ಆ್ಯಪ್ನಗರ

'ಲುಂಗಿ' ಹುಡುಗನ ಹಿಂದೆ ಬಿದ್ದ ಅಹಲ್ಯಾ ಸುರೇಶ್‌ ಮತ್ತು ರಾಧಿಕಾ ರಾವ್‌

ಶೀರ್ಷಿಕೆಯಿಂದಲೇ ಸ್ಯಾಂಡಲ್‍ವುಡ್‌ನಲ್ಲಿ ಗಮನಸೆಳೆದಿರುವ ಸಿನಿಮಾ ಲುಂಗಿ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ನಾಯನ ಹಿಂದೆ ಬೀಳುತ್ತಾರೆ. ಲುಂಗಿಗೂ ಮತ್ತು ಚಿತ್ರದ ನಾಯಕನಿಗೂ ಸಂಬಂಧ ಇದೆಯಂತೆ, ಅದು ಏನು ಎಂಬುದೇ ಚಿತ್ರದ ಕಥಾಹಂದರ.

Vijaya Karnataka 5 Oct 2019, 4:42 pm
ಶೀರ್ಷಿಕೆಯಿಂದಾಗಿಯೇ ಗಮನ ಸೆಳೆಯುತ್ತಿರುವ 'ಲುಂಗಿ' ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿರುವ ಅಹಲ್ಯಾ ಸುರೇಶ್‌ ಮತ್ತು ರಾಧಿಕಾ ರಾವ್‌ ಈ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅಹಲ್ಯ ಅವರದ್ದು ಕ್ರಿಶ್ಚಿಯನ್‌ ಹುಡುಗಿ ಪಾತ್ರವಾಗಿದ್ದರೆ, ರಾಧಿಕಾ ಸಾಂಪ್ರದಾಯಸ್ಥ ಕುಟುಂಬದ ಕುಡಿ. ಎರಡೂ ಪಾತ್ರಕ್ಕೂ ವಿಭಿನ್ನ ಹಿನ್ನೆಲೆಯಿದೆಯಂತೆ.
Vijaya Karnataka Web ahayla-suresh


ಇದೊಂದು ಪಕ್ಕಾ ಮಂಗಳೂರು ಸೊಗಡಿನ ಸಿನಿಮಾ. ಈ ಸಿನಿಮಾದ ಮೂಲಕ ಪ್ರಣವ್‌ ಹೆಗಡೆ ನಾಯಕನಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಮಗನಿಗಾಗಿಯೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಮುಖೇಶ್‌ ಹೆಗಡೆ. 'ಈ ಸಿನಿಮಾಗೆ ಲುಂಗಿ ಎಂದು ಹೆಸರಿಡಲು ಕಾರಣವಿದೆ. ಇದು ಸಿನಿಮಾದ ಕಥಾವಸ್ತುವಾಗಿದೆ. ಲುಂಗಿಗೂ ಮತ್ತು ನಮ್ಮ ಚಿತ್ರದ ನಾಯಕನಿಗೂ ಸಂಬಂಧವಿದೆ. ಆ ಸಂಬಂಧ ಏನು ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಿ' ಎನ್ನುತ್ತಾರೆ ನಿರ್ದೇಶಕರು. ಹೊಸದಾಗಿ ಮದ್ವೆ ಆದೋರ ಪುರಾಣ ಹೇಳ್ತಾರೆ ಅಹಲ್ಯಾ

ಈ ಚಿತ್ರಕ್ಕೆ ಅಕ್ಷಿತ್‌ ಶೆಟ್ಟಿ ಮತ್ತು ಅರ್ಜುನ್‌ ಲೂಯಿಸ್‌ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಡಾನ್ಸ್‌, ಸಾಹಿತ್ಯ ಮತ್ತು ಸಿನಿಮಾ ಮೇಕಿಂಗ್‌ ಕುರಿತಾಗಿ ಅಪಾರ ಒಲವು ಹೊಂದಿರುವ ಈ ಜೋಡಿ, ಕನ್ನಡದ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಚಿತ್ರ ಮಾಡಿದ್ದಾರಂತೆ. 'ಸಾಕಷ್ಟು ಓದಿಕೊಂಡಿರುವ ವ್ಯಕ್ತಿಯೊಬ್ಬ ಸ್ವಂತ ಕೆಲಸಕ್ಕೆ ಮುಂದಾಗುತ್ತಾನೆ. ಆ ಉದ್ಯೋಗವನ್ನು ಮಾಡುವ ಸಂದರ್ಭದಲ್ಲಿ ಅವಮಾನ ಅನುಭವಿಸಬೇಕಾಗುತ್ತದೆ. ಕಷ್ಟ ನಷ್ಟಗಳಿಗೂ ಗುರಿಯಾಗುತ್ತಾನೆ. ಕೊನೆಯಲ್ಲಿತಾನು ಅಂದುಕೊಂಡಿದ್ದನ್ನು ಅವನು ಸಾಧಿಸುತ್ತಾನಾ ಅಥವಾ ಇಲ್ಲವಾ ಎನ್ನುವುದೇ ಸಿನಿಮಾ' ಎನ್ನುತ್ತಾರೆ ನಿರ್ದೇಶಕರು. ಇಂತಹ ಕಥೆಯ ಜತೆಗೆ ಲವ್‌ಸ್ಟೋರಿ ಕೂಡ ಚಿತ್ರದಲ್ಲಿದೆ. ಇಬ್ಬರು ನಾಯಕಿಯರು ಇರುವುದರಿಂದ ಇಲ್ಲಿತ್ರಿಕೋನ ಪ್ರೇಮಕಥೆ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಬ್ಬ ಸಾನ್ವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌