ಆ್ಯಪ್ನಗರ

ಸಾಯಿ ಪಲ್ಲವಿ 'ಡಿಯರ್ ಕಾಮ್ರೇಡ್' ರಿಜೆಕ್ಟ್ ಮಾಡಿದ ಕಾರಣ ಬಹಿರಂಗ!

ಸಾಯಿ ಪಲ್ಲವಿ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ನಟಿಸಲು ಒಪ್ಪದಿರುವ ಕಾರಣ ಚಿತ್ರಕಥೆಯಲ್ಲ, ಬದಲಿಗೆ ಲಿಪ್ ಲಾಕ್ ದೃಶ್ಯದ ಬೇಡಿಕೆ ಎಂಬುದು ಇದೀಗ ಸ್ಪಷ್ಟವಾಗಿದೆ. ಹೀಗಾಗಿ ಸಾಯಿ ಪಲ್ಲವಿ ರಿಜೆಕ್ಟ್ ಮಾಡಿರುವ ಕಾರಣ ಚಿತ್ರಕಥೆಯಲ್ಲ, ಬದಲಿಗೆ ಲಿಪ್ ಲಾಕ್ ದೃಶ್ಯದ ಬೇಡಿಕೆ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆ ಇನ್ನೂ ಹೆಚ್ಚಾಗಿದೆ. ಕಾರಣ, ಚಿತ್ರಕಥೆ ತುಂಬಾ ಚೆನ್ನಾಗಿಯೇ ಇರಬಹುದೇನೋ ಎಂಬ ಸಂಗತಿ ಎಂಬುದು ಇದೀಗ ಲೈಮ್‌ಲೈಟ್‌ಗೆ ಬರುತ್ತಿದೆ.

Vijaya Karnataka Web 18 Jul 2019, 2:57 pm
ಸದ್ಯಕ್ಕೆ 'ಡಿಯರ್ ಕಾಮ್ರೇಡ್' ಚಿತ್ರವು 'ದಕ್ಷಿಣ ಭಾರತೀಯ ಚಿತ್ರರಂಗ'ದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸಿನಿಮಾ. ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ 'ಸೌತ್ ಇಂಡಿಯನ್ ಕೃಶ್' ನಟಿ ರಶ್ಮಿಕಾ ಮಂದಣ್ಣ ಜೋಡಿಯ 'ಡಿಯರ್ ಕಾಮ್ರೆಡ್' ಚಿತ್ರವು ಇದೇ ತಿಂಗಳು 26ರಂದು (ಜುಲೈ 26, 2019) ಬಿಡುಗಡೆಯಾಗಲಿದೆ. 'ಗೀತ ಗೋವಿಂದಂ' ಚಿತ್ರದ ಬಳಿಕ ಮತ್ತೆ ಈ ಚಿತ್ರದಲ್ಲಿ ರಶ್ಮಿಕಾ-ವಿಜಯ್ ಜೋಡಿ ಒಂದಾಗಿರುವುದು ವಿಶೇಷ.
Vijaya Karnataka Web rashmika-sai pallavi


ಇತ್ತೀಚೆಗಷ್ಟೆ 'ಡಿಯರ್ ಕಾಮ್ರೆಡ್' ಚಿತ್ರದ ಟ್ರೇಲರ್ ರಿಲೀಸ್ ಆಗಿ ಈ ಚಿತ್ರದ ಬಗೆಗಿನ ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಇದಕ್ಕೂ ಮೊದಲು ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟೀಸರ್ ಸಹ ಈ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಈ ಎಲ್ಲ ಸಂಗತಿಗಳಲ್ಲಿ ಮುಖ್ಯವಾಗಿ ಜನರ ಗಮನ ಸೆಳೆದಿದ್ದು ವಿಜಯ್ ಮತ್ತು ರಶ್ಮಿಕಾ ಲಿಪ್‌ಲಾಕ್ ದೃಶ್ಯಗಳು. ಇದೀಗ, ಈ ವಿಷಯಕ್ಕೂ ನಟಿ ಸಾಯಿಪಲ್ಲವಿ ಈ ಡಿಯರ್ ಕಾಮ್ರೆಡ್ ಚಿತ್ರವನ್ನು ರಿಜೆಕ್ಟ್ ಮಾಡಿದ್ದಕ್ಕೂ ಸಂಬಂಧವಿದೆ ಎನ್ನಲಾಗುತ್ತಿದೆ.

ಹೌದು, ಸಿಕ್ಕ ಮಾಹಿತಿ ಪ್ರಕಾರ, ಸಾಯಿ ಪಲ್ಲವಿ ಅವರು ಡಿಯರ್ ಕಾಮ್ರೆಡ್ ಚಿತ್ರವನ್ನು ರಿಜೆಕ್ಟ್ ಮಾಡಲು ಕಾರಣವೇ 'ಚಿತ್ರಕ್ಕೆ ಅಗತ್ಯವಾಗಿರುವ ಲಿಪ್‌ ಲಾಕ್ ದೃಶ್ಯದ ಬೇಡಿಕೆ' ಎನ್ನಲಾಗಿದೆ. ಚಿತ್ರತಂಡವು ಸಾಯಿ ಪಲ್ಲವಿಗೆ ಕಥೆ ಹೇಳಿ, ಚಿತ್ರಕ್ಕೆ ಲಿಪ್ ಲಾಕ್ ದೃಶ್ಯದ ಅಗತ್ಯವಿದೆ ಎಂದ ತಕ್ಷಣವೇ ಸಾಯಿ ಪಲ್ಲವಿಯವರು ಈ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರಂತೆ. ಆ ಬಳಿಕ ಆ ಚಿತ್ರವನ್ನು ಒಪ್ಪಿ ರಶ್ಮಿಕಾ ಮಂದಣ್ಣ ಅವರು ಚಿತ್ರದಲ್ಲಿ ನಟಿಸಿದ್ದಾರೆ.

ಈ ಮೂಲಕ ಬಹುಬೇಡಿಕೆಯ ನಟಿ ಸಾಯಿ ಪಲ್ಲವಿ ಈ ಚಿತ್ರವನ್ನು ತಿರಸ್ಕರಿಸಲಿಕ್ಕೆ ಚಿತ್ರಕ್ಕೆ ಅಗತ್ಯವಿದ್ದ 'ಲಿಪ್ ಲಾಕ್' ಬಗೆಗಿನ ವಿರೋಧವೇ ಕಾರಣ ಎಂಬುದೀಗ ಬಹಿರಂಗವಾಗಿದೆ. ಆದರೆ, ಅದನ್ನು ಒಪ್ಪಿ ಮಾಡಿದ ಕಾರಣಕ್ಕೆ ರಶ್ಮಿಕಾ ಗ್ರೇಟ್ ಎಂದಾಗಲೀ ಅಥವಾ ಒಪ್ಪದಿದ್ದ ಕಾರಣಕ್ಕೆ ಸಾಯಿ ಪಲ್ಲವಿ ಗ್ರೇಟ್ ಎಂದಾಗಲೀ ಯಾರೂ ಕೂಡ ಚರ್ಚಿಸುತ್ತಿಲ್ಲ. ಬದಲಿಗೆ, ಆ ಸಿನಿಮಾದಲ್ಲಿ ನಟಿಸಬೇಕು ಅಥವಾ ನಟಿಸಬಾರದು ಎಂಬುದು ಅವರವರ ವಿವೇಚನೆಗೆ ಬಿಟ್ಟಿದ್ದು. ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸಬೇಕಿಲ್ಲ ಎಂಬುದು ಬಹಳಷ್ಟು ಜನರ ಅಭಿಪ್ರಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌