ಆ್ಯಪ್ನಗರ

ರಿವೇಂಜ್‌ಗೆ ರೆಡಿಯಾದ ಅಮೃತಾ

ಸಿಂಹ ಹಾಕಿದ ಹೆಜ್ಜೆಯಲ್ಲಿ ಪತ್ರಕರ್ತೆಯಾಗಿ ನಟಿಸಿದ್ದ ನಟಿ ಅಮೃತಾ ಈಗ ಮೂರು ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಉಳಿದ ಚಿತ್ರಗಳಲ್ಲಿ ನಾಯಕಿ ಪಾತ್ರವೇ ಹೈಲೈಟ್‌ ಎನ್ನೋದು ವಿಶೇಷ.

Vijaya Karnataka 1 Jun 2018, 12:06 pm
ಮೈಸೂರಿನ ಹುಡುಗಿ ಅಮೃತಾ ಸ್ಯಾಂಡಲ್‌ವುಡ್‌ನ ಫ್ರೆಶ್‌ ಫೇಸ್‌. ಮೊದಲ ಚಿತ್ರದಲ್ಲೇ ಗಮನ ಸೆಳೆದ ನಟಿ ಕೈಯಲ್ಲಿ ಈಗ ಮೂರು ಚಿತ್ರಗಳಿವೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಾರಂಭದಲ್ಲೇ ವಿಶಿಷ್ಟ ಪಾತ್ರಗಳು ಸಿಕ್ಕಿರೋದಕ್ಕೆ ಖುಷಿಯಾಗಿದ್ದಾರೆ. ಈಗ ಬುಸಿನೆಸ್‌ ಮತ್ತು ನಾಕುಮುಖ ಚಿತ್ರದ ಶೂಟಿಂಗ್‌ ನಡೆಯುತ್ತಿದ್ದು, ಇನ್ನೊಂದು ಚಿತ್ರಕ್ಕೆ ಇನ್ನೂ ಹೆಸರಿಡಬೇಕಿದೆ. ನಾಕು ಮುಖ ಚಿತ್ರದ ಪಾತ್ರಕ್ಕಾಗಿ ಸಿಗರೇಟ್‌ ಸೇದಿದ್ದು ಕಷ್ಟದ ಕೆಲಸವಾಗಿತ್ತು ಎಂದಿದ್ದಾರೆ.
Vijaya Karnataka Web amrutha


'ಸ್ಮೋಕ್‌ ಮಾಡೋಕೆ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದೆ. ಆದರೆ, ನಿರ್ದೇಶಕ ಕುಶನ್‌ ಗೌಡ, ಪ್ರಾಕ್ಟೀಸ್‌ ಬೇಡ. ದೃಶ್ಯದಲ್ಲಿ ಮೊದಲ ಬಾರಿ ಟ್ರೈ ಮಾಡುವಂತೆಯೇ ಇರಬೇಕು ಎಂದಾಗ ಒಪ್ಪಿಕೊಂಡೆ. ಬಹಳ ಕಷ್ಟ ಆಯ್ತು. ಪ್ರತಿ ಬಾರಿ ಹೊಗೆ ಎಳೆದಾಗಲೂ ಚಾಕೊಲೇಟ್‌, ಬಿಸ್ಕೆಟ್‌ ತಿನ್ನುತ್ತಿದ್ದೆ' ಎಂದಿದ್ದಾರೆ.

'ಕುಶನ್‌ ಗೌಡ ನಿರ್ದೇಶನದ ನಾಕು ಮುಖ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಚಿತ್ರದಲ್ಲಿ ಸ್ಟೋರಿನೇ ಹೀರೊ. ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರದಲ್ಲಿ ಎಮೋಷನ್ಸೂ ಅಷ್ಟೇ ಇದೆ. ಗೆಳತನಕ್ಕೆ ಪ್ರಾಮುಖ್ಯತೆ ಕೊಡುವ, ಗೆಳತಿಗಾಗಿ ರಿವೆಂಜ್‌ ತಗೊಳ್ಳೋಕೂ ಹೇಸದ ಹುಡುಗಿಯ ಪಾತ್ರ ನನ್ನದು' ಎಂದಿದ್ದಾರೆ ಅವರು.

ಬ್ಯುಸಿನೆಸ್‌ ಚಿತ್ರದಲ್ಲಿ ಆರ್ಯವರ್ಧನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. 'ಇನ್ನೆರಡು ಚಿತ್ರಗಳಲ್ಲಿ ಮಹಿಳಾ ಪಾತ್ರಗಳಿಗೆ ಬಹಳ ಪ್ರಾಮುಖ್ಯತೆ ಇದೆ. ನಾಕು ಮುಖ ಚಿತ್ರದಲ್ಲಿ ಮುಗ್ಧ ಹುಡುಗಿಯಾಗಿದ್ದವಳು, ಒಂದು ದುರಂತದ ನಂತರ ಹೇಗೆ ಸೈಕೋ ತರ ಆಗುತ್ತಾಳೆ ಅನ್ನೋದು ಚಿತ್ರದಲ್ಲಿದೆ. ನನಗೆ ಸೈಕೋ ಪಾತ್ರದಲ್ಲಿ ನಟಿಸಬೇಕನ್ನೋ ಆಸೆ ಬಹಳ ಇತ್ತು. ಅಲ್ಲದೆ, ಚಿತ್ರದ ಕತೆ ತುಂಬಾ ಇಂಟರೆಸ್ಟಿಂಗ್‌ ಆಗಿದೆ. ಪ್ರೇಕ್ಷಕರನ್ನು ಕನ್ಫ್ಯೂಸ್‌ ಮಾಡೋ ತರ ಸಸ್ಪೆನ್ಸ್‌ ಇದೆ. ಟ್ರಿಕ್ಸ್‌ ಇದೆ. ಹಾಗಾಗಿ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇದೆ' ಎನ್ನುತ್ತಾರೆ ಅವರು.

ಮೈಸೂರಿನಲ್ಲಿ ಕರೆಸ್ಪಾಂಡೆನ್ಸ್‌ನಲ್ಲಿ ಸೈಕಾಲಜಿ ಫೊರೆನ್ಸಿಕ್‌ ಸೈನ್ಸ್‌ ಓದುತ್ತಿರುವ ಅವರಿಗೆ ನಾಕು ಮುಖ ಚಿತ್ರದ ಪಾತ್ರದಲ್ಲಿ ನಟಿಸೋಕೆ ಸುಲಭವಾಯ್ತು ಎನ್ನುತ್ತಾರೆ. 'ನನ್ನ ಪಾತ್ರದ ಮಾನಸಿಕ ಸ್ಥಿತಿಯನ್ನು ಅರಿಯೋಕೆ ನನ್ನ ಸ್ಟಡಿ ಸಹಾಯ ಮಾಡ್ತು. ನನಗೆ ನಟನೆಯಲ್ಲಿ ಪ್ಯಾಶನ್‌ ಇದ್ದಿದ್ದರಿಂದ ಚಿತ್ರರಂಗಕ್ಕೆ ಬಂದೆ' ಎನ್ನುತ್ತಾರೆ ಅಮೃತಾ. ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದು, ಅವರಿಂದ ನಾನು ಬಹಳ ಕಲಿತೆ ಎಂದಿದ್ದಾರೆ. ಚಿತ್ರದಲ್ಲಿ ವಿಕ್ಕಿ, ರಂಗಭೂಮಿ ಕಲಾವಿದ ಬಾಲ, ಕಿರುತೆರೆ ನಟಿ ಪ್ರೀತಿ, ದರ್ಶನ್‌ ರಾಗ್‌, ನಿರೂಪಕ ಧನಂಜಯ್‌ ಮತ್ತಿತರರು ನಟಿಸಿದ್ದಾರೆ. ಹಾಡಿಗೆ ರಾಜು ನೃತ್ಯ ಸಂಯೋಜನೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌