪರಿಸ್ಥತಿಯಿದೆ. ಆದಷ್ಟು ಬೇಗ ನಮ್ಮೂರು ಕೊಡಗಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಆದರೆ ನಿಜವಾಗಿಯೂ ನಾಗರೀಕರಿಗೆ ತುಂಬಾ ಸಹಾಯಕವಾಗುತ್ತದೆ..." ಎಂದು ಪೋಸ್ಟ್ ಮಾಡಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ.

ಕೆಸಿ ಕಾರ್ಯಪ್ಪ ಅವರು ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದು, "ನಾವು ಕೊಡಗಿನ ನಾಗರೀಕರು ನಮ್ಮ ವೈದ್ಯಕೀಯ ಅಗತ್ಯಕ್ಕಾಗಿ ಮಂಗಳೂರು ಮತ್ತು ಮೈಸೂರಿನ ಆಸ್ಪತ್ರೆಗಳನ್ನು ಅವಲಂಬಿಸಿದ್ದೇವೆ. ಕೊಡಗಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯಿಲ್ಲದ ಕಾರಣ ಎಲ್ಲ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಕೊಡಗು ಕರ್ನಾಟಕದ ಒಂದು ಭಾಗವೇ ಆಗಿದೆ. ನಾವೂ ಸಹ ಕರ್ನಾಟಕ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತೇವೆ. ನಮಗೆ ಕೂಡ ಮೂಲ ಸೌಕರ್ಯಗಳ ಅಗತ್ಯವಿದೆ. ಕೊಡಗಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯು ತಕ್ಷಣಕ್ಕೆ ಆಗಬೇಕಿದೆ" ಎಂದು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾರ್ಯಪ್ಪ ಅವರು ಮಾಡಿದ ಪೋಸ್ಟ್ ಇದೀಗ ಅಭಿಯಾನದ ರೂಪ ಪಡೆದಿದ್ದು, ಅದಕ್ಕೆ ಕನ್ನಡದ ಸ್ಟಾರ್ ನಟ 'ಕಿಚ್ಚ' ಖ್ಯಾತಿಯ ಸುದೀಪ್ ಬೆಂಬಲ ಸೂಚಿಸಿ ಟ್ವೀಟರ್ ಮಾಡಿದ್ದಾರೆ. "ಹೌದು, ಕೊಡಗಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯ ಅಗತ್ಯ ತುಂಬಾನೇ ಇದೆ. ನಾನು ಕೊಡಗಿನ ಕುಟುಂಬಗಳು ಮತ್ತು ನನ್ನ ಅಭಿಮಾನಿಗಳಿಗೆ ಈ ವಿಷಯಕ್ಕೆ ಸಂಬಂಧಿಸಿ ಸಪೋರ್ಟ್ ಮಾಡುತ್ತೇನೆ. ಕೊಡಗಿನ ಎಲ್ಲರನ್ನೂ ಪ್ರೀತಿಸುತ್ತೇನೆ..." ಎಂದು ಕೊಡಗಿನ ಆಸ್ಪತ್ರೆಯ ಅಗತ್ಯಕ್ಕೆ ಸಂಬಂಧಪಟ್ಟ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ಒಟ್ಟಿನಲ್ಲಿ, ಉತ್ತರ ಕನ್ನಡದಲ್ಲಿ ಆಸ್ಪತ್ರೆಯ ಬಗ್ಗೆ ಶುರುವಾದ ಅಭಿಯಾನ, ಕೊಡಗಿನಲ್ಲಿ ಸಹ ಶುರುವಾಗಿದೆ. ಇದೀಗ ಈ ಅಭಿಯಾನದ ಧ್ವನಿ ಎಲ್ಲ ಕಡೆ ಹುಬ್ಬುತ್ತಿದೆ. ನಿನ್ನೆ ಕೊಡಗಿನ ಆಸ್ಪತ್ರೆಯ ಅಭಿಯಾನಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದ ನಟ ಕಿಚ್ಚ ಸುದೀಪ್, ಇದೀಗ ಉತ್ತರ ಕನ್ನಡ, ಉತ್ತರ ಕರ್ನಾಟಕದಲ್ಲೂ ಆಸ್ಪತ್ರೆಯ ಅಗತ್ಯವಿದೆ ಎಂಬುದನ್ನು ಒಪ್ಪಿ ಅವುಗಳ ಅಭಿಯಾನಕ್ಕೂ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಮುಂದೆ ಈ ಅಭಿಯಾನ ಅಸ್ಪತ್ರೆ ಆಗುವವರೆಗೂ ಮುಂದುವರೆಯುತ್ತೋ ಅಥವಾ ಬೇರೆ ಕೆಲವು ಅಭಿಯಾನಗಳಂತೆ ಸ್ವಲ್ಪ ಕಾಲದಲ್ಲೇ ಮಾಯವಾಗುತ್ತೋ ಎಂಬುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌