ಆ್ಯಪ್ನಗರ

ಕರಾಟೆ ಕಿಂಗ್ ಬ್ರೂಸ್ ಲೀ ಬಾಟಲ್ ಕ್ಯಾಪ್ ಚಾಲೆಂಜ್ ನೋಡಿದ್ದೀರಾ?

ಬಾಟಲ್ ಕ್ಯಾಪ್ ಚಾಲೆಂಜ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಸೆಳೆಯುತ್ತಿದೆ. ಬಾಲಿವುಡ್, ಸ್ಯಾಂಡಲ್‍ವುಡ್ ತಾರೆಗಳು ಈ ಚಾಲೆಂಜ್ ಮಾಡಿ ಬೀಗುತ್ತಿದ್ದಾರೆ. ಆದರೆ ಎಂದೋ ಈ ಚಾಲೆಂಜನ್ನು ಪೂರೈಸಿದ್ದರು ಮಾರ್ಷಲ್ ಆರ್ಟ್ಸ್ ಕಿಂಗ್ ಬ್ರೂಸ್ ಲೀ.

Vijaya Karnataka Web 8 Jul 2019, 6:39 pm
ಸಾಮಾಜಿಕ ಮಾಧ್ಯಮಗಳಲ್ಲಿ ಕಾಲಕ್ಕೆ ತಕ್ಕಂತೆ ಒಂದೊಂದು ಚಾಲೆಂಜ್ ಜಾಲ್ತಿಯಲ್ಲಿರುತ್ತದೆ. ಈಗ 'ಬಾಟಲ್ ಕ್ಯಾಪ್ ಚಾಲೆಂಜ್' ಹವಾ ನಡೆಯುತ್ತಿದೆ. ಇತ್ತೀಚೆಗೆ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಇದನ್ನು ಪೂರ್ಣಗೊಳಿಸುವ ಮೂಲಕ ಎಲ್ಲರ ಗಮನಸೆಳೆದಿದ್ದರು.
Vijaya Karnataka Web bruce-lee


ಸ್ಯಾಂಡಲ್‍ವುಡ್‌ನಲ್ಲೂ ಗೋಲ್ಡನ್ ಸ್ಟಾರ್ ಗಣೇಶ್, ಅರ್ಜುನ್ ಸರ್ಜಾ, ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ, ಯುವರಾಜ್ ಕುಮಾರ್, ರಚಿತಾ ರಾಮ್ ಸೇರಿದಂತೆ ಹಲವಾರು ಮಂದಿ ಈ ಚಾಲೆಂಜ್ ಮಾಡಿದ್ದಾರೆ. ಆದರೆ ಈಗ ನಮ್ಮ ನಡುವೆ ಇಲ್ಲದ ಬ್ರೂಸ್ ಲೀ ಎಂದೋ ಈ ಚಾಲೆಂಜ್ ಮಾಡಿದ್ದಾರೆ. [ಬಾಟಲ್‌ ಕ್ಯಾಪ್‌ ಚಾಲೆಂಜ್‌: ಸ್ಯಾಂಡಲ್‌ವುಡ್‌ ಹೀರೋಗಳು]

ಅದೂ ಕಾಲಿನಲ್ಲಿ ಅಲ್ಲದೆ, ಕೈಯಲ್ಲೂ ಅಲ್ಲದೆ ನಾನ್‌ಚಾಕ್ ಬಳಸಿ ಮಾಡಿರುವುದು ವಿಶೇಷ. ಒಂದಲ್ಲ ಮೂರು ಬಾಟಲಿಗಳ ಕ್ಯಾಪ್ ತೆಗೆದಿದ್ದಾರೆ. ಇದೀಗ ಈ ವೀಡಿಯೊ ಎಲ್ಲರನ್ನೂ ಚಕಿತಗೊಳಿಸಿತ್ತಿದೆ.

ಮಾರ್ಷಲ್ ಆರ್ಟ್ಸ್ ಎಂದರೆ ಯಾರಿಗೇ ಆಗಲಿ ಥಟ್ಟನೆ ನೆನಪಾಗುವ ಹೆಸರು ಬ್ರೂಸ್ ಲೀ. ಅವರು ಸಿನಿಮಾಗಳಲ್ಲಿ ಸ್ವತಃ ಸ್ಟಂಟ್ ಮಾಡುತ್ತಿದ್ದರು. ಇನ್ನು ನಾನ್‍ಚಾಕ್ ತಿರುಗಿಸಿದರೆ ಆ ವೇಗ ಕ್ಯಾಮೆರಾ ಕಣ್ಣಿಗೂ ಸಿಗುತ್ತಿರಲಿಲ್ಲ. ಅಂತಹ ಬ್ರೂಸ್ ಲೀ ಬಾಟಲಿ ಕ್ಯಾಪ್‌ಗಳನ್ನು ನಾನ್‍ಚಾಕ್ ಬಳಸಿ ತೆಗೆದಿರುವುದು ಅವರ ಅಭಿಮಾನಿಗಳನ್ನು ಚಕಿತಗೊಳಿಸುತ್ತಿದೆ. ಯಾವುದೋ ಕಾಲದಲ್ಲಿ ಈ ಚಾಲೆಂಜ್ ಪೂರೈಸಿದ್ದಾರೆ ಬ್ರೂಸ್ ಲೀ. ಈ ವೀಡಿಯೊವನ್ನು ಬ್ರೂಸ್ ಲೀ ಮಗಳು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಈ ವೀಡಿಯೊ ಟ್ರೆಂಡಿಂಗ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌