ಆ್ಯಪ್ನಗರ

ದೀಪ್‌ವೀರ್‌ ದಂಪತಿಗೆ ಶುಭ ಕೋರಿದ ಬಾಲಿವುಡ್‌

ಈ ಸಮಾರಂಭದಲ್ಲಿ ದೀಪಿಕಾ ಕೆಂಪುಡುಗೆಯಲ್ಲಿ ಅತಿಲೋಕ ಸುಂದರಿಯಂತೆ ಕಂಗೊಳಿಸುತ್ತಿದ್ದರೆ, ರಣವೀರ್‌ ತ್ರೀಪೀಸ್‌ ಟುಕ್ಸಾಡೊ ಸೂಟ್‌ ಧರಿಸಿದ್ದರು.

Vijaya Karnataka 3 Dec 2018, 7:29 am
ಬಾಲಿವುಡ್‌ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಂಪತಿ ಶನಿವಾರ ಮುಂಬಯಿಯ ಪಂಚತಾರಾ ಹೋಟೆಲ್‌ನಲ್ಲಿ ಅದ್ಧೂರಿ ರಿಸೆಪ್ಷನ್‌ ಏರ್ಪಡಿಸಿದ್ದರು. ಬಾಲಿವುಡ್‌ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರ ಈ ಕಾರ್ಯಕ್ರಮಕ್ಕೆ ಆಗಮಿಸಿ ನವ ದಂಪತಿಗೆ ಶುಭ ಕೋರಿದರು.
Vijaya Karnataka Web Deepveer


ಈ ಸಮಾರಂಭದಲ್ಲಿ ದೀಪಿಕಾ ಕೆಂಪುಡುಗೆಯಲ್ಲಿ ಅತಿಲೋಕ ಸುಂದರಿಯಂತೆ ಕಂಗೊಳಿಸುತ್ತಿದ್ದರೆ, ರಣವೀರ್‌ ತ್ರೀಪೀಸ್‌ ಟುಕ್ಸಾಡೊ ಸೂಟ್‌ ಧರಿಸಿದ್ದರು. ಆರತಕ್ಷತೆ ಕಾರ್ಯಕ್ರಮದಲ್ಲಿ ಶಾರುಖ್‌ ಖಾನ್‌, ಅಮಿತಾಭ್‌ ಬಚ್ಚನ್‌ ದಂಪತಿ, ಐಶ್ವರ್ಯಾ ರೈ, ಮುಖೇಶ್‌ ಅಂಬಾನಿ ಕುಟುಂಬ, ಕತ್ರಿನಾ ಕೈಫ್‌, ಕರೀನಾ ಕಪೂರ್‌ ಸೈಫ್‌ ಅಲಿ ಖಾನ್‌ ದಂಪತಿ, ಮಾಧುರಿ ದೀಕ್ಷಿತ್‌, ಸಂಜಯ್‌ ಲೀಲಾ ಭನ್ಸಾಲಿ ಸೇರಿದಂತೆ ಬಾಲಿವುಡ್‌ನ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಆಗಮಿಸಿದ್ದರು. ಕ್ರೀಡಾ ಕ್ಷೇತದಿಂದ ಕಪಿಲ್‌ ದೇವ್‌, ಸಚಿನ್‌ ತೆಂಡೂಲ್ಕರ್‌ ದಂಪತಿ, ಎಂ. ಎಸ್‌ ದೋನಿ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌