ಆ್ಯಪ್ನಗರ

ಕನ್ನಡ ಕಲಿಯುತ್ತಿರುವ ಬಾಲಿವುಡ್‌ ನಟಿ ಪತ್ರಲೇಖಾ

ಹೊಸಬರ ಕನ್ನಡ ಚಿತ್ರ ವೇರ್‌ ಈಸ್‌ ಮೈ ಕನ್ನಡಕ ಈಗಾಗಲೇ ಸುದ್ದಿಯಲ್ಲಿದೆ. ಗಣೇಶ್‌ ನಟನೆಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿರುವ ಬಾಲಿವುಡ್‌ ನಟಿ ಪತ್ರಲೇಖಾ ಈಗಾಗಲೇ ಕನ್ನಡ ಕಲಿಯುತ್ತಿದ್ದಾರೆ.

Vijaya Karnataka 4 Apr 2019, 5:00 am
ಹೊಸಬರ ಕನ್ನಡ ಚಿತ್ರ ವೇರ್‌ ಈಸ್‌ ಮೈ ಕನ್ನಡಕ ಈಗಾಗಲೇ ಸುದ್ದಿಯಲ್ಲಿದೆ. ಗಣೇಶ್‌ ನಟನೆಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿರುವ ಬಾಲಿವುಡ್‌ ನಟಿ ಪತ್ರಲೇಖಾ ಈಗಾಗಲೇ ಕನ್ನಡ ಕಲಿಯುತ್ತಿದ್ದಾರೆ.
Vijaya Karnataka Web patralekha


ರಾಜ್‌ ಮತ್ತು ದಾಮಿನಿ ನಿರ್ದೇಶನದ ಕನ್ನಡ ಚಿತ್ರ ಇದು. ಚಿತ್ರದ ಟೈಟಲ್‌ ಈಗಾಗಲೆ ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ಬಾಲಿವುಡ್‌ ಸ್ಟಾರ್‌ ಹೀರೋ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಈಗ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿರುವ ನಟಿ ಪತ್ರಲೇಖಾ ಈ ಚಿತ್ರಕ್ಕಾಗಿ ಕನ್ನಡವನ್ನು ಕಲಿಯುತ್ತಿದ್ದಾರೆ.

ಇದು ಪತ್ರಲೇಖಾಗೆ ಮೊದಲ ಕನ್ನಡ ಚಿತ್ರ. ಕನ್ನಡ ಭಾಷೆಯನ್ನು ಕಲಿತೇ ನಟಿಸಬೇಕೆಂಬ ಆಸೆ ಅವರದು. ಹಾಗಾಗಿ ದಿನ ಬಿಟ್ಟು ದಿನ 2 ಗಂಟೆ ಕನ್ನಡ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ವಿಶೇಷ ಟೀಚರ್‌ನ್ನು ನೇಮಿಸಿಕೊಂಡಿದ್ದಾರೆ. ಕನ್ನಡ ಕಲಿಕೆಯನ್ನು ಎಂಜಾಯ್‌ ಮಾಡುತ್ತಿದ್ದೇನೆ ಎಂದಿದ್ದಾರೆ. 'ಈ ಚಿತ್ರದ ಶೂಟಿಂಗ್‌ಗಾಗಿ ಕಾದಿದ್ದೇನೆ. ಈ ಮೊದಲು ಇಂಥದ್ದೊಂದು ಪಾತ್ರದಲ್ಲಿ ನಾನು ನಟಿಸಿಲ್ಲ. ಬಹಳ ಕುತೂಹಲಕಾರಿಯಾಗಿದೆ' ಎಂದಿದ್ದಾರೆ ಅವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌