ಆ್ಯಪ್ನಗರ

'ದಿ ವಿಲನ್'ಗೆ ಅಡಿಯಿಟ್ಟ ಬೆಡಗಿ ಎಮಿ ಜಾಕ್ಸನ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ 'ದಿ ವಿಲನ್' ಚಿತ್ರಕ್ಕೆ ಹೀರೋಯಿನ್ ಎಂಟ್ರಿಕೊಟ್ಟಿದ್ದಾರೆ. ಬಾಲಿವುಡ್ ಹಾಗೂ ತೆಲುಗು, ತಮಿಳು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಈ ಬ್ರಿಟೀಷ್ ರೂಪದರ್ಶಿ ಕಮ್ ತಾರೆ ಇದೀಗ ಕನ್ನಡದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ವಿಕ ಸುದ್ದಿಲೋಕ 21 Jun 2017, 4:22 pm
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ 'ದಿ ವಿಲನ್' ಚಿತ್ರಕ್ಕೆ ಹೀರೋಯಿನ್ ಎಂಟ್ರಿಕೊಟ್ಟಿದ್ದಾರೆ. ಬಾಲಿವುಡ್ ಹಾಗೂ ತೆಲುಗು, ತಮಿಳು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಈ ಬ್ರಿಟೀಷ್ ರೂಪದರ್ಶಿ ಕಮ್ ತಾರೆ ಇದೀಗ ಕನ್ನಡದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
Vijaya Karnataka Web actress amy jackson joins the villain team in thailand
'ದಿ ವಿಲನ್'ಗೆ ಅಡಿಯಿಟ್ಟ ಬೆಡಗಿ ಎಮಿ ಜಾಕ್ಸನ್


ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಥೈಲ್ಯಾಂಡ್‌ನ ಕ್ರಬಿಯಲ್ಲಿ ನಡೆಯುತ್ತಿದೆ. ಕಿಚ್ಚ ಸುದೀಪ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಅಲ್ಲೇ ಎಮಿ ಜಾಕ್ಸನ್ ಸಹ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಒಟ್ಟಾರೆ ಒಬ್ಬ ಟಾಪ್ ಹೀರೋಯಿನ್ ಕನ್ನಡಕ್ಕೆ ಕರೆತಂದಿರುವುದು ವಿಶೇಷ.

ಪ್ರೇಮ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಅಪಾರ ಕುತೂಹಲ ಕೆರಳಿಸಿದ್ದು ಆರಂಭದಿಂದಲೂ ಒಂದಲ್ಲ ಒಂದು ಸುದ್ದಿ ಮಾಡುತ್ತಲೇ ಇದೆ. ಈ ಚಿತ್ರದ ಕ್ಯಾಪ್ಷನ್ 'ರಾಮ್ ಆರ್ ರಾವಣ್' ಎಂದಿದ್ದು 'ದಾರಿ ತಪ್ಪಿದ ಮಗ' ಚಿತ್ರದ ಕಥೆಯ ತರಹದ್ದೇ ಕಥೆ ಎನ್ನುತ್ತಿವೆ ಮೂಲಗಳು.

ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಎಂದರೆ, ಈ ಸಿನಿಮಾ ಮೂಲಕ ಡಿಸ್ಕೋ ಡ್ಯಾನ್ಸರ್ ಖ್ಯಾತಿಯ ಮಿಥುನ್ ಚಕ್ರವರ್ತಿ ಕನ್ನಡಕ್ಕೆ ಬರುತ್ತಿರುವುದು. ಶಿವರಾಜ್ ಕುಮಾರ್ ಹಾಗು ಸುದೀಪ್ ಅವರ ಲುಕ್ ಚಿತ್ರದ ಪ್ರಮುಖ ಹೈಲೈಟ್ ಎನ್ನಬಹುದು.

ಶಿವರಾಜ್ ಕುಮಾರ್ ವಿದೇಶದಲ್ಲಿದ್ದರೆ ಸುದೀಪ್ ಕರ್ನಾಟಕದಲ್ಲಿರುತ್ತಾರೆ, ಇವರಿಬ್ಬರೂ ಹೇಗೆ ಮೀಟ್ ಮಾಡುತ್ತಾರೆ ಎಂಬುದು ಚಿತ್ರದ ತಿರುಳು ಎನ್ನುತ್ತವೆ ಮೂಲಗಳು. ಒಟ್ಟಾರೆ ಎಮಿ ಜಾಕ್ಸನ್ ಮೂಲಕ ಚಿತ್ರತಂಡಕ್ಕೆ ಇನ್ನಷ್ಟು ಹುರುಪು ಬಂದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌