ಆ್ಯಪ್ನಗರ

ಸರಕಾರಿ ಶಾಲಾ ಶೌಚಾಲಯಗಳ ದುರಸ್ಥಿಗೆ ಕೈ ಹಾಕಿದ ನಟ ಸೂರ್ಯ

ಸೆಲೆಬ್ರಿಟಿಗಳು ಕೇವಲ ಸಾಮಾಜಿಕ ಮಾಧ್ಯಮಗಳಲ್ಲಷ್ಟೇ ಅಲ್ಲ, ಸಮಾಜ ಸೇವೆಯನ್ನೂ ಮುಂದಿರುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಇನ್ನೊಂದು ಉದಾಹರಣೆ.

Samayam Tamil 25 Jul 2018, 6:58 pm
ಸೆಲೆಬ್ರಿಟಿಗಳು ಕೇವಲ ಸಾಮಾಜಿಕ ಮಾಧ್ಯಮಗಳಲ್ಲಷ್ಟೇ ಅಲ್ಲ, ಸಮಾಜ ಸೇವೆಯನ್ನೂ ಮುಂದಿರುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಇನ್ನೊಂದು ಉದಾಹರಣೆ. ಕಾಲಿವುಡ್ ನಟ ಸೂರ್ಯ ತಮ್ಮ 43ನೇ ಹುಟ್ಟುಹಬ್ಬದ ನಿಮಿತ್ತ ಮಹತ್ವದ ಕೆಲಸಕ್ಕೆ ಕೈಹಾಕಿದ್ದಾರೆ.
Vijaya Karnataka Web surya


ಸರಕಾರಿ ಶಾಲೆಗಳು ಎಂದರೇನೇ ಶಾಲಾ ಕಟ್ಟಡ, ಶೌಚಾಲಯಗಳ ದುಸ್ಥಿತಿಯ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಹಾಗಾಗಿ ಅವರು ತಮ್ಮ ಹುಟ್ಟುಹಬ್ಬವನ್ನು ಭಿನ್ನವಾಗಿ ಸೆಲೆಬ್ರೇಟ್ ಮಾಡಿಕೊಳ್ಳಲು ನಿರ್ಧರಿಸಿದ್ದು ತಮಿಳುನಾಡು ಸರಕಾರಿ ಶಾಲೆಗಳಲ್ಲಿನ 400 ಶೌಚಾಲಯಗಳನ್ನು ದುರಸ್ಥಿಗೊಳಿಸಲು ಮುಂದಾಗಿದ್ದಾರೆ.

ಈ ಮಹತ್ವದ ಕಾರ್ಯವನ್ನು ಅವರು ತಮ್ಮ ಅಗರಂ ಫೌಂಡೇಷನ್ ಮೂಲಕ ಮಾಡಲಿದ್ದಾರೆ. 2006ರಲ್ಲಿ ಆರಂಭವಾದ ಈ ಫೌಂಡೇಷನ್ ತಮಿಳುನಾಡಿನ ಯುವಜನರ ಕನಸುಗಳಿಗೆ ನೀರೆರೆಯುತ್ತಾ ಬಂದಿದೆ. ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಭೇದಭಾವ ಇಲ್ಲದಂತೆ ಎಲ್ಲರಿಗೂ ಅತ್ಯುತ್ತಮ ಶಿಕ್ಷಣವನ್ನು ಈ ಫೌಂಡೇಷನ್ ನೀಡುತ್ತಿದೆ.

ಇತ್ತೀಚೆಗಷ್ಟೇ ಸೂರ್ಯ ತಮಿಳುನಾಡಿನ ರೈತರ ಕ್ಷೇಮಾವೃದ್ಧಿಗಾಗಿ 'ಕಡೈಕುಟ್ಟಿ ಸಿಂಗಂ' ಸಿನಿಮಾ ಮೂಲಕ ಬಂದ ಲಾಭದಲ್ಲಿ 1 ಕೋಟಿ ರೂ.ಗಳನ್ನು ದಾನವಾಗಿ ನೀಡಿದ್ದಾರೆ. ಸದ್ಯಕ್ಕೆ ಅವರು ಸಾಯಿ ಪಲ್ಲವಿ ಹೀರೋಯಿನ್ ಆಗಿರುವ NGK ಎಂಬ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌