ಆ್ಯಪ್ನಗರ

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬಳೆಕೆಂಪ

ತಿಥಿ ಚಿತ್ರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಈರೇ ಗೌಡ ಈಗ ತಮ್ಮ ಮೊದಲ ನಿರ್ದೇಶನದ ಚಿತ್ರ 'ಬಳೆಕೆಂಪ' ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

Vijaya Karnataka 20 Oct 2018, 5:00 am
ತಿಥಿ ಚಿತ್ರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಈರೇ ಗೌಡ ಈಗ ತಮ್ಮ ಮೊದಲ ನಿರ್ದೇಶನದ ಚಿತ್ರ 'ಬಳೆಕೆಂಪ' ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
Vijaya Karnataka Web balekempa1


==

ರಾಮೇ ಗೌಡ ನಿರ್ದೇಶನದ ಚಿತ್ರ ತಿಥಿ. ಇದಕ್ಕೆ ಕತೆ, ಸ್ಕ್ರಿಪ್ಟ್‌ ಬರೆದಿದ್ದ ಈರೇಗೌಡ ನಂತರ ತಾವೇ ಸ್ವತಂತ್ರ ನಿರ್ದೇಶಕರಾಗಿ ಮುಂದೆ ಹೆಜ್ಜೆ ಇಟ್ಟರು. ಈಗ ಅವರ ನಿರ್ದೇಶನದ ಬಳೆಕೆಂಪ ವಿದೇಶಗಳನ್ನು ಸುತ್ತಲು ಪ್ರಾರಂಭಿಸಿದೆ. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈಗ ಆಸ್ಪ್ರೇಲಿಯಾದಲ್ಲಿ ನಡೆಯುವ ಪ್ರತಿಷ್ಟಿತ ಚಿತ್ರೋತ್ಸವ ಏಷಿಯಾ ಫೆಸಿಫಿಕ್‌ ಸ್ಕ್ರೀನ್‌ ಅವಾರ್ಡ್‌ ಸ್ಪರ್ಧೆಯ ಛಾಯಾಗ್ರಹಣ ವಿಭಾಗದಲ್ಲಿ ಸ್ಪರ್ಧೆಗೆ ನಾಮಿನೇಟ್‌ ಆಗಿದೆ. ಚಿತ್ರಕ್ಕೆ ಸೌಮ್ಯಾನಂದ ಶಾಹಿ ಛಾಯಾಗ್ರಹಣ ಮಾಡಿದ್ದಾರೆ.

ಬ್ರೆಜಿಲ್‌ನ ಸಾವೋ ಪಾಲೋದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನವ ನಿರ್ದೇಶಕರ ಸ್ಪರ್ಧೆಗೂ ಈ ಚಿತ್ರ ಆಯ್ಕೆಯಾಗಿದ್ದು ವಿಶೇಷ. ನವೆಂಬರ್‌ನಲ್ಲಿ ನಡೆಯಲಿರುವ ಪ್ರತಿಷ್ಟಿತ ಧರಮ್ಸಾಲಾ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ಗೂ ಈ ಚಿತ್ರ ಆಯ್ಕೆಯಾಗಿದೆ. ಸಮಾರೋಪ ಸಮಾರಂಭದ ಸಿನಿಮಾ ಆಗಿ ಬಳೆಕೆಂಪ ಆಯ್ಕೆಯಾಗಿದೆ. ನಾಸ್ಟರ್‌ಡಾಮ್‌ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬ್ರೈಟ್‌ ಫ್ಯೂಚರ್‌ ವಿಭಾಗದ ಸ್ಪರ್ಧೆಯಲ್ಲಿ ಇಂಟರ್‌ನ್ಯಾಷನಲ್‌ ಕ್ರಿಟಿಕ್ಸ್‌ ಫೆಡರೇಷನ್‌ನಿಂದ ಅವಾರ್ಡ್‌ ಗಳಿಸಿತು. ಮುಂಬೈನಲ್ಲಿ ನಡೆಯಲಿರುವ ಮಾಮಿ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಇಂಡಿಯಾ ಗೋಲ್ಡ್‌ ಸೆಕ್ಷನ್‌ನಲ್ಲಿ ಸ್ಪರ್ಧೆಗೆ ಆಯ್ಕೆಯಾಗಿದ್ದು, ಜಂಡರ್‌ ಈಕ್ವಾಲಿಟಿ ವಿಭಾಗದಲ್ಲಿ ಪ್ರಶಸ್ತಿಗೆ ನಾಮಾಂಕಿತಗೊಂಡಿದೆ.

ಹಳ್ಳಿಯೊಂದರಲ್ಲಿ ವಿವಾಹಿತ ಹೆಂಗಸು ಮತ್ತು ಪಕ್ಕದ ಮನೆಯಲ್ಲಿರುವ ಹರೆಯದ ಹುಡುಗನ ನಡುವಿನ ಅಫೇರ್‌ ಸುತ್ತ ಕತೆ ಹೆಣೆದಿದ್ದಾರೆ ಈರೇಗೌಡ. ಇಲ್ಲೀವರೆಗೆ 13 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌