ಆ್ಯಪ್ನಗರ

ಡ್ರಗ್ ಕೇಸ್‌ನಲ್ಲಿ ಸಾರಾ ಅಲಿ ಖಾನ್‌: ಮಗಳಿಂದ ಅಂತರ ಕಾಯ್ದುಕೊಂಡ ಸೈಫ್ ಅಲಿ ಖಾನ್‌?

ಡ್ರಗ್ ಮಾಫಿಯಾ ಕೇಸ್‌ನಲ್ಲಿ ಈಗ ನಟಿ ಸಾರಾ ಅಲಿ ಖಾನ್ ಹೆಸರು ಕೇಳಿಬಂದಿದೆ. ಅಲ್ಲದೆ, ಎನ್‌ಸಿಬಿ ಅಧಿಕಾರಿಗಳು ಅವರನ್ನು ಒಮ್ಮೆ ವಿಚಾರಣೆಗೂ ಒಳಪಡಿಸಿದ್ದಾರೆ. ಆದರೆ, ಈ ಮಧ್ಯೆ ಸೈಫ್ ಮಾತ್ರ ಮಗಳ ನೆರವಿಗೆ ನಿಲ್ಲುತ್ತಿಲ್ಲ ಎಂಬ ಮಾತು ಕೇಳಿಬಂದಿದೆ!

Vijaya Karnataka Web 29 Sep 2020, 11:49 am
ಬಾಲಿವುಡ್‌ ಡ್ರಗ್‌ ಕೇಸ್‌ನಲ್ಲಿ ಈಗ ಘಟಾನುಘಟಿ ಕಲಾವಿದರ ಹೆಸರುಗಳು ಕೇಳಿಬರುತ್ತಿವೆ. ಕೆಲ ದಿನಗಳ ಹಿಂದೆ ರಾಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಅವರಂತಹ ಸ್ಟಾರ್ ನಟಿಯರನ್ನು ಕರೆಯಿಸಿ, ವಿಚಾರಣೆ ಮಾಡಿದ್ದಾರೆ ಎನ್‌ಸಿಬಿ ಅಧಿಕಾರಿಗಳು. ಅಚ್ಚರಿ ಎಂದರೆ, ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಹೆಸರು ಕೂಡ ಡ್ರಗ್ ಜಾಲದಲ್ಲಿ ಕೇಳಿಬಂದಿದೆ. ಅವರನ್ನೂ ಸಹ ಎನ್‌ಸಿಬಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಆದರೆ, ಈ ಮಧ್ಯೆ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ, ಡ್ರಗ್ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಮಗಳ ರಕ್ಷಣೆಗೆ ಸೈಫ್ ಮುಂದಾಗುತ್ತಿಲ್ಲವಂತೆ!
Vijaya Karnataka Web actor saif ali khan refuse to help daughter sara ali khan in drug case
ಡ್ರಗ್ ಕೇಸ್‌ನಲ್ಲಿ ಸಾರಾ ಅಲಿ ಖಾನ್‌: ಮಗಳಿಂದ ಅಂತರ ಕಾಯ್ದುಕೊಂಡ ಸೈಫ್ ಅಲಿ ಖಾನ್‌?


ಸೈಫ್ ಮೊದಲ ಪತ್ನಿ ಮಗಳು ಸಾರಾ
ತಮಗಿಂತ 12 ವರ್ಷ ಹಿರಿಯರಾದ ನಟಿ ಅಮೃತಾ ಸಿಂಗ್ ಅವರನ್ನು ಸೈಫ್‌ 1991ರಲ್ಲಿ ಮದುವೆ ಆಗಿದ್ದರು. ಆಗಿನ್ನೂ ಸೈಫ್‌ಗೆ 21 ವರ್ಷ! ಈ ದಂಪತಿಯ ಮಗಳೇ ಸಾರಾ ಅಲಿ ಖಾನ್‌. 2004ರಲ್ಲಿ ಅಮೃತಾರಿಂದ ಸೈಫ್‌ ವಿಚ್ಛೇದನ ಪಡೆದುಕೊಂಡರು. 2012ರಲ್ಲಿ ನಟಿ ಕರೀನಾ ಕಪೂರ್ ಜೊತೆ ಸಂಸಾರ ಶುರು ಮಾಡಿದರು. ಆದರೆ, ಮೊದಲ ಪತ್ನಿಯ ಮಕ್ಕಳ ಮೇಲೆ ಅವರಿಗೆ ಅಪಾರ ಪ್ರೀತಿ ಇದೆ ಅನ್ನೋದಂತು ಸುಳ್ಳಲ್ಲ. ಕರೀನಾ ಕೂಡ ಸಾರಾ ಮತ್ತು ಇಬ್ರಾಹಿಂ ಅಲಿ ಖಾನ್‌ರನ್ನು ಸ್ವಂತ ಮಕ್ಕಳಂತೆ ಪ್ರೀತಿ ಮಾಡುತ್ತಾರೆ. ಈಗ ಡ್ರಗ್‌ ಕೇಸ್‌ನಲ್ಲಿ ಸಾರಾ ಹೆಸರು ಕೇಳಿಬಂದಿದೆ. ಆದರೆ, ಮಗಳಿಗೆ ಸಹಾಯ ಮಾಡಲು ಸೈಫ್ ಮುಂದಾಗುತ್ತಿಲ್ಲ! ಬದಲಿಗೆ, ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ!

ಅಮೃತಾ ಜೊತೆ ವಾಗ್ವಾದ ಮಾಡಿದರೇ ಸೈಫ್?
ಸದ್ಯ ಹೀಗೊಂದು ಮಾತು ಹರಿದಾಡುತ್ತಿದೆ. ಮಕ್ಕಳನ್ನು ಸರಿಯಾಗಿ ಬೆಳೆಸಿಲ್ಲ ಎಂದು ಅಮೃತಾ ಮೇಲೆ ಸೈಫ್ ಕೋಪ ಮಾಡಿಕೊಂಡು, ಕೂಗಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಡ್ರಗ್ ಪ್ರಕರಣದಲ್ಲಿ ಸಾರಾ ಹೆಸರು ಕೇಳಿಬಂದಿರುವುದರಿಂದ, ಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಪತ್ನಿ ಕರೀನಾ ಹಾಗೂ ಮಗ ತೈಮೂರ್ ಅಲಿ ಖಾನ್ ಜೊತೆಗೆ ಅವರು ದೆಹಲಿಗೆ ತೆರಳಿದ್ದಾರಂತೆ. ಕರೀನಾ ಈಗ ಗರ್ಭಿಣಿ ಆಗಿದ್ದು, ಅವರಿಗೆ ದೆಹಲಿಯಲ್ಲಿ 'ಲಾಲ್‌ ಸಿಂಗ್ ಛಡ್ಡಾ' ಸಿನಿಮಾದ ಶೂಟಿಂಗ್ ಇದೆ. ಹಾಗಾಗಿ, ಅವರೊಂದಿಗೆ ಸೈಫ್‌ ಕೂಡ ದೆಹಲಿಗೆ ಹೋಗಿದ್ದಾರೆ ಎನ್ನಲಾಗಿದೆ.

ದೀಪಿಕಾ ಪಡುಕೋಣೆ- ಸಾರಾ ಅಲಿ ಖಾನ್‌ಗೆ NCB ನೋಟಿಸ್‌! ಮುಂಬೈಗೆ ಬಂದಿಳಿದ ನಟಿಯರು

ಸೆ.26ರಂದು ಸಾರಾ ಅವರನ್ನು ಎನ್‌ಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ಈ ವೇಳೆ ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದ ಅಧಿಕಾರಿಗಳು ಸಾರಾಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಆದರೆ, ಸಾರಾ ಮಾತ್ರ, 'ತಾನು ಡ್ರಗ್ಸ್‌ ಸೇವಿಸಿಲ್ಲ' ಎಂದು ಸ್ಪಷ್ಟವಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರಂತೆ!

ಪ್ರೀತಿಯಲ್ಲಿ ಸುಶಾಂತ್‌ ನಿಯತ್ತಾಗಿ ಇರಲಿಲ್ಲ! ಇಂಥ ಆರೋಪ ಹೊರಿಸಿದ್ರಾ ಸಾರಾ ಅಲಿ ಖಾನ್‌?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌