ಆ್ಯಪ್ನಗರ

ಮಗುವಾದ ಮೂರು ತಿಂಗಳಿಗೇ ನಟನೆಗೆ ವಾಪಸ್ಸಾದ ಅನು ಪ್ರಭಾಕರ್‌

ಮಗುವಿಗೆ ಜನ್ಮ ನೀಡಿ ಇನ್ನೂ ಮೂರು ತಿಂಗಳಾಗಿಲ್ಲ. ಆಗಲೇ ನಟನೆಯತ್ತ ವಾಪಸ್ಸಾಗಿದ್ದಾರೆ ನಟಿ ಅನು ಪ್ರಭಾಕರ್‌. ಬಣ್ಣದ ಮೇಲಿನ ಇವರ ಪ್ರೀತಿಗೆ ಅನುಕ್ತ ಸಿನಿಮಾ ತಂಡ ಪ್ರಶಂಸೆ ವ್ಯಕ್ತ ಪಡಿಸಿದೆ.

Vijaya Karnataka 23 Nov 2018, 10:11 am
ಅನು ಪ್ರಭಾಕರ್‌ ಮತ್ತೆ ನಟನೆಗೆ ವಾಪಸ್ಸಾಗಿದ್ದಾರೆ. ಮೂರು ತಿಂಗಳು ಮಗುವನ್ನು ಮನೆಯಲ್ಲೇ ಬಿಟ್ಟು, ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ನಟನೆಯ ಮೇಲಿನ ಇವರ ಅಭಿಮಾನಕ್ಕೆ ಅನುಕ್ತ ಸಿನಿಮಾ ತಂಡ ಪ್ರಶಂಸೆ ವ್ಯಕ್ತ ಪಡಿಸಿದೆ. ಮೊನ್ನೆಯಷ್ಟೇ ಈ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಅನು ಪ್ರಭಾಕರ್‌ ಬಗ್ಗೆ ಸ್ವತಃ ದರ್ಶನ್‌ ಕೂಡ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
Vijaya Karnataka Web anu-prabhakar


ಅನುಕ್ತ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಸಿನಿಮಾ. ಕಾರ್ತಿಕ್‌ ಅತ್ತಾವರ್‌ ಮುಖ್ಯ ಭೂಮಿಕೆಯ ಚಿತ್ರದಲ್ಲಿ ಬಹುಭಾಷಾ ನಟ ಸಂಪತ್‌ ರಾಜ್‌ ಕೂಡ ನಟಿಸಿದ್ದಾರೆ. ಅನು ಪ್ರಭಾಕರ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಶ್ವತ್‌ ಸ್ಯಾಮುವೆಲ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ನೋಬಿಲ್‌ ಪಾಲ್‌ ಸಂಗೀತ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌