ಆ್ಯಪ್ನಗರ

ರಣವಿಕ್ರಮ ಹುಡುಗಿಯ ಫೋಟೋ ವೈರಲ್‌

ರಣವಿಕ್ರಮ ಚಿತ್ರದಲ್ಲಿ ಪುನೀತ್‌ ಜತೆ ನಟಿಸಿದ್ದ ಬಾಲಿವುಡ್‌ ನಟಿ ಅದಾ ಶರ್ಮಾ ಬೆತ್ತಲೆ ಫೋಸ್‌ ನೀಡಿ ಎಲ್ಲರನ್ನು ದಂಗುಬಡಿಸಿದ್ದಾರೆ.

Vijaya Karnataka 10 May 2019, 5:00 am
ಬಾಲಿವುಡ್‌ನಲ್ಲಿ ಮ್ಯಾನ್‌ ಟು ಮ್ಯಾನ್‌ ಚಿತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಇದೀಗ ಈ ಚಿತ್ರದ ಪ್ರಮೋಷನ್‌ಗಾಗಿ ಬೆತ್ತಲೆ ಪೋಸ್‌ ನೀಡಿದ್ದಾರೆ. ಈ ಚಿತ್ರದ ತಮ್ಮ ಪಾತ್ರ ತುಂಬಾ ವಿಭಿನ್ನವಾಗಿರೋದು ಇದಕ್ಕೆ ಕಾರಣ ಎಂದಿದ್ದಾರೆ.
Vijaya Karnataka Web ada sharma


ಪುನೀತ್‌ ರಾಜ್‌ಕುಮಾರ್‌ ನಟನೆಯ ರಣವಿಕ್ರಮ ಚಿತ್ರದಲ್ಲಿ ಅದಾ ಶರ್ಮಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವನ್ನು ಪವನ್‌ ಒಡೆಯರ್‌ ನಿರ್ದೇಶನ ಮಾಡಿದ್ದರು. ಅದಾದ ನಂತರ ಬೇರೆ ಕನ್ನಡ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿಲ್ಲ.

ಅದಾ ಶರ್ಮಾ ಬೋಲ್ಡ್‌ ಆಗಿ ಕ್ಯಾಮೆರಾ ಮುಂದೆ ನಿಲ್ಲುವುದು ಸಾಮಾನ್ಯ ಸಂಗತಿ. ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋಗಳು ಸದಾ ಸುದ್ದಿಯಾಗುತ್ತಿರುತ್ತದೆ. ಈ ಹಿಂದೆಯೂ ನ್ಯೂಡ್‌ ಆಗಿ ಕ್ಯಾಮೆರಾ ಮುಂದೆ ನಿಂತಿದ್ದರು. ಇದೀಗ ಚಿತ್ರ ಪ್ರಮೋಷನ್‌ಗೆ ಈ ಬೋಲ್ಡ್‌ ನಿರ್ಧಾರ ತೆಗೆದುಕೊಂಡಿದ್ದಾರೆ.

'ಸೋ.. ನಾನು ನಿಮ್ಮ ಕನಸಿನ ಪುರುಷ..? ನನ್ನ ಮುಂದಿನ ಹಿಂದಿ ಚಿತ್ರ ಮ್ಯಾನ್‌ ಟು ಮ್ಯಾನ್‌. ನನು ನಟಿಯಾಗಿ ನನ್ನ ಬದುಕನ್ನು ಪ್ರಾರಂಭಿಸಿದಾಗಿನಿಂದ ಇಂಥದ್ದೊಂದು ಪಾತ್ರ ಮಾಡ್ತೀನಿ ಅಂತ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ನಾನು ಈ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದೇನೆ. ಇದೊಂದು ಯುನಿಕ್‌ ಆದ ಲವ್‌ ಸ್ಟೋರಿ. ಉಳಿದದ್ದನ್ನು ನಿಮ್ಮ ಕಲ್ಪನೆಗೇ ಬಿಡುತ್ತೇನೆ' ಎಂದು ಫೋಟೋ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ತಮ್ಮ ಕೂದಲನ್ನು ಮುಂದಕ್ಕೆ ಬಿಟ್ಟುಕೊಂಡು ಮೀಸೆ ಅಂಟಿಸಿಕೊಂಡು ಪೋಸ್‌ ನೀಡಿದ್ದಾರೆ.

ತಮಿಳು ನಾಡು ಮೂಲದ ಅದಾ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಈಗ ತೆಲುಗಿನಲ್ಲಿ ಜರ್ಸಿ, ಕಲ್ಕಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಬೈಪಾಸ್‌ ರೋಡ್‌, ಕಮಾಂಡೋ 3 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌