ಆ್ಯಪ್ನಗರ

'ಪರಿಮಳ ಲಾಡ್ಜ್' ರೂಮ್ ನಂಬರ್ 231 ನಟಿ ರಮ್ಯಾ ಪ್ರತ್ಯಕ್ಷ

ಇಷ್ಟು ದಿನಗಳ ಕಾಲ ನಟಿ ರಮ್ಯಾ ಸುಳಿವೇ ಇರಲಿಲ್ಲ. ಸಾಮಾಜಿಕ ಮಾಧ್ಯಮದಿಂದಲೂ ದೂರ ಉಳಿದಿದ್ದರು. ಆದರೆ ಈಗ ಪರಿಮಳ ಲಾಡ್ಜ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಎಲ್ಲಿದೆ ಇದು ಪರಿಮಳ ಲಾಡ್ಜ್ ಅಂತೀರಾ?

Vijaya Karnataka Web 30 Aug 2019, 2:41 pm

ಸ್ಯಾಂಡಲ್‍ವುಡ್ ಕ್ವೀನ್ ನಟಿ ರಮ್ಯಾ ಎಲ್ಲಿ ಹೋದರು ಎಂದು ಹುಡುಕುತ್ತಿದ್ದವರಿಗೆ ಶಾಕ್ ಆಗುವಂತೆ 'ಪರಿಮಳ ಲಾಡ್ಜ್'ನಲ್ಲಿ ಪತ್ತೆಯಾಗಿದ್ದಾರೆ. ಎಲ್ಲಿದೆ ಈ ಲಾಡ್ಜ್ ಅಂತೀರಾ? ಯುಟ್ಯೂಬ್‌ನಲ್ಲಿ ಜಾಲಾಡಿದರೆ ಅಲ್ಲಿ ಸಿಗುತ್ತದೆ ನೋಡಿ. ಅಂದಹಾಗೆ ಇದು 'ನೀರ್ ದೋಸೆ' ಖ್ಯಾತಿಯ ವಿಜಯಪ್ರಕಾಶ್ ನಿರ್ದೇಶನದ 'ಪರಿಮಳ ಲಾಡ್ಜ್' ಟೀಸರ್ ವಿಚಾರ.
Vijaya Karnataka Web parimala-lodge


ಟೀಸರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ್ದು, ಸತೀಶ್ ನೀನಾಸಂ, ಯೋಗಿ, ಬುಲೆಟ್ ಪ್ರಕಾಶ್, ಸುಮನ್ ರಂಗನಾಥ್, ದತ್ತಣ್ಣ, ಹೇಮಾದತ್ ಮುಂತದವರಿದ್ದಾರೆ. ಅಲ್ಲೇ ಪೊಲೀಸ್ ಠಾಣೆಯ ಮೇಲೆ ಇಟ್ಟಿರುವ ಫೋಟೋ ಫ್ರೇಮ್‌ಮಲ್ಲಿ ನಟಿ ರಮ್ಯಾ ಸಹ ಕಾಣಿಸುತ್ತಾರೆ. ವಿಜಯ್ ಪ್ರಸಾದ್ ನಿರ್ದೇಶನದ ಸಿದ್ಲಿಂಗು ಚಿತ್ರದ ಹಾಡು "ಎಲ್ಲೆಲ್ಲು ಓಡುವ ಮನಸೆ.." ಹಾಡಿನ ಟ್ಯೂನ್ ಹಿನ್ನೆಲೆಯಲ್ಲಿ ರಮ್ಯಾ ಫೋಟೋ ಪ್ರತ್ಯಕ್ಷವಾಗಿದ್ದು ಈ ಚಿತ್ರದಲ್ಲಿ ರಮ್ಯಾ ಏನಾದರೂ ಇದ್ದಾರಾ ಎಂದು ಕುತೂಹಲ ಮೂಡಿಸಿದ್ದಾರೆ.
ದುಬೈನಲ್ಲಿ ಕನ್ನಡ ನಟಿ ರಮ್ಯಾ ಮದುವೆಯಂತೆ ನಿಜವೇ?


ಈ ಟ್ರೇಲರ್ ಸಖತ್ ಫನ್ನಿಯಾಗಿದ್ದು ಟೈಟಲ್ ಕಾರ್ಡ್‍ನಲ್ಲೇ ಇದೊಂದು ಪಕ್ಕಾ ಡಬಲ್ ಮೀನಿಂಗ್ ಸಿನಿಮಾ ಎಂಬುದನ್ನು ತೋರಿಸಿದ್ದಾರೆ ನಿರ್ದೇಶಕರು. ಲಾಡ್ಜ್‌ನಲ್ಲಿ ಸಲಿಂಗಕಾಮಿಗಳು, ಲಾಡ್ಜ್‌ನಲ್ಲಿ ಆಳ ನೋಡಿ ಲಾಳ ಹೊಡ್ದವ್ರು, ಲಾಡ್ಜ್‌ನಲ್ಲಿ ಪೊರೆ ನೋಡಿ ನೊರೆ ಬಿಟ್ಟವ್ರು, ಲಾಡ್ಜ್‌ನಲ್ಲಿ ಜಡೆ ನೋಡಿ ಜಲಕ್ರೀಡೆ ಆಡ್ದವ್ರು, ಲಾಡ್ಜ್‌‍ನಲ್ಲಿ ಬ್ರಾ ನೋಡಿ ಬಾಗ್ಲು ತೆಗ್ದವ್ರು.... ಈ ರೀತಿ ಶೀರ್ಷಿಕೆಗಳಡಿ ಕಲಾವಿದರು, ತಂತ್ರಜ್ಞರನ್ನು ಪರಿಚಯಿಸಿದ್ದಾರೆ.

ಇನ್ನು ಟೀಸರ್‌ನಲ್ಲಿರುವ ಡಬಲ್ ಮೀನಿಂಗ್ ಡೈಲಾಗ್‍ ಕೇಳಿದರಂತೂ ನಗು ತಡೆದುಕೊಳ್ಳಲು ಸಾಧ್ಯವಾಗಲ್ಲ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದ್ದು, ನಿರಂಜನ್ ಬಾಬು ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌