ಆ್ಯಪ್ನಗರ

ಬಾಲಿವುಡ್‌ಗೆ ಭದ್ರಾವತಿ ಹುಡುಗಿ

ಭದ್ರಾವತಿ ಹುಡುಗಿ, ಮಾಜಿ ಸುಪ್ರಾ ನ್ಯಾಷನಲ್‌ ಪ್ರಶಸ್ತಿ ವಿಜೇತೆ ಆಶಾ ಭಟ್‌ ಬಾಲಿವುಡ್‌ಗೆ ಹಾರಿದ್ದಾರೆ. ವಿದ್ವತ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ.

Vijaya Karnataka 8 Mar 2019, 5:00 am
ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ ಕನ್ನಡದ ಹುಡುಗಿ ಈಗ ಸಿನಿಮಾ ನಟಿ. ಹಿಂದಿಯ ಜಂಗ್ಲಿ ಎಂಬ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆಡಿಷನ್‌ ಮೂಲಕ ಬಾಲಿವುಡ್‌ ಚಿತ್ರಕ್ಕೆ ಆಯ್ಕೆಯಾದ ಆಶಾ ಭಟ್‌ ಈಗ ಆಶಾವಾದಿಯಾಗಿದ್ದಾರೆ.
Vijaya Karnataka Web asha-bhat


ಅಮೆರಿಕ ಮೂಲಕ ಚುಕ್‌ ರುಸೆಲ್‌ ನಿರ್ದೇಶನದ ಚಿತ್ರ ಇದು. ಹಾಗಾಗಿ ಉಜ್ವಲ ಭವಿಷ್ಯದತ್ತ ಕಣ್ಣು ನೆಟ್ಟಿದ್ದಾರೆ ಆಶಾ. ಡಾನ್ಸ್‌ ಕಲಿತಿರುವ ಆಶಾ ಮಾರ್ಷಲ್‌ ಆರ್ಟ್ಸ್ ಪರಿಣಿತೆ ಕೂಡಾ. ನಾಟಕಗಳಲ್ಲಿ ನಟಿಸುತ್ತಾ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟ ಆಶಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಈಗ ಬಾಲಿವುಡ್‌ನಲ್ಲಿ ಅವಕಾಶ ಪಡೆದು ಅಚ್ಚರಿ ಮೂಡಿಸಿದ್ದಾರೆ.

'ನನ್ನ ಅಪ್ಪ ಅಮ್ಮ, ತಂಗಿ ಎಲ್ಲರ ಜತೆ ಕೂತು ನನ್ನ ಸಿನಿ ಬದುಕಿನ ಬಗ್ಗೆ ಯೋಚಿಸಿದೆ. ಸಿನಿಮಾರಂಗದಲ್ಲಿ ಯಾಕೆ ಪ್ರಯತ್ನಿಸಬಾರದು ಎನ್ನಿಸಿತು. ಬಾಲಿವುಡ್‌ ಚಿತ್ರಕ್ಕೆ ಕಾಲ್‌ ಮಾಡಿದ್ದರು. ನಾನು ಆಡಿಷನ್‌ಗೆ ಹೋದೆ. ಆಯ್ಕೆ ಆದೆ'ಎಂದಿದ್ದಾರೆ ಆಶಾ.

2014ರಲ್ಲಿ ಮಿಸ್‌ ಸುಪ್ರಾನ್ಯಾಷನಲ್‌ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು ಆಶಾ. ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರ್‌ ಪದವೀಧರೆ. ಟೈಮ್ಸ್‌ ಆಫ್‌ ಇಂಡಿಯಾ ಸಂಸ್ಥೆ ಏರ್ಪಡಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಮೊದಲು ಅವರು ಭಾಗವಹಿಸಿದ್ದರು. ಪ್ರತಿಷ್ಠಿತ ಕಂಪನಿಗಳ ಜಾಹಿರಾತಿಗೆ ಮಾಡೆಲ್‌ ಆಗಿ ಕಾಣಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌