ಆ್ಯಪ್ನಗರ

ಟಗರು ಹಾಡಿಗೆ ಡಬ್‌ಸ್ಮ್ಯಾಶ್‌ ಮಾಡಿದ ನಟಿಯರು

ಶಿವರಾಜ್‌ಕುಮಾರ್‌ ಮತ್ತು ಸೂರಿ ಕಾಂಬಿನೇಷನ್‌ನ ಟಗರು ಚಿತ್ರದ ಬಗ್ಗೆ ದಿನೇ ದಿನೇ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇದೆ.

Vijaya Karnataka 13 Jan 2018, 5:00 am

ಶಿವರಾಜ್‌ಕುಮಾರ್‌ ಮತ್ತು ಸೂರಿ ಕಾಂಬಿನೇಷನ್‌ನ ಟಗರು ಚಿತ್ರದ ಬಗ್ಗೆ ದಿನೇ ದಿನೇ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇದೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿ ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿದ್ದು, ಆ ಸಿನಿಮಾದ ಮೆಂಟಲ್‌ ಹೋ ಜಾವೋ ಮತ್ತು ಲೆಟ್ಸ್‌ ಗೋ ಹಾಡಿಗೆ ನಟಿ ಆಶಿತಾ ಮತ್ತು ಸಂಯುಕ್ತಾ ಹೆಗಡೆ ಡಬ್‌ಸ್ಮ್ಯಾಶ್‌ ಮಾಡಿದ್ದಾರೆ.

ಇವರಿಬ್ಬರೂ ಮಾಡಿರುವ ವಿಡಿಯೋ ಈಗ ಆನ್‌ಲೈನ್‌ನಲ್ಲಿ ಸಖತ್‌ ವೈರಲ್‌ ಆಗಿದ್ದು, ನಟಿಯರು ಈ ಹಾಡಿಗೆ ಫಿದಾ ಆಗಿದ್ದಾರೆ. ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್‌ರಾಜ್‌ ಟಗರು ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ಈ ಮೆಂಟಲ್‌ ಹೋ ಜಾವಾ ಹಾಡನ್ನು ಫಿಲಂ ಫೇರ್‌ ಪ್ರಶಸ್ತಿ ವಿಜೇತ ಗಾಯಕಿ ಅನನ್ಯ ಭಟ್‌ ಹಾಡಿದ್ದಾರೆ.

Vijaya Karnataka Web actresses dubsmash for tagaru song
ಟಗರು ಹಾಡಿಗೆ ಡಬ್‌ಸ್ಮ್ಯಾಶ್‌ ಮಾಡಿದ ನಟಿಯರು


ಈ ಚಿತ್ರದಲ್ಲಿ ಧನಂಜಯ ಮತ್ತು ವಸಿಷ್ಠ ಸಿಂಹ ಮುಖ್ಯ ವಿಲನ್‌ಗಳಾಗಿ ಆಗಿ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಒಟ್ಟಿನಲ್ಲಿ ಶಿವರಾಜ್‌ಕುಮಾರ್‌, ಸೂರಿ, ಧನಂಜಯ, ವಸಿಷ್ಠ ಅವರ ಕಾಂಬಿನೇಷನ್‌ ಬಗ್ಗೆ ಜನ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾವನ ಮೆನನ್‌ ಮತ್ತು ಮಾನ್ವಿತ ಹರೀಶ್‌ ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌