ಆ್ಯಪ್ನಗರ

ಟ್ವಿಟರ್‌ ಟಾಪ್ ಟ್ರೆಂಡಿಂಗ್‍ನಲ್ಲಿ ಬಾದ್‌ಶಾ ಸುದೀಪ್; ಕಾರಣ ಗೊತ್ತಾ?

ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 2ಕ್ಕೆ ಸುದೀಪ್ 45 ವರ್ಷಗಳನ್ನು ಪೂರೈಸಲಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು #BaadshahSudeepBdayCDP ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವಿಟರ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.

Vijaya Karnataka Web 31 Aug 2019, 12:53 pm

ಕಿಚ್ಚ ಸುದೀಪ್ ಇದೇ ಸೆಪ್ಟೆಂಬರ್ 2ಕ್ಕೆ 45ನೇ ವರ್ಷಕ್ಕೆ ಅಡಿಯಿಡುತ್ತಿದ್ದಾರೆ. ಹುಟ್ಟುಹಬ್ಬಕ್ಕೂ ಎರಡು ದಿನಕ್ಕೂ ಮೊದಲೇ ಟ್ವಿಟರ್‌‍ನಲ್ಲಿ ಅಭಿಮಾನಿಗಳು ಹೊಸ ಹವಾ ಸೃಷ್ಟಿಸಿದ್ದಾರೆ. #BaadshahSudeepBdayCDP ಎಂಬ ಹ್ಯಾಶ್ ಟ್ಯಾಗ್ ಸೃಷ್ಟಿಸಿದ್ದು ಟ್ರೆಂಡ್ ಆಗಿದೆ.
Vijaya Karnataka Web sudeep-birthday


ಇಷ್ಟಕ್ಕೂ ಈ ಹ್ಯಾಶ್ ಟ್ಯಾಗ್ ಅರ್ಥ ಏನೆಂದರೆ ಬಾದ್‍ಶಾ ಸುದೀಪ್ ಹುಟ್ಟುಹಬ್ಬಕ್ಕೆ ಎಲ್ಲರೂ ಕಾಮನ್ ಡಿಸ್‌ಪ್ಲೇ ಪಿಕ್ಚರ್ (CDP) ಬಳಸಿ ಎಂಬುದು. ಈ ಹ್ಯಾಶ್‌ ಟ್ಯಾಗನ್ನು ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದು ಟ್ರೆಂಡ್ ಸೃಷ್ಟಿಸಿದೆ.
ಸುದೀಪ್‌ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಡಿಪಿ

ಕಳೆದ ವರ್ಷ ಅಭಿಮಾನಿ ಸಂಘ ಸುದೀಪ್‌ರ ಪೋಟ್ರೇಟ್‌ ಸಿದ್ಧಪಡಿಸಿತ್ತು. ಅದರಲ್ಲಿ ಸುದೀಪ್‌ ಪಡೆದಿರುವ ಪ್ರಶಸ್ತಿಗಳ ವಿವರವನ್ನು ಬರೆಯಲಾಗಿದ್ದು ಇದಕ್ಕೆ ಮೆಚ್ಚುಗೆ ಸೂಚಿಸಿದ್ದs ಸುದೀಪ್‌ ಪತ್ನಿ ಪ್ರಿಯಾ ತಮ್ಮ ಟ್ವಿಟ್ಟರ್‌ ಖಾತೆ ಡಿಪಿಯನ್ನಾಗಿಸಿಕೊಂಡಿದ್ದರು.
ಸಲ್ಮಾನ್ ಖಾನ್ ಎದೆಗೆ ಒದೆಯಲು ಹೇಳಿದರು, ನನ್ನಿಂದಾಗಲಿಲ್ಲ: ಕಿಚ್ಚ ಸುದೀಪ್

ಇದಕ್ಕೆ ಅಭಿಮಾನಿಗಳು ಮಾತ್ರ ಅಲ್ಲ, ಸ್ಯಾಂಡಲ್‌ವುಡ್‌ನ ಮಂದಿ ಕೂಡಾ ಮೆಚ್ಚುಗೆ ಸೂಚಿಸಿದ್ದರು. ಸುದೀಪ್‌ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳ ಫೇಸ್‌ಬುಕ್‌, ಟ್ವಿಟರ್‌ ಡಿಪಿ ಆಗುತ್ತಿದೆ. ಒಟ್ಟಾರೆ ಅಭಿಮಾನಿಗಳಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆಮಾಡಿದೆ. ಮುಖ್ಯವಾಗಿ ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ಸಿನಿಮಾ ಸಹ ರಿಲೀಸ್ ಆಗುತ್ತಿದೆ. ಒಂದು ರೀತಿ ಕಿಚ್ಚನಿಗೂ ಇದು ಡಬಲ್ ಸಂಭ್ರಮ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌