ಆ್ಯಪ್ನಗರ

ನಟಿ ಭಾನುಪ್ರಿಯಾ ಮಾಜಿ ಪತಿ ವಿಧಿವಶ

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ನಟಿ, ಕೂಚಿಪುಡಿ ಕಲಾವಿದೆ ಭಾನುಪ್ರಿಯಾ ಅವರ ಮಾಜಿ ಪತಿ ಆದರ್ಶ್ ಹೃದಯಾಘತದಿಂದ ಮೃತಪಟ್ಟಿದ್ದಾರೆ. ಅಮೆರಿಕಾದಲ್ಲಿದ್ದ ಅವರ ನಿಧನದ ಸುದ್ದಿ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka Web 3 Feb 2018, 2:09 pm
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ನಟಿ, ಕೂಚಿಪುಡಿ ಕಲಾವಿದೆ ಭಾನುಪ್ರಿಯಾ ಅವರ ಮಾಜಿ ಪತಿ ಆದರ್ಶ್ ಹೃದಯಾಘತದಿಂದ ಮೃತಪಟ್ಟಿದ್ದಾರೆ. ಅಮೆರಿಕಾದಲ್ಲಿದ್ದ ಅವರ ನಿಧನದ ಸುದ್ದಿ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ಭಾನುಪ್ರಿಯಾ ತಮ್ಮ ವೈಯಕ್ತಿಕ ವಿಷಯಗಳನ್ನು ಮಾಧ್ಯಮಗಳಿಗೆ ತಿಳಿಸದೆ ಇದ್ದ ಕಾರಣ ಸುದ್ದಿ ತಡವಾಗಿದೆ.
Vijaya Karnataka Web bhanu priyas ex husband passes away
ನಟಿ ಭಾನುಪ್ರಿಯಾ ಮಾಜಿ ಪತಿ ವಿಧಿವಶ


ಆದರ್ಶ್ ನಿಧನಸುದ್ದಿ ತಿಳಿಯುತ್ತಿದ್ದಂತೆ ಭಾನುಪ್ರಿಯಾ ಅಮೆರಿಕಗೆ ದೌಡಾಯಿಸಿದ್ದಾರೆ. ಹೀರೋಯಿನ್ ಆಗಿ ಅವರಿಗೆ ಅವಕಾಶಗಳು ಕಡಿಮೆಯಾದಾಗ ಆದರ್ಶ್‍ರನ್ನು 1988ರಲ್ಲಿ ವರಿಸಿದ್ದರು. ಬಳಿಕ ಅಮೆರಿಕಗೆ ಹೊರಟುಹೋಗಿದ್ದರು. ಇವರ ದಾಂಪತ್ಯದ ಫಲವಾಗಿ ಒಬ್ಬ ಮಗಳು ಸಹ ಇದ್ದಾರೆ. ಆದರೆ ಭಿನ್ನಾಭಿಪ್ರಾಯಗಳ ಕಾರಣ ಇವರು 2005ರಲ್ಲಿ ಬೇರ್ಪಟ್ಟಿದ್ದರು.

ಬಳಿಕ ಭಾನುಪ್ರಿಯಾ ಮತ್ತೆ ಸಿನಿಮಾಗಳಲ್ಲಿ ಬಿಝಿಯಾಗಿದ್ದರು. ಪೋಷಕ ಕಲಾವಿದೆಯಾಗಿ, ತಾಯಿ ಪಾತ್ರಗಳಲ್ಲಿ ರಂಜಿಸಿದ್ದಾರೆ. ಚೆನ್ನೈನಲ್ಲಿ ಸೆಟ್ಲ್ ಆಗಿದ್ದರು. ಕನ್ನಡದ ರಸಿಕ, ದೇವರ ಮಗ, ಸಿಂಹಾದ್ರಿಯ ಸಿಂಹ, ಕದಂಬ, ಮೇಷ್ಟ್ರು, ಛತ್ರಪತಿ ಸಿನಿಮಾಗಳಲ್ಲಿ ಭಾನುಪ್ರಿಯಾ ಅಭಿನಯಿಸಿದ್ದಾರೆ.

ಮೂಲ: ತೆಲುಗು ಸಮಯಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌