ಆ್ಯಪ್ನಗರ

ಮೆಗಾ ಸ್ಟಾರ್ ಚಿರಂಜೀವಿ 'ಸೈರಾ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ!

ಇದೀಗ ಈ ಸಿನಿಮಾಗೆ ಸಂಬಂಧಿಸಿದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಚಿತ್ರದಲ್ಲಿ ನಿರೂಪಣೆ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಧ್ವನಿಯಲ್ಲಿ ಮೂಡಿ ಬರಲಿದೆ ಎಂದಿವೆ ಮೂಲಗಳು. ಈಗಾಗಲೆ ಚಿತ್ರದ ನಿರ್ದೇಶಕ ಸುರೇಂದರ್ ರೆಡ್ಡಿ ಈ ಬಗ್ಗೆ ಮಾತುಕತೆ ನಡೆಸಿದ್ದಾರಂತೆ.

Vijaya Karnataka Web 24 Apr 2019, 6:58 pm
ಸ್ವಾತಂತ್ರ್ಯ ಯೋಧ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಕಥೆಯಾಧಾರಿತ ಸಿನಿಮಾ 'ಸೈರಾ'. ಮೆಗಾ ಸ್ಟಾರ್ ಚಿರಂಜೀವಿ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾವನ್ನು ಅವರ ಪುತ್ರ ರಾಮ್ ಚರಣ್ ಭಾರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಸಹ ಅಭಿನಯಿಸಿರುವುದು ಗೊತ್ತೇ ಇದೆ.
Vijaya Karnataka Web anushka-shetty


ಇದೀಗ ಈ ಸಿನಿಮಾಗೆ ಸಂಬಂಧಿಸಿದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಚಿತ್ರದಲ್ಲಿ ನಿರೂಪಣೆ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಧ್ವನಿಯಲ್ಲಿ ಮೂಡಿ ಬರಲಿದೆ ಎಂದಿವೆ ಮೂಲಗಳು. ಈಗಾಗಲೆ ಚಿತ್ರದ ನಿರ್ದೇಶಕ ಸುರೇಂದರ್ ರೆಡ್ಡಿ ಈ ಬಗ್ಗೆ ಮಾತುಕತೆ ನಡೆಸಿದ್ದಾರಂತೆ.

ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎನ್ನುತ್ತಿವೆ ಟಾಲಿವುಡ್ ಮೂಲಗಳು. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಜಗಪತಿ ಬಾಬು, ವಿಜಯ್ ಸೇತುಪತಿ ಸೇರಿದಂತೆ ನಯನತಾರಾ, ತಮನ್ನಾ ಸಹ ಅಭಿನಯಿಸಿದ್ದಾರೆ.

ಸೈರಾ ನರಸಿಂಹ ರೆಡ್ಡಿ ಸಿನಿಮಾ ಕನ್ನಡಕ್ಕೂ ಡಬ್ ಆಗಲಿದೆ ಎಂಬ ಸುದ್ದಿ ಕೇಳಿಬಂದಿದೆ. ತೆಲುಗಿನಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದರೂ ಕನ್ನಡ, ತಮಿಳು ಮತ್ತು ಮಲೆಯಾಳಂನಲ್ಲೂ ಏಕಕಾಲಕ್ಕೆ ರಿಲೀಸ್‌ ಮಾಡುವುದಾಗಿ ನಿರ್ಮಾಪಕರು ಹೇಳಿಕೊಂಡಿದ್ದಾರೆ. ಹಾಗಾಗಿ ಸೈರಾ ಕನ್ನಡಕ್ಕೆ ಡಬ್‌ ಆಗುವುದು ಖಚಿತ ಎಂಬ ಮಾಹಿತಿ ಸಿಕ್ಕಂತಾಗಿದೆ.

ಬ್ರಿಟಿಷರ ವಿರುದ್ಧ ನಡೆದ ಗಿಡ್ಡಲುರು ಬಂಡಾಯದಲ್ಲಿ ಹೋರಾಟ ಮಾಡಿದ ಉಯ್ಯಾಲುವಾಡ ನರಸಿಂಹರೆಡ್ಡಿ ಕಥಾನಕ ಹೊಂದಿರುವ ಸಿನಿಮಾವಿದು. ಈ ಹೋರಾಟಗಾರನ ಜತೆ ಅವುಕು ರಾಜ ಕೈ ಜೋಡಿಸುತ್ತಾನೆ. ಈ ಕದನವನ್ನೇ ನಿರ್ದೇಶಕ ಸುರೇಂದರ್‌ ಚಿತ್ರ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌