ಆ್ಯಪ್ನಗರ

ಎಸ್‌ಪಿಬಿ ಧ್ವನಿ ನನ್ನ ಸಿನಿಮಾ ಕರಿಯರ್‌ಗೆ ಒಂದು ಪ್ಲಸ್‌ ಪಾಯಿಂಟ್‌ ಎಂದ ಶಿವರಾಜ್‌ಕುಮಾರ್‌

ದಶಕದ ನಂತರ ಶಿವರಾಜ್‌ ಕುಮಾರ್‌ ಚಿತ್ರಕ್ಕೆ ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಈ ಕುರಿತು ಶಿವರಾಜ್‌ ಮಾತನಾಡಿದ್ದಾರೆ.

Vijaya Karnataka 18 Mar 2019, 10:01 am
- ಹರೀಶ್‌ ಬಸವರಾಜ್‌
Vijaya Karnataka Web kavacha


ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ನನ್ನ 'ಕವಚ' ಚಿತ್ರಕ್ಕಾಗಿ ಹಾಡಿದ್ದು ನನ್ನ ಕೆರಿಯರ್‌ನಲ್ಲೇ ಮರೆಯಲಾಗದ ಸಂಗತಿ ಎಂದಿದ್ದಾರೆ ನಟ ಶಿವರಾಜ್‌ ಕುಮಾರ್‌. ದಶಕದ ನಂತರ ಶಿವರಾಜ್‌ ಚಿತ್ರಕ್ಕೆ ಎಸ್‌ಪಿಬಿ ಹಾಡಿದ್ದು ವಿಶೇಷ.

'ನನ್ನ ಸಿನಿಮಾ ಕರಿಯರ್‌ಗೆ ಎಸ್‌ಪಿಬಿ ಹಾಡು ಪ್ಲಸ್‌ ಪಾಯಿಂಟ್‌. ಅವರು ನನ್ನ ಚಿತ್ರಕ್ಕಾಗಿ ಹಾಡಿದಾಗೆಲ್ಲ ಆ ಗೀತೆಗಳು ಹಿಟ್‌ ಆಗಿವೆ. ಸಿನಿಮಾ ಕೂಡ ಗೆದ್ದಿವೆ. ಹಾಗಾಗಿ ಅವರು ನನ್ನ ಪಾಲಿಗೆ ಸಂಭ್ರಮದ ಸಂಗತಿ' ಎಂದಿದ್ದಾರೆ ಶಿವರಾಜ್‌ ಕುಮಾರ್‌.

ಶುಕ್ರವಾರವಷ್ಟೇ ರಿಲೀಸ್‌ ಆಗಿರುವ ಕವಚ ಸಿನಿಮಾದ 'ರೆಕ್ಕೆಯಾ' ಹಾಡಿಗೆ ದನಿಯಾಗಿದ್ದಾರೆ ಎಸ್‌ಪಿಬಿ. ಅಪ್ಪ ಮತ್ತು ಮಗಳ ಸಂಬಂಧವನ್ನು ಹೇಳುವ ಸಾಹಿತ್ಯ ಈ ಹಾಡಿನಲ್ಲಿದ್ದು, ಕೇಳುಗರ ಮೆಚ್ಚುಗೆಗೂ ಅದು ಪಾತ್ರವಾಗಿದೆ. ಸಿನಿಮಾದ ವಿಶೇಷ ಅಂದರೆ, ಶಿವರಾಜ್‌ ಕುಮಾರ್‌ ಮೊದಲ ಬಾರಿಗೆ ದೃಷ್ಟಿ ವಿಕಲಚೇತನ ಪಾತ್ರ ಮಾಡಿದ್ದಾರೆ.

'ಎಸ್‌ಪಿಬಿ ಈಗಾಗಲೇ ಹೆಸರಾಂತ ನಟರ ಚಿತ್ರಗಳಿಗೆ ಹಾಡಿದ್ದಾರೆ. ಅವರಿಗೆ ಯಾವ ಹೀರೋಗೆ ಹೇಗೆ ಹಾಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ರೆಕ್ಕೆಯಾ ಹಾಡಿಗೆ ಅವರು ಜೀವ ತುಂಬಿದ್ದಾರೆ. ಈ ಹಾಡಿನಲ್ಲಿಯ ಅವರ ದನಿ ನನಗೆ ಸಲೀಸಾಗಿ ನಟಿಸಲು ಪ್ರೇರೇಪಿಸಿತು. ಅವರು ಈ ಗೀತೆಯನ್ನು ಹಾಡಿದ ನಂತರವೇ ಚಿತ್ರೀಕರಣ ಮಾಡಿದ್ದೇವೆ. ಹಾಗಾಗಿ ಹಾಡಿಗೆ ಮತ್ತಷ್ಟು ಜೀವ ಬಂದಿದೆ. ಅವರು ಕೇವಲ ಅದ್ಭುತ ಗಾಯಕ ಮಾತ್ರವಲ್ಲ, ಅತ್ಯುತ್ತಮ ನಟ ಕೂಡ' ಎನ್ನುತ್ತಾರೆ ಶಿವರಾಜ್‌ ಕುಮಾರ್‌.

'ನನ್ನ ಪ್ರತಿ ಸಿನಿಮಾ ಆಗುವಾಗಲೂ ಎಸ್‌ಪಿಬಿ ಅವರಿಂದ ಒಂದು ಹಾಡು ಹೇಳಿಸಿ ಎಂದು ನಿರ್ದೇಶಕ ಮತ್ತು ನಿರ್ಮಾಪಕರನ್ನು ಕೇಳುತ್ತಿದ್ದೆ. ಆದರೆ, ಸಾಧ್ಯವಾಗಿರಲಿಲ್ಲ. ಈಗ ನನ್ನ ಆಸೆ ಈಡೇರಿದೆ. ಈ ಸಾಂಗ್‌ ಅನ್ನು ಸುದೀಪ್‌ ರಿಲೀಸ್‌ ಮಾಡಿದ್ದಾರೆ. ಕರೆ ಮಾಡಿ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ. ಅವರಿಗೂ ಕೂಡ ನಾನು ಧನ್ಯವಾದ ಹೇಳುತ್ತೇನೆ' ಎನ್ನುವುದು ಶಿವರಾಜ್‌ ಮಾತು.

ಈ ಚಿತ್ರ ಏ.5ಕ್ಕೆ ರಿಲೀಸ್‌ ಆಗುತ್ತಿದೆ. ಜಿವಿಆರ್‌ ವಾಸು ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾದಲ್ಲಿ ಇಷಾ ಕೊಪ್ಪಿಕರ್‌ ಮುಖ್ಯ ಪಾತ್ರ ಮಾಡಿದ್ದಾರೆ.

----

ರೆಕ್ಕೆಯಾ ಏರಿ ಗೀತೆಯು ಎಸ್‌ಪಿಬಿ ಅವರ ದನಿಯ ಕಾರಣಕ್ಕಾಗಿಯೇ ಫೇಮಸ್‌ ಆಗಿದೆ. ಓಲ್ಡ್‌ ಈಸ್‌ ಗೋಲ್ಡ್‌ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

-ಶಿವರಾಜ್‌ಕುಮಾರ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌