ಆ್ಯಪ್ನಗರ

ಅವಹೇಳನ ಮಾಡಿದ ರಾಧಾ ರವಿಗೆ ನಯನತಾರಾ ಖಡಕ್ ತಿರುಗೇಟು

ನಟಿ ನಯನತಾರಾ ಅವರು ತಮ್ಮನ್ನು ಅವಹೇಳನ ಮಾಡಿದ್ದ ನಟ ರಾಧಾ ರವಿ ಅವರನ್ನು ಪಕ್ಷದಿಂದ ವಜಾ ಮಾಡಿರುವ ಕಾರಣಕ್ಕೆ ಡಿಎಂಕೆ ಜನರಲ್ ಸೆಕ್ರೆಟರಿ ಕೆ ಅಭಾಂಜಗನ್ ಅವರಿಗೆ ಅಭಿನಂದನೆ ಹೇಳಿದ್ದಾರೆ.

Vijaya Karnataka Web 25 Mar 2019, 6:28 pm
ಡಿಎಂಕೆ ನಾಯಕ ಹಾಗೂ ನಟ ರಾಧಾ ರವಿ ಅವರನ್ನು ಆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿರುವ ಸಂಗತಿ ಗೊತ್ತೇ ಇದೆ. ಇದೀಗ ಸಿಕ್ಕ ಹೊಸ ಸುದ್ದಿ ಏನೆಂದರೆ, ನಟಿ ನಯನತಾರಾ ಅವರು ತಮ್ಮನ್ನು ಅವಹೇಳನ ಮಾಡಿದ್ದ ನಟ ರಾಧಾ ರವಿ ಅವರನ್ನು ಪಕ್ಷದಿಂದ ವಜಾ ಮಾಡಿರುವ ಕಾರಣಕ್ಕೆ ಡಿಎಂಕೆ ಜನರಲ್ ಸೆಕ್ರೇಟರಿ ಕೆ ಅಭಾಂಜಗನ್ ಅವರಿಗೆ ಅಭಿನಂದನೆ ಹೇಳಿದ್ದಾರೆ. ಈ ಬಗ್ಗೆ ಪತ್ರ ಬರೆದಿರುವ ನಟಿ ನಯನತಾರಾ ಅವರು 'ಮಹಿಳೆಯರನ್ನು ಕೇವಲವಾಗಿ ನೋಡುವ ಪುರುಷರಿಗೆ ಟಾಂಗ್ ಕೊಟ್ಟಿದ್ದು, ರಾಧಾ ರವಿಗೆ ಆಗಿರುವ ಗತಿ ಎಲ್ಲರಿಗೂ ಪಾಠವಾಗಲಿ' ಎಂಬರ್ಥದಲ್ಲಿ ಬರೆದಿದ್ದಾರೆ.
Vijaya Karnataka Web nayanatara2503


ಹೆಣ್ಣು ಮಕ್ಕಳ ಬಗ್ಗೆ ನಟ ರಾಧಾ ರವಿ ಅವರು ಅವಕಾಶ ಸಿಕ್ಕಾಗಲೆಲ್ಲ ಕೀಳು ಮಟ್ಟದ ಕಾಮೆಂಟ್ಸ್‌ಗಳನ್ನು ಮಾಡುತ್ತಾರೆ. ಅವರಿಗೆ ಸಾಕಷ್ಟು ರೀತಿಯಲ್ಲಿ ಜಾಗೃತಿ ಮೂಡಿಸಿದ್ದರೂ ಅವರು ಪದೇ ಪದೇ ಮಾಡಿದ ತಪ್ಪನ್ನೇ ಮಾಡುತ್ತಾರೆ. ಈ ಸಾರಿ ನನ್ನ ಪರವಾಗಿ ನಿಂತು ಅವರಿಗೆ ತಕ್ಕ ಶಾಸ್ತಿ ಮಾಡಿದ್ದಕ್ಕಾಗಿ ನಾನು ಸಂಬಂಧಪಟ್ಟವರನ್ನು ಅಭಿನಂದಿಸುತ್ತೇನೆ. ನನಗೆ ನಟಿಯಾಗಿ ದೇವತೆ, ದೆವ್ವ, ಮಗಳು, ತಾಯಿ, ಭಿಕ್ಷುಕಿ ಹೀಗೆ ವಿಭಿನ್ನ ಪಾತ್ರಗಳನ್ನು ಮಾಡುವ ಅವಕಾಶ ಕೊಟ್ಟ ಎಲ್ಲರಿಗೂ ನಾನು ಈ ಮೂಲಕ ಧನ್ಯವಾದ ಹೇಳುತ್ತೇನೆ" ಎಂದಿದ್ದಾರೆ ನಟಿ ನಯನತಾರಾ.

ಅಂದಹಾಗೆ, ನಟಿ ನಯನತಾರಾ ಅವರ ಸಿನಿಮಾ 'ಕೊಲಯುತೀರ್ ಕಾಲಮ್' ಚಿತ್ರದ ಟ್ರೇಲರ್ ನೋಡಿ ನಟ ರಾಧಾ ರವಿ ಅವರು ನಟಿ ನಯನತಾರಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಈ ಸಂಬಂಧ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿದೆ ಎನ್ನಲಾಗಿದೆ. ಡಿಎಂಕೆ ಜನರಲ್ ಸೆಕ್ರೇಟರಿ ಕೆ ಅಭಾಂಜಗನ್ ಅವರು ನಟ ರಾಧಾ ರವಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ. 'ಅಶಿಸ್ತು ಉಲ್ಲಂಘನೆ' ಆರೋಪದಡಿ ಅವರನ್ನು ಪಕ್ಷದ ಸದಸ್ಯತ್ವದಿಂದ ಕಿತ್ತು ಹಾಕಲಾಗಿದೆ.

ನಟಿ ನಯನತಾರಾ ಅವರು 'ಕೊಲಯುತೀರ್ ಕಾಲಮ್' ಚಿತ್ರದಲ್ಲಿ ದೆವ್ವ ಹಾಗು ದೇವಿ ಎರಡೂ ಪಾತ್ರದಲ್ಲಿ ನಟಿಸಿದ್ದಾರೆ. ದೇವಿ ಸೀತೆ ಹಾಗೂ ದೆವ್ವ ಎರಡೂ ಪಾತ್ರದಲ್ಲಿ ನಟಿಸಿರುವ ನಟಿ ನಯನತಾರಾ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅದನ್ನು ನೋಡಿದ ರಾಧಾ ರವಿ "ಈಗ ಯಾರನ್ನು ಬೇಕಾದರೂ ದೇವತೆ ಪಾತ್ರದಲ್ಲಿ ನಟಿಸಲು ಆಯ್ಕೆ ಮಾಡಬಹುದು. ಮೊದಲು ಹೀಗಿರಲಿಲ್ಲ. ಕೆಆರ್ ವಿಜಯಾ ಅವರಂಥ ಶ್ರೇಷ್ಠ ಕಲಾವಿದೆ ಮಾತ್ರ ಅಂಥ ಘನತೆವೆತ್ತ ಪಾತ್ರ ಮಾಡುತ್ತಿದ್ದರು. ಈಗ, ಯಾರಿಗೆ ಯಾರನ್ನು ನೋಡಿದರೆ ಕೈಮುಗಿಯಬೇಕು ಎನಿಸುತ್ತದೆಯೋ ಅವರು ಅಂಥವರನ್ನೇ ದೇವತೆ ಪಾತ್ರ ಕೊಟ್ಟು ಪೂಜಿಸಲು ಸಿದ್ಧರಾಗಿದ್ದಾರೆ" ಎಂದು ರವಿ ನಯನತಾರಾ ಬಗ್ಗೆ ಕಾಮೆಂಟ್ ಮಾಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಆ ಕಾಮೆಂಟ್ ನೋಡಿದ ಸಿಂಗರ್ ಚಿನ್ಮಯಿ ಶ್ರೀಪಾದ್ ಮತ್ತು ನಟಿ ವರಲಕ್ಷ್ಮಿ ಅವರು ಈ ಬಗ್ಗೆ ಡಿಎಂಕೆ ಪಕ್ಷದ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲ, "ತಾಕತ್ತಿದ್ದರೆ ನೀವು ಇಂಥವರನ್ನು ನಿಮ್ಮ ಪಕ್ಷದಿಂದ ಉಚ್ಚಾಟಿಸಿ ನೋಡೋಣ. ಯಾಕೆಂದರೆ, ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡುವ ಹಕ್ಕನ್ನು ಅಂಥವರಿಗೆ ಕೊಟ್ಟಿದ್ದು ಯಾರು? ಅಷ್ಟಕ್ಕೂ ಮಹಿಳೆ ಬಗ್ಗೆ ಯಾರು ಏನು ಬೇಕಾದರೂ ಹೇಳಬಹುದೇ" ಎಂದು ಕೇಳುವ ಮೂಲಕ ನಟಿ ವರಲಕ್ಷಿ ಮತ್ತು ಚಿನ್ಮಯಿ ಶ್ರೀಪಾದ್ ಅವರಿಬ್ಬರೂ ಸಂಬಂಧಫಟ್ಟ ಡಿಎಂಕೆ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೀಗಾಗಿ, ಡಿಎಂಕೆ ನಾಯಕ ಹಾಗೂ ನಟ ರಾಧಾ ರವಿ ಅವರನ್ನು ಆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಅಂದಹಾಗೆ, ಕೆಲವು ತಿಂಗಳುಗಳ ಹಿಂದೆ, ಸಿಂಗರ್ ಮತ್ತು ಡಬ್ಬಿಂಗ್ ಆರ್ಟಿಸ್ಟ್ ಚಿನ್ಮಯಿ ಅವರನ್ನು 'ತಮಿಳು ನಾಡು ಡಬ್ಬಿಂಗ್ ಯೂನಿಯನ್ ಮುಖಂಡ'ರಾಗಿದ್ದ ರಾಧಾ ರವಿ ಅವರು ಬ್ಯಾನ್ ಮಾಡಿದ್ದರು. ಈ ಸೇಡನ್ನು ತೀರಿಸಿಕೊಂಡರು ಎಂಬಂತೆ ಈಗ ನಟ ರಾಧಾ ರವಿ ಅವರನ್ನು ಡಿಎಂಕೆ ಪಕ್ಷದಿಂದ ಕಿತ್ತುಹಾಕಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌