ಆ್ಯಪ್ನಗರ

ಸದ್ದಿಲ್ಲದೆ ಸಿನಿಮಾ ಮುಗಿಸಿರು ಬಿಗ್ ಬಾಸ್‌ ಮನೆಯಲ್ಲಿರುವ ಕವಿತಾ

ಕವಿತಾ ಗೌಡ ಸದ್ದಿಲ್ಲದೇ ಮತ್ತೊಂದು ಸಿನಿಮಾ ಮಾಡಿದ್ದಾರೆ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮುನ್ನವೇ ಅವರು ಶೂಟಿಂಗ್‌ ಮುಗಿಸಿದ್ದಾರೆ.

Vijaya Karnataka 29 Oct 2018, 12:22 pm
ಕವಿತಾ ಗೌಡ ಸದ್ದಿಲ್ಲದೇ ಮತ್ತೊಂದು ಸಿನಿಮಾ ಮಾಡಿದ್ದಾರೆ. ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮುನ್ನವೇ ಅವರು ಶೂಟಿಂಗ್‌ ಮುಗಿಸಿದ್ದಾರೆ. ಈಗ ಆ ವಿಷಯ ಬಹಿರಂಗವಾಗಿದೆ. ನಿರ್ದೇಶಕ ಕಂ ನಟ ಎಂ.ಜಿ.ಶ್ರೀನಿವಾಸ್‌ ಆ್ಯಕ್ಷನ್‌ ಕಟ್‌ ಹೇಳಿರುವ ಬೀರ್‌ಬಲ್‌ ಸಿನಿಮಾದಲ್ಲಿ ಇವರು ಅತಿಥಿ ಪಾತ್ರ ಮಾಡಿದ್ದಾರಂತೆ. ಇದೊಂದು ಮಹತ್ವದ ಪಾತ್ರ ಎಂದಿದ್ದಾರೆ ನಿರ್ದೇಶಕರು.
Vijaya Karnataka Web kavitha-gowda


'ಇದೊಂದು ಮೂರು ಸರಣಿಯಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಮೊದಲ ಸರಣಿ ಈಗ ರೆಡಿಯಾಗುತ್ತಿದೆ. ಈ ಚಿತ್ರದಲ್ಲಿ ಕವಿತಾ ಗೌಡ ಮಹತ್ವದ ಪಾತ್ರ ಮಾಡಿದ್ದಾರೆ. ಅತಿಥಿ ಪಾತ್ರವಾದರೂ ಅದಕ್ಕೆ ತನ್ನದೇ ಆದ ಮಹತ್ವವಿದೆ' ಎಂದು ಹೇಳುವ ಮೂಲಕ ಕವಿತಾ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದ್ದಾರೆ ನಿರ್ದೇಶಕರು.

ಮೊದಲ ಸರಣಿಗೆ ಅವರು 'ಫೈಂಡಿಂಗ್‌ ವಜ್ರಮುನಿ' ಎಂದು ಹೆಸರಿಟ್ಟಿದ್ದಾರೆ. ಮುಂದಿನ ಸರಣಿಗಳಿಗೂ ಕ್ಯೂರಿಯಾಸಿಟಿ ಮೂಡುವಂಥ ಟ್ಯಾಗ್‌ಲೈನ್‌ ಇರಲಿದೆಯಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌