ಆ್ಯಪ್ನಗರ

ಚಿರಂಜೀವಿ ಚಿತ್ರದಲ್ಲಿ ಸೊಂಟ ಕುಣಿಸಲಿರುವ ಶ್ರುತಿ ಹಾಸನ್

ಸೈರಾ ನರಸಿಂಹರೆಡ್ಡಿ ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್ ಸದ್ಯದಲ್ಲೇ ನಟಿಸಲಿದ್ದಾರೆ ಎನ್ನಲಾಗಿದೆ. ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ನಾಯಕತ್ವದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ತಮನ್ನಾ, ವಿಜಯ್ ಸೇತುಪತಿ, ಸುದೀಪ್, ಅಮಿತಾಬ್ ಬಚ್ಚನ್ ಮುಂತಾದ ತಾರಾಬಳಗವಿದೆ.

Vijaya Karnataka Web 15 Mar 2019, 4:58 pm
ನಟಿ ಶ್ರುತಿ ಹಾಸನ್ ಅವರು ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸಲಿದ್ದಾರೆ ಎನ್ನಲಾಗುತ್ತಿದೆ. 2017 ರಲ್ಲಿ ತೆರೆಕಂಡ 'ಕಾಟಮರಾಯುಡು' ಚಿತ್ರದ ನಂತರ ನಟಿ ಶ್ರುತಿ ಹಾಸನ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಕಮಲಹಾಸನ್ ನಟಿಸಿ ನಿರ್ದೇಶಿಸುತ್ತಿರುವ "ಶಭಾಸ್ ನಾಯ್ಡು' ಚಿತ್ರದಲ್ಲಿ ಶ್ರುತಿ ಹಾಸನ್ ನಟಿಸುತ್ತಿದ್ದು, ಈ ಚಿತ್ರವು ಇನ್ನೂ ತೆರೆಗೆ ಬಂದಿಲ್ಲ.
Vijaya Karnataka Web shruthi1503


ಇತ್ತೀಚಿಗೆ ಬಂದಿರುವ ವರ್ತಮಾನದ ಪ್ರಕಾರ, ಸೈರಾ ನರಸಿಂಹರೆಡ್ಡಿ ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್ ಸದ್ಯದಲ್ಲೇ ನಟಿಸಲಿದ್ದಾರೆ ಎನ್ನಲಾಗಿದೆ. ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ನಾಯಕತ್ವದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ತಮನ್ನಾ, ವಿಜಯ್ ಸೇತುಪತಿ, ಸುದೀಪ್, ಅಮಿತಾಭ್ ಬಚ್ಚನ್ ಮುಂತಾದ ತಾರಾಬಳಗವಿದೆ. ಇದೀಗ, ಕಮಲಹಾಸನ್ ಪುತ್ರಿ, ನಟಿ ಶ್ರುತಿ ಹಾಸನ್ ಅವರು ಕೂಡ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಸದ್ಯಕ್ಕೆ ಶೂಟಿಂಗ್ ಹಂತದಲ್ಲಿರುವ 'ಸೈರಾ ನರಸಿಂಹ ರೆಡ್ಡಿ' ಚಿತ್ರವು ಯಾವಾಗ ತೆರಗೆ ಬರಲಿದೆ ಎಂದು ಟಾಲಿವುಡ್ ಹಾಗೂ ಸಂಪೂರ್ಣ ಸೌತ್ ಇಂಡಿಯಾ ಪ್ರೇಕ್ಷಕರು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ.

ಚಿರಂಜೀವಿ ನಾಯಕತ್ವದ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕೆ ಈಗಾಗಲೇ ಬಹಳಷ್ಟು ನಿರೀಕ್ಷೆ ಪ್ರಾರಂಭವಾಗಿದೆ. ಏಕೆಂದರೆ, ಇತ್ತೀಚಿಗೆ ನಟ ಚಿರಂಜೀವಿ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕಥೆ, ಪಾತ್ರ ಹಾಗೂ ಬ್ಯಾನರ್ ಇಷ್ಟವಾದರೆ ಮಾತ್ರ ಚಿರಂಜೀವಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಹೀಗಾಗಿ, ಸಹಜವಾಗಿಯೇ ಚಿರಂಜೀವಿ ಅವರ ಚಿತ್ರಕ್ಕಿದ್ದ ಕ್ರೇಜ್ ಈಗ ಡಬಲ್ ಆಗುತ್ತಿದೆ. ಅದರಲ್ಲೂ ಈ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಘಟಾನುಘಟಿ ತಾರಾಬಳಗವೇ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌