ಆ್ಯಪ್ನಗರ

ಗಗನಸಖಿ ಈಗ ಜರ್ನಲಿಸ್ಟ್‌

ನಟಿ ತಾನ್ಯಾ ಹೋಪ್‌ ಮೊದಲ ಚಿತ್ರದಲ್ಲಿ ಗಗನಸಖಿಯಾದರೆ, ಎರಡನೇ ಚಿತ್ರದಲ್ಲಿ ಇನ್ವೆಸ್ಟಿಗೇಟಿವ್‌ ಜರ್ನಲಿಸ್ಟ್‌ ಆಗಿ ನಟಿಸುತ್ತಿದ್ದಾರೆ.

Vijaya Karnataka Web 28 Mar 2018, 5:00 am
ನಟಿ ತಾನ್ಯಾ ಹೋಪ್‌ ಮೊದಲ ಚಿತ್ರದಲ್ಲಿ ಗಗನಸಖಿಯಾದರೆ, ಎರಡನೇ ಚಿತ್ರದಲ್ಲಿ ಇನ್ವೆಸ್ಟಿಗೇಟಿವ್‌ ಜರ್ನಲಿಸ್ಟ್‌ ಆಗಿ ನಟಿಸುತ್ತಿದ್ದಾರೆ. ಉಪೇಂದ್ರ ಅಭಿನಯದ ಹೋಮ್‌ ಮಿನಿಸ್ಟರ್‌ ಚಿತ್ರದಲ್ಲಿ ನಾಯಕಿಯಾಗಿರುವ ಇವರು ಅದರಲ್ಲಿ ಗಗನಸಖಿಯ ಪಾತ್ರ ಮಾಡಿದ್ದರು. ಈಗ ದರ್ಶನ್‌ ಅಭಿನಯದ ಯಜಮಾನ ಚಿತ್ರದಲ್ಲಿ ನಾಯಕಿ. ಅದರಲ್ಲಿ ಅವರು ಇನ್ವೆಸ್ಟಿಗೇಟಿವ್‌ ಜರ್ನಲಿಸ್ಟ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Vijaya Karnataka Web air hostess now journalist
ಗಗನಸಖಿ ಈಗ ಜರ್ನಲಿಸ್ಟ್‌


ಕಾಮಿಡಿ ಮತ್ತು ಕಮರ್ಷಿಯಲ್‌ ಚಿತ್ರವಾಗಿರುವ ಹೋಮ್‌ ಮಿನಿಸ್ಟರ್‌ನಲ್ಲಿ ನನ್ನದು ಮಾಡರ್ನ್‌ ಹುಡುಗಿಯ ಪಾತ್ರ. ತೊಂದರೆಯಲ್ಲಿ ಸಿಕ್ಕಿಕೊಂಡಾಗ ನಾಯಕ ಸಹಾಯ ಮಾಡುತ್ತಾನೆ. ಅಲ್ಲಿಂದ ನಾಯಕ ನಾಯಕಿಗೆ ಫ್ರೆಂಡ್‌ಶಿಪ್‌ ಪ್ರಾರಂಭವಾಗುತ್ತದೆ. ಈಗಾಗಲೇ ಟಾಕಿ ಪೋರ್ಷನ್‌ ಮುಗಿಸಿದ್ದೇವೆ ಎಂದು ತಾನ್ಯಾ ಹೇಳಿದ್ದಾರೆ.

ತಾನ್ಯಾ ಅವರು ಹೋಮ್‌ ಮಿನಿಸ್ಟರ್‌ ಚಿತ್ರದ ಶೂಟಿಂಗ್‌ನಲ್ಲಿರುವಾಗಲೇ ದರ್ಶನ್‌ ಅಭಿನಯದ ಯಜಮಾನ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ಡಾನ್ಸ್‌ಗೆ ಸ್ಕೋಪ್‌ ಇರುವ ಹಾಡು ಸಿಕ್ಕಿರುವುದಕ್ಕೆ ಅವರು ಥ್ರಿಲ್‌ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌