ಆ್ಯಪ್ನಗರ

Rishab Shetty:ಸರಸ-ಸಲ್ಲಾಪಕ್ಕೆ ನಾಚಿಕೊಂಡ ರಿಷಭ್ ಶೆಟ್ಟಿ

ನಾಯಕನಾಗಿ ನಟಿಸುತ್ತಿರುವಾಗ ನನಗೆ ಬೇರೆ ನಾಯಕರು ಅನುಭವಿಸುವ ಫಜೀತಿಗಳು ಅರ್ಥವಾಯ್ತು. ನನಗೆ ಮುಖ್ಯವಾಗಿ ಹಾಡುಗಳ ಶೂಟಿಂಗ್‌ ಸಮಯದಲ್ಲಿ ತುಂಬಾ ನಾಚಿಕೆ ಆವರಿಸುತ್ತಿತ್ತು. ನನ್ನ ಹೆಂಡತಿ ಅಲ್ಲೇ ಪಕ್ಕದಲ್ಲಿ ಇರುತ್ತಿದ್ದ ಕಾರಣಕ್ಕೆ ಇನ್ನೂ ಹೆಚ್ಚು ಮುಜುಗರವಾಗುತ್ತಿತ್ತು.

Vijaya Karnataka Web 15 Feb 2019, 5:00 pm
ಸ್ಯಾಂಡಲ್‌ವುಡ್‌ನಲ್ಲಿ ಬಹಳ ನಿರೀಕ್ಷೆ ಮೂಡಿಸಿದ್ದ 'ಬೆಲ್ ಬಾಟಂ' ಚಿತ್ರವು ಇಂದು, ಫೆಬ್ರವರಿ 15, 2019ರಂದು ರಾಜ್ಯಾಂದ್ಯಂತ ತೆರೆ ಕಂಡಿದೆ. ಈ ಚಿತ್ರವನ್ನು 'ಒಲವೇ ಮಂದಾರ' ಖ್ಯಾತಿಯ ಜಯತೀರ್ಥ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿದ್ದು ಹರಿಪ್ರಿಯಾ ನಾಯಕಿ. ಚಿತ್ರವು ಭಾರತದಲ್ಲಿ ಮಾತ್ರವಲ್ಲದೇ ಹೊರಗಡೆ ಕೂಡ ಕೆಲವು ಸೆಂಟರ್ ಗಳಲ್ಲಿ ಬಿಡುಗಡೆ ಆಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ.
Vijaya Karnataka Web rishabh15


'ಬೆಲಂ ಬಾಟಂ' ಚಿತ್ರಕ್ಕೆ ಮೊದಲ ದಿನ ಮೊದಲ ಶೋಗೆ ಪ್ರೇಕ್ಷಕರ ಕಡೆಯಿಂದ ಒಳ್ಳೆಯ ರೆಸ್ಫಾನ್ಸ್ ಬಂದಿದೆ ಎನ್ನಲಾಗಿದೆ. '80 ದಶಕ'ದ ಕಥೆಗೆ ಅಲ್ಲ ರೀತಿಯಿಂದಲೂ ಹೊಂದಾಣಿಕೆ ಆಗುವ ಹಾಗೆ ಕಾಸ್ಟ್ಯೂಮ್ಸ್, ಮೇಕಪ್ ಹಾಗೂ ಲೊಕೇಶನ್ಸ್‌ಗಳ ಆಯ್ಕೆ ಮಾಡಲಾಗಿದ್ದು ಚಿತ್ರ ನೋಡಿ ಬಂದ ಪ್ರೇಕ್ಷಕರು ಅದನ್ನು ಮೆಚ್ಚಿ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಚಿತ್ರದ ಸ್ಕ್ರೀನ್ ಪ್ಲೇ ಕೂಡ ನೋಡಿಸಿಕೊಂಡು ಹೋಗುವ ಹಾಗೆ ಹಿತಮಿತವಾಗಿದ್ದು ಚಿತ್ರದ ನಾಯಕ-ನಾಯಕಿ ಕೂಡ 'ಬೆಲ್ ಬಾಟಂ' ಚಿತ್ರಕ್ಕೆ ಪ್ಲಸ್ ಆಗಿದ್ದಾರೆ ಎನ್ನಲಾಗುತ್ತಿದೆ.

ಈ ಮಧ್ಯೆ ಚಿತ್ರದ ನಾಯಕರಾಗಿ ನಟಿಸಿರುವ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ತಮ್ಮ ಪಾತ್ರ ಹಾಗೂ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. "ನನಗೆ ಕಥೆ ಮತ್ತು ನನ್ನ ಪಾತ್ರ ತುಂಬಾ ಇಷ್ಟವಾಗಿಯೇ ನಾನು ಈ ಸಿನಿಮಾದಲ್ಲಿ ನಟಿಸಿದೆ. ಚಿತ್ರದ ಬೇರೆ ಸನ್ನಿವೇಶಗಳಲ್ಲಿ ಸಹಜವಾಗಿಯೇ ಪಾತ್ರ, ಸನ್ನಿವೇಶಕ್ಕೆ ತಕ್ಕಂತೆ ನಟಿಸುತ್ತಿದ್ದೆ. ಆದರೆ ನಾಯಕಿ ಜೊತೆ ರೊಮಾನ್ಸ್ ಮಾಡುವ ಸಂದರ್ಭದಲ್ಲಿ ನನಗೆ ತುಂಬಾ ಕಷ್ಟವಾಗುತ್ತಿತ್ತು. ಈ ಮೊದಲು ನಾನು, ಹರಿಪ್ರಿಯಾ ಒಟ್ಟಾಗಿ ಕೆಲಸ ಮಾಡಿದ್ದರೂ ಕೂಡ ನಾನು ಅವರ ಜೊತೆ ನಟನೆ ಮಾಡುವಾಗ ಸಹಜವಾಗಿರಲು ಸಾಧ್ಯವಾಗುತ್ತಿರಲಿಲ್ಲ" ಎಂದಿದ್ದಾರೆ ರಿಷಭ್ ಶೆಟ್ಟಿ.

ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವಾಗ ನನಗೆ ಬೇರೆ ನಾಯಕರು ಅನುಭವಿಸುವ ಫಜೀತಿಗಳು ಅರ್ಥವಾಯ್ತು. ನನಗೆ ಮುಖ್ಯವಾಗಿ ಹಾಡುಗಳ ಶೂಟಿಂಗ್‌ ಸಮಯದಲ್ಲಿ ತುಂಬಾ ನಾಚಿಕೆ ಆವರಿಸುತ್ತಿತ್ತು. ನನ್ನ ಹೆಂಡತಿ ಅಲ್ಲೇ ಪಕ್ಕದಲ್ಲಿ ಇರುತ್ತಿದ್ದ ಕಾರಣಕ್ಕೆ ಇನ್ನೂ ಹೆಚ್ಚು ಮುಜುಗರವಾಗುತ್ತಿತ್ತು. ಅವರು ಬೇರೆ 'ಇನ್ನೂ ಚೆನ್ನಾಗಿ ಮಾಡು' ಎಂದು ರೊಮ್ಯಾಂಟಿಕ್ ಸನ್ನಿವೇಶದ ಚಿತ್ರೀಕರಣದ ವೇಳೆ ಕಾಲೆಳೆಯುತ್ತಿದ್ದರು. ನನ್ನ ಫಜೀತಿ ಯಾರಿಗೂ ಬೇಡ. ಈಗ ನೆನಪಿಸಿಕೊಂಡರೆ ನನಗೇ ನಗು ತಡೆಯಲಾಗುವುದಿಲ್ಲ" ಎಂದಿದ್ದಾರೆ 'ಬೆಲ್ ಬಾಟಂ ನಾಯಕ ರಿಷಭ್ ಶೆಟ್ಟಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌