ಆ್ಯಪ್ನಗರ

ಬೆಳ್ಳಿಪರದೆ ಬೆಳಗಿದ ಜಗಜ್ಯೊತಿ ಬಸವಣ್ಣ

ವಿಶ್ವಗುರು ಬಸವಣ್ಣನವರ ಬದುಕಿನ ಕುರಿತಾಗಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡ ಮೊದಲ ಸಿನಿಮಾ 'ಜಗಜ್ಯೊತಿ ಬಸವೇಶ್ವರ'. ಹೊನ್ನಪ್ಪ ಭಾಗವತರ ಈ ಸಿನಿಮಾದಲ್ಲಿ ಬಸವಣ್ಣನಾಗಿ ನಟಿಸಿದ್ದರು. ಐವತ್ತರ ದಶಕದ ಕೊನೆಯಲ್ಲಿ ಈ ಚಿತ್ರ ತೆರೆಕಂಡಿತು.

Vijaya Karnataka 7 May 2019, 7:00 am
ಮೇ.7ರಂದು ಭಕ್ತಿ ಭಂಡಾರಿ ಬಸವೇಶ್ವರ ಜಯಂತಿ. ಬೆಳ್ಳಿ ತೆರೆಯ ಮೇಲೆ ಬಸವಣ್ಣನಾಗಿ ಹಲವು ಕಲಾವಿದರು ಮಿಂಚಿದ್ದಾರೆ. ಅವರುಗಳಲ್ಲಿ ರಮೇಶ್‌ ಅರವಿಂದ್‌, ಅಶೋಕ್‌, ಹೊನ್ನಪ್ಪ ಭಾಗವತರ್‌, ಸಂಚಾರಿ ವಿಜಯ್‌ ಇವರ ಭಾವಚಿತ್ರಗಳನ್ನು ಇಂದಿನ ಲವಲವಿಕೆ ಸಂಚಿಕೆ ಮಾಸ್ಟ್‌ ಹೆಡ್‌ ಸುತ್ತ ಬಳಸಿಕೊಳ್ಳಲಾಗಿದೆ.
Vijaya Karnataka Web ramesh-aravind


ವಿಶ್ವಗುರು ಬಸವಣ್ಣನವರ ಬದುಕಿನ ಕುರಿತಾಗಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡ ಮೊದಲ ಸಿನಿಮಾ 'ಜಗಜ್ಯೊತಿ ಬಸವೇಶ್ವರ'. ಹೊನ್ನಪ್ಪ ಭಾಗವತರ ಈ ಸಿನಿಮಾದಲ್ಲಿ ಬಸವಣ್ಣನಾಗಿ ನಟಿಸಿದ್ದರು. ಐವತ್ತರ ದಶಕದ ಕೊನೆಯಲ್ಲಿ ಈ ಚಿತ್ರ ತೆರೆಕಂಡಿತು.

1983ರಲ್ಲಿ 'ಕ್ರಾಂತಿಯೋಗಿ ಬಸವಣ್ಣ' ಹೆಸರಿನಲ್ಲಿ ಮತ್ತೊಂದು ಚಿತ್ರ ತೆರೆ ಕಂಡಿತು. 12ನೇ ಶತಮಾನದ ಅನೇಕ ಕ್ರಾಂತಿಕಾರಿ ವಿಚಾರಗಳು ಸಿನಿಮಾದಲ್ಲಿದ್ದ ಕಾರಣಕ್ಕಾಗಿ, ಬಸವಣ್ಣನ ಪಾತ್ರ ಮಾಡಿದ್ದ ನಟ ಅಶೋಕ್‌, ಕನ್ನಡದ ಪ್ರೇಕ್ಷಕರ ಹೃದಯದಲ್ಲಿ ಬಸವಣ್ಣನಾಗಿಯೇ ಉಳಿದರು. ಅಲ್ಲದೇ, ದಾನಮ್ಮದೇವಿ ಸಿನಿಮಾದಲ್ಲಿ ರಾಮಕೃಷ್ಣ, ಮಹಾ ಶಿವಶರಣ ಹರಳಯ್ಯ ಚಿತ್ರದಲ್ಲಿ ರಮೇಶ್‌ ಅರವಿಂದ್‌, ಅಲ್ಲಮ ಚಿತ್ರದಲ್ಲಿ ಸಂಚಾರಿ ವಿಜಯ್‌ ಮತ್ತು ಕಿರುತೆರೆಗಾಗಿ ನಿರ್ಮಾಣವಾದ 'ಕ್ರಾಂತಿಯೋಗಿ ಬಸವಣ್ಣ' ಧಾರಾವಾಹಿಯಲ್ಲಿ ಹಿರಿಯ ನಟ ಶ್ರೀನಿವಾಸ್‌ ಮೂರ್ತಿ ಅವರು ಬಸವಣ್ಣನಾಗಿ ನಟಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌