ಆ್ಯಪ್ನಗರ

ಅಜಿತ್ 'ವಿಶ್ವಾಸಂ' ಕನ್ನಡ ಡಬ್ಬಿಂಗ್ ಸಿನಿಮಾ ಶೀರ್ಷಿಕೆ 'ಜಗಮಲ್ಲ'

ಈ ಹಿಂದೆ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಿವೆ. ಆದರೆ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಕಡಿಮೆ. ಇದೀಗ ಅಜಿತ್ ಅಭಿನಯದ ವಿಶ್ವಾಸಂ ಕನ್ನಡಕ್ಕೆ ಡಬ್ ಆಗುತ್ತಿದೆ. ಈ ಸಿನಿಮಾಗೆ ಕನ್ನಡದಲ್ಲಿ ಜಗಮಲ್ಲ ಎಂದು ಹೆಸರಿಡಲಾಗಿದೆ.

TIMESOFINDIA.COM 5 Feb 2019, 3:08 pm
ಸ್ಯಾಂಡಲ್‍ವುಡ್‌ನಲ್ಲಿ ಡಬ್ಬಿಂಗ್ ಸಿನಿಮಾಗಳು ಆಗಾಗ ತೆರೆಕಂಡು ಒಂದಷ್ಟು ಸದ್ದು ಮಾಡುತ್ತಲೇ ಇವೆ. ಆದರೆ ಬಾಕ್ಸ್ ಆಫೀಸಲ್ಲಿ ಮಾತ್ರ ಇದುವರೆಗೆ ಸದ್ದು ಮಾಡಿದ್ದಿಲ್ಲ. ಇತ್ತೀಚೆಗೆ ತೆರೆಕಂಡಿರುವ ಅಜಿತ್ ಅಭಿನಯದ ಕಾಲಿವುಡ್ ಸಿನಿಮಾ 'ವಿಶ್ವಾಸಂ' ಇದೀಗ ಕನ್ನಡದಲ್ಲೂ ತೆರೆಕಾಣಲು ಸಿದ್ಧವಾಗುತ್ತಿದೆ.
Vijaya Karnataka Web viswasam


ವಿಶ್ವಾಸಂ ಕನ್ನಡ ಡಬ್ಬಿಂಗ್ ಆವೃತ್ತಿಗೆ 'ಜಗಮಲ್ಲ' ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಕನ್ನಡ ಸಂಭಾಷೆಯನ್ನು ಹೃದಯ ಶಿವ ಬರೆದಿದ್ದಾರೆ. ಈ ಹಿಂದೆ ಅಜಿತ್ ಅಭಿನಯದ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿವೆ. ವಿಶ್ವಾಸಂ ಸಿನಿಮಾ ಲೇಟೆಸ್ಟ್ ಎನ್ನಬಹುದು.

ಅಜಿತ್ ಅಭಿನಯದ 'ಆರಂಭಂ' ಕನ್ನಡಕ್ಕೆ ಡಬ್ 'ಧೀರ' ಹೆಸರಿನಲ್ಲಿ ಡಬ್ ಆಗಿದೆ. ತಮಿಳಿನಲ್ಲಿ ಬಂದಿದ್ದ 'ಎನ್ನೈ ಅರಿಂದಾಲ್‌' ಕನ್ನಡಕ್ಕೆ ಸತ್ಯದೇವ್‌ ಐಪಿಎಸ್‌ ಆಗಿ ಬಂದಿದೆ. ಈ ಹಿಂದೆ ಫಾಸ್ಟ್ ಅಂಡ್ ಫ್ಯೂರಿಯಸ್ ಸಿನಿಮಾ ಕನ್ನಡಕ್ಕೆ 'ವೇಗ ಮತ್ತು ಉದ್ವೇಗ' ಹೆಸರಿನಲ್ಲಿ ಡಬ್ ಆಗಿತ್ತು.

ಅಜಿತ್, ನಯನತಾರಾ ಜೋಡಿಯ ವಿಶ್ವಾಸಂ ಸಿನಿಮಾವನ್ನು ಶಿವಾ ನಿರ್ದೇಶಿಸಿದ್ದಾರೆ. ಜನವರಿ 10ರಂದು ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸಲಿ ₹ 180 ಕೋಟಿ ಕಲೆಕ್ಷನ್ ಮಾಡಿದೆ. ಡಿ ಇಮ್ಮಾನ್ ಸಂಗೀತ ಚಿತ್ರಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌