ಆ್ಯಪ್ನಗರ

ಮತ್ತೆ ಸೌತ್ ಇಂಡಸ್ಟ್ರಿ ಕಡೆ ಮುಖ ಮಾಡಿದ ನಟಿ ಐಶ್ವರ್ಯಾ ರೈ!

ಕಳೆದ ವರ್ಷ ಬಿಡುಗಡೆಯಾಗಿದ್ದ ಬಾಲಿವುಡ್ 'ಫನ್ನಿ ಖಾನ್' ಚಿತ್ರದ ನಂತರ ನಟಿ ಐಶ್ವರ್ಯಾ ರೈ ಮತ್ತೆ ಬಣ್ಣ ಹಚ್ಚಿರಲಿಲ್ಲ. ಆದರೆ, ಇದೀಗ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Vijaya Karnataka Web 5 Apr 2019, 6:46 pm
ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ಮತ್ತೆ ಸೌತ್ ಇಂಡಸ್ಟ್ರಿ ಕಡೆ ಮುಖ ಮಾಡಲಿದ್ದಾರೆ ಎನ್ನಲಾಗಿದೆ. ಹಾಗೆ ನೋಡಿದರೆ ವಿಶ್ವಸುಂದರಿ ಐಶ್ವರ್ಯಾ ರೈ ಅವರು ನಟಿಯಾಗಿದ್ದೇ ಸೌತ್ ಇಂಡಸ್ಟ್ರಿಯ 'ಇರುವರ್' ಚಿತ್ರದ ಮೂಲಕ. ಈ ಚಿತ್ರವನ್ನು ದಕ್ಷಿಣ ಭಾತ್ದ ಖ್ಯಾತ ನಿರ್ದೇಶಕರಾದ ಮಣಿರತ್ನಂ ಅವರು ನಿರ್ದೇಶಿಸಿದ್ದರು.
Vijaya Karnataka Web aishwarya0504


ಇರುವರ್ ಚಿತ್ರದ ನಂತರ ನಟಿ ಐಶ್ವರ್ಯಾ ಅವರು ಬಾಲಿವುಡ್ ಕಡೆ ಪ್ರಯಾಣ ಬೆಳೆಸಿ ಅಲ್ಲಿ ಯಶಸ್ವಿಯಾಗಿಬಿಟ್ಟರು. ಆ ಬಳಿಕ ಅವರು ಮತ್ತೆ ಸೌತ್ ಕಡೆ ಪ್ರಯಾಣ ಬೆಳೆಸಿರಲಿಲ್ಲ. ಬಾಲಿವುಡ್‌ನಲ್ಲಿ ತಮ್ಮ ಯಶಸ್ವಿ ಜರ್ನಿ ಮುಗಿಸಿ ಬಾಲಿವುಡ್ ಬಿಗ್ ಬಿ ಮಗ ಅಮಿತಾಬ್‌ ಬಚ್ಚನ್ ಮಗ ಅಭಿಷೇಕ್ ಅವರನ್ನು ಮದುವೆಯಾಗಿ ಸುಖಸಂಸಾರದಲ್ಲಿ ಮುಳುಗಿದ್ದಾರೆ. ಆದರೂ ಕೂಡ ಆಗೊಂದು ಈಗೊಂದು ಎಂಬಂತೆ ಸಿನಿಮಾ ಮಾಡುತ್ತಿದ್ದಾರೆ ಐಶ್ವರ್ಯಾ ರೈ.

ಕಳೆದ ವರ್ಷ ಬಿಡುಗಡೆಯಾಗಿದ್ದ ಬಾಲಿವುಡ್ 'ಫನ್ನಿ ಖಾನ್' ಚಿತ್ರದ ನಂತರ ನಟಿ ಐಶ್ವರ್ಯಾ ರೈ ಮತ್ತೆ ಬಣ್ಣ ಹಚ್ಚಿರಲಿಲ್ಲ. ಆದರೆ, ಇದೀಗ ಬಂದ ಸುದ್ದಿ ಪ್ರಕಾರ ಅವರು ಮತ್ತೆ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅಂದ್ಹಾಗೆ 'ಪೊನ್ನಿಯಿನ್ ಸೆಲ್ವನ್' ಐತಿಹಾಸಿಕ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆಯಂತೆ. ಚಿಯಾನ್ ವಿಕ್ರಮ್, ಮೋಹನ್ ಬಾಬು, ಕಾರ್ತಿಕ್ ಮತ್ತು ಜಯಂ ರವಿ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು'ಮಹಾನಟಿ' ಖ್ಯಾತಿಯ ನಟಿ ಕೀರ್ತಿ ಸುರೇಶ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಐಶ್ವರ್ಯಾ ರೈ ಕೂಡ ಬರಲಿದ್ದಾರೆ ಎನ್ನಲಾಗುತ್ತಿದೆ. ಅಚ್ಚರಿ ಎಂಬಂತೆ, ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ನಟಿ ಐಶ್ವರ್ಯಾ ರೈ ಮತ್ತು ಮಣಿರತ್ನಂ ಅವರಿಬ್ಬರ ಕಾಂಬಿನೇಷನ್ ಹೊಸದೇನೂ ಅಲ್ಲ. ಐಶ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದೇ ಮಣಿರತ್ನಂ ಸಿನಿಮಾ ಮೂಲಕ. 1997 ರಲ್ಲಿ ಮಣಿರತ್ನಂ ನಿರ್ದೇಶನದ 'ಇರುವನ್' ಚಿತ್ರದಲ್ಲಿ ನಾಯಕಿಯಾಗಿ ಮಿಂಚುವ ಮೂಲಕ ಈ ಮಾಜಿ ವಿಶ್ವ ಸುಂದರಿಯ ಸಿನಿಪಯಣ ಪ್ರಾರಂಭವಾಗಿತ್ತು. ಆ ನಂತರ ಮಣಿರತ್ನಂ ನಿರ್ದೇಶನದ 'ಗುರು' ಮತ್ತು 'ರಾವಣ್' ಸಿನಿಮಾಗಳಲ್ಲಿ ಐಶ್ವರ್ಯ ರೈ ಕಾಣಿಸಿಕೊಂಡಿದ್ದರು. ಈಗ ಮತ್ತೆ 9 ವರ್ಷಗಳ ಬಳಿಕ ಐಶ್ ಅವರನ್ನು ತಮಿಳು ಚಿತ್ರರಂಗಕ್ಕೆ ಕರೆತರುವ ಪ್ಲಾನ್ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌