ಆ್ಯಪ್ನಗರ

ಪ್ರಭಾಸ್‍ರನ್ನು ಮದುವೆಯಾಗುತ್ತೇನೆ ಎಂದ ನಟಿ ಕಾಜಲ್ ಅಗರವಾಲ್

ನಟಿ ಕಾಜಲ್ ಅಗರವಾಲ್ ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಹೇಳಿದ್ದಾರೆ. ದೇವರಲ್ಲಿ ಭಕ್ತಿ ಹೆಚ್ಚಾಗಿರಬೇಕು, ತನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಶೀಘ್ರದಲ್ಲೇ ತನ್ನ ಮದುವೆ ಬಗ್ಗೆ ಎಲ್ಲರಿಗೂ ತಿಳಿಸುತ್ತೇನೆ ಎಂದಿದ್ದಾರೆ.

Vijaya Karnataka Web 29 Oct 2019, 4:45 pm
ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಮದುವೆ ಬಗ್ಗೆ ಇದುವರೆಗೂ ಸಾಕಷ್ಟು ಗಾಸಿಪ್ ಸುದ್ದಿಗಳು ಸದ್ದು ಮಾಡಿವೆ. ಮುಖ್ಯವಾಗಿ ಬಾಹುಬಲಿ ಹೀರೋಯಿನ್ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬುದೇ ಸುದ್ದಿಯಾಗಿಯಾಗಿತ್ತು. ಈ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸಿದ್ದರು ಕೂಡ.
Vijaya Karnataka Web kajal-aggarwal


ಪ್ರಭಾಸ್ ಸ್ವಲ್ಪ ಕಟುವಾಗಿಯೇ ಉತ್ತರ ನೀಡಿದ್ದರು. "ನಮ್ಮಿಬ್ಬರ ನಡುವೆ ಅಂತಹದ್ದೇನಾದರೂ ಇದ್ದರೆ ಎರಡು ವರ್ಷಗಳ ಕಾಲ ಮುಚ್ಚಿಡುವ ಅಗತ್ಯವಿಲ್ಲ. ನಾವಿಬ್ಬರೂ 11 ವರ್ಷಗಳಿಂದ ಒಳ್ಳೆಯ ಗೆಳೆಯರಾಗಿದ್ದೇವೆ. ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ರಹಸ್ಯವಾಗಿಡುವ ಅಗತ್ಯವಿಲ್ಲ. ಈ ಬಗ್ಗೆ ಎಷ್ಟೇ ಹೇಳಿದರೂ ಗಾಳಿಸುದ್ದಿಗಳು ಮಾತ್ರ ನಿಲ್ಲುವಂತಿಲ್ಲ" ಎಂದಿದ್ದರು.

ಹಾಲಿವುಡ್‌ಗೆ ಹಾರಲು ಸಜ್ಜಾದ ಸುಂದರಿ ಕಾಜಲ್ ಅಗರವಾಲ್
ವಿಷಯ ಹೀಗಿರಬೇಕಾದರೆ ಇದೀಗ ಕಾಜಲ್ ಅಗರವಾಲ್ ಪ್ರಭಾಸ್‌ರನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ. ತೆಲುಗು ನಟ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮಿ ನಿರೂಪಣೆಯ ಶೋನಲ್ಲಿ ಈ ರೀತಿ ಹೇಳಿದ್ದಾರೆ.

ಮಂಚು ಲಕ್ಷ್ಮಿ ಕೆಲವೊಂದು ಕುತೂಹಲಕರವಾದ ಪ್ರಶ್ನೆಗಳನ್ನು ತನ್ನ ಶೋನಲ್ಲಿ ಕೇಳುತ್ತಿದ್ದಾರೆ. ಮದುವೆ ಪ್ರಯತ್ನದಲ್ಲಿ ಇದ್ದೀರಾ ಎಂದು ಕಾಜಲ್‍ರನ್ನು ಕೇಳಿದ್ದಕ್ಕೆ, ಹೌದು ಶೀಘ್ರದಲ್ಲೇ ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಮಾಸ್ಟರ್ ಹಿರಣ್ಣಯ್ಯ ಅವರನ್ನು ಸ್ಮರಿಸಿದ ನಟಿ ಕಾಜಲ್ ಅಗರವಾಲ್
ರಾಮ್ ಚರಣ್, ತಾರಕ್, ಪ್ರಭಾಸ್ ಇವರಲ್ಲಿ ಯಾರನ್ನು ಕೊಲ್ಲುತ್ತೀರಿ? ಯಾರೊಂದಿಗೆ ರಿಲೇಷನ್‌ನಲ್ಲಿ ಇರುತ್ತೀರಿ? ಯಾರನ್ನು ಮದುವೆಯಾಗುತ್ತೀರಿ? ಎಂದು ಮಂಚು ಲಕ್ಷ್ಮಿ ತಮಾಷೆಗೆ ಕೇಳಿದ್ದಕ್ಕೆ ಅಷ್ಟೇ ತಮಾಷೆಯಾಗಿ ರಾಮ್ ಚರಣ್‌ರನ್ನು ಕೊಲ್ಲುತ್ತೇನೆ, ತಾರಕ್ ಜತೆಗೆ ರಿಲೇಷನ್‍ಶಿಪ್‍ನಲ್ಲಿರುತ್ತೇನೆ, ಪ್ರಭಾಸ್‌ರನ್ನು ವರಿಸುತ್ತೇನೆ ಎಂದಿದ್ದಾರೆ.

ರಾಮ್ ಚರಣ್ ಹಾಗೂ ಎನ್ಟಿಆರ್‌ಗೆ ಈಗಾಗಲೆ ಮದುವೆಯಾಗಿದೆ, ಹಾಗಾಗಿ ಮೋಸ್ಟ್ ಎಲಿಜಿಬಲ್ ಆಗಿ ಬ್ಯಾಚ್ಯುಲರ್ ಪ್ರಭಾಸ್ ಕಾಣಿಸಿದ ಕಾರಣ ಕಾಜಲ್ ಅವರಿಗೆ ಮಣೆ ಹಾಕಿದ್ದಾರೆ. ಅಂದಹಾಗೆ ಈ ಮೂವರು ಹೀರೋಯಿನ್‌ಗಳ ಜತೆಗೆ ಕಾಜಲ್ ನಟಿಸಿದ್ದಾರೆ. ರಾಮ್ ಚರಣ್ ಜತೆಗೆ ಮಗಧೀರ, ಎನ್‌ಟಿಆರ್ ಜತೆಗೆ ಬೃಂದಾವನಂ ಹಾಗೂ ಪ್ರಭಾಸ್‌ರೊಂದಿಗೆ ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್ ಚಿತ್ರಗಳಲ್ಲಿ ಕಾಜಲ್ ಅಭಿನಯಿಸಿದ್ದಾರೆ. ಈ ಚಿತ್ರಗಳೆಲ್ಲಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಮಾಡಿವೆ.

ರೋಹಿತ್‌ ಶರ್ಮಾಗೆ ಮನಸೋತ ನಟಿ ಕಾಜಲ್ ಅಗರ್‌ವಾಲ್
ಕಾಜಲ್ ಮದುವೆಯಾಗುವ ಹುಡುಗ ಹೀಗಿರಬೇಕಂತೆ
ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಶೀಘ್ರದಲ್ಲೇ ಮದುವೆ ಬಗ್ಗೆ ಎಲ್ಲರಿಗೂ ತಿಳಿಸುತ್ತೇನೆ. ಅದಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿವೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿಯೇ ನನಗೆ ಗಂಡನಾಗಿ ಬರಬೇಕು. ಅಷ್ಟೇ ಅಲ್ಲ ಆತನಿಗೆ ಭಕ್ತಿ ಹೆಚ್ಚಾಗಿರಬೇಕು. ಯಾಕೆಂದರೆ ನನಗೆ ದೈವಭಕ್ತಿ ಜಾಸ್ತಿ. ಆತನಲ್ಲಿ ಅದಕ್ಕಿಂತಲೂ ಹೆಚ್ಚಾಗಿ ಇರಬೇಕೆಂದು ಇಷ್ಟಪಡುತ್ತೇನೆ. ಎಲ್ಲಿಗೇ ಶೂಟಿಂಗೆ ಹೋದರೂ ನಾನು ಶಿವನ ಸಣ್ಣ ವಿಗ್ರಹವನ್ನು ಕೊಂಡೊಯ್ಯುತ್ತೇನೆ ಎಂದಿದ್ದಾರೆ ಕಾಜಲ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌