ಆ್ಯಪ್ನಗರ

ಬಾಲಿವುಡ್‌ ಬ್ಲ್ಯಾಕ್‌ ಬ್ಯೂಟಿ ಬಿಪಾಶಾ ಕನ್ನಡಕ್ಕೆ?

ಬಾಲಿವುಡ್‌ನ ಹಾಟ್‌ ಬೆಡಗಿ ಬಿಪಾಶಾ ಬಸು ಚಂದನವನಕ್ಕೆ ಎಂಟ್ರಿ ಕೊಡುವ ಸಾಧ್ಯತೆಯಿದೆ.

ಟೈಮ್ಸ್ ಆಫ್ ಇಂಡಿಯಾ 17 Jan 2017, 3:42 pm
ಬೆಂಗಳೂರು: ಬಾಲಿವುಡ್‌ನ ಹಾಟ್‌ ಬೆಡಗಿಯರಲ್ಲಿ ಬಿಪಾಶಾ ಬಸು ಕೂಡ ಒಬ್ಬರು. ಸದ್ಯಕ್ಕೆ ಈ ನೆರೆ ಮನೆಯ ಕಪ್ಪು ಸುಂದರಿ ನಮ್ಮ ಚಂದನವನಕ್ಕೆ ಎಂಟ್ರಿ ಕೊಡುವ ಸಾಧ್ಯತೆಯಿದೆ.
Vijaya Karnataka Web bipasha basu to make kannada debut
ಬಾಲಿವುಡ್‌ ಬ್ಲ್ಯಾಕ್‌ ಬ್ಯೂಟಿ ಬಿಪಾಶಾ ಕನ್ನಡಕ್ಕೆ?


ಸೆಂಚುರಿ ಸ್ಟಾರ್‌ ಶಿವರಾಜಕುಮಾರ್‌ ಅಭಿನಯದ 'ಲೀಡರ್‌' ಚಿತ್ರದಲ್ಲಿ ಬಿಪಾಶಾ ಐಟಂ ಡ್ಯಾನ್ಸ್‌ ಮಾಡಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ನರಸಿಂಹ ನಿರ್ದೇಶಿಸಿರೋ ಈ ಚಿತ್ರದಲ್ಲಿ ಶಿವಣ್ಣ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೈಲರ್‌ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದ್ದು ಶಿವಣ್ಣನಿಗೆ ನಾಯಕಿಯಾಗಿ ಪ್ರಣೀತಾ ಸುಭಾಷ್‌ ನಟಿಸುತ್ತಿದ್ದಾರೆ. ವಿಜಯ್‌ ರಾಘವೇಂದ್ರ, ಪ್ರಕಾಶ್‌ ಬೆಳವಾಡಿ ಹಾಗೂ ರಾಕ್‌ಲೈನ್‌ ವೆಂಕಟೇಶ್‌ ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.

ಒಟ್ಟಾರೆ ಚಿತ್ರ ತಂಡ ಬಿಪಾಶಾ ಬಸು ಅವರನ್ನ ಚಿತ್ರಕ್ಕೆ ಕರೆತರುವ ಪ್ರಯತ್ನದಲ್ಲಿ ನಿರತವಾಗಿದೆಯಂತೆ. ಆದರೆ ಬಿಟೌನ್‌ನ ಹಾಟ್‌ ಬೆಡಗಿ ಕನ್ನಡಕ್ಕೆ ಬರ್ತಾರಾ ಎಂದು ಕಾದುನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌