ಆ್ಯಪ್ನಗರ

ಧರ್ಮಸ್ಥಳಕ್ಕೆ ಸಂಬಂಧಿಸಿ ಡಾ ರಾಜ್ ಅವರಿಗೆ ಇದ್ದ 'ಕನಸು' ಏನು ಗೊತ್ತೇ?

ಈ ಮೊದಲು ಡಾ ರಾಜ್ ಅವರನ್ನು ಬಿಟ್ಟರೆ, ಸಿನಿಮಾ ತಾರೆಯರ ಪೈಕಿ, ಕಳೆದ ಬಾರಿ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಜೋಡಿ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಅದಾದ ಬಳಿಕ ಶಿವಣ್ಣ-ಗೀತಾ ದಂಪತಿಗಳು ಈ ಕಾರ್ಯಕ್ರಮಕ್ಕೆ ಮೂರನೇ ಸಿನಿ ತಾರಾ ಜೋಡಿ ಎನಿಸಿಕೊಂಡಿರುವುದು ವಿಶೇಷ ಸಂಗತಿ.

Vijaya Karnataka Web 3 May 2019, 3:13 pm
ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಧರ್ಮಸ್ಥಳದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿದ್ದಾರೆ. ಈ ಬಾರಿ ಡಾ ರಾಜ್ ಹಿರಿಯ ಪುತ್ರ, ನಟ ಶಿವರಾಜ್ ಕುಮಾರ್ ದಂಪತಿ ಸಮೇತರಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವಜೋಡಿಗಳಿಗೆ ಶುಭ ಹಾರೈಸಿದ್ದಾರೆ.
Vijaya Karnataka Web shivanna0305


ಅಲ್ಲಿ ನಡೆದ ಎಲ್ಲ ಕಾರ್ಯಕ್ರಮಗಳನ್ನು ನೋಡಿ ಎಲ್ಲ ನವದಂಪತಿಗಳಿಗೆ ಸ್ವತಃ ಶಿವರಾಜ್‌ಕುಮಾರ್ ಅವರು ಹಾರೈಸಿದ್ದು ವಿಶೇ‍ಷ ಎನ್ನಿಸುವಂತಿತ್ತು. ಅಲ್ಲಿ ಅವರು ಅಪ್ಪಾಜಿ ಡಾ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡು ಭಾವುಕರಾದ ಘಟನೆ ನಡೆದಿದೆ.

ಈ ಮೊದಲು ಡಾ ರಾಜ್ ಅವರನ್ನು ಬಿಟ್ಟರೆ, ಸಿನಿಮಾ ತಾರೆಯರ ಪೈಕಿ, ಕಳೆದ ಬಾರಿ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಜೋಡಿ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಅದಾದ ಬಳಿಕ ಶಿವಣ್ಣ-ಗೀತಾ ದಂಪತಿಗಳು ಈ ಕಾರ್ಯಕ್ರಮಕ್ಕೆ ಮೂರನೇ ಸಿನಿ ತಾರಾ ಜೋಡಿ ಎನಿಸಿಕೊಂಡಿರುವುದು ವಿಶೇಷ ಸಂಗತಿ.

ಈ ಸಂದರ್ಭದಲ್ಲಿ ಅಪ್ಪಾಜಿಯನ್ನು ನೆನೆಸಿಕೊಂಡು ಮಾತನಾಡಿದ ಶಿವಣ್ಣ " "ಅಪ್ಪಾಜಿಗೆ ಈ ಕಾರ್ಯಕ್ರಮದ ಸ್ವರ್ಣ ಮಹೋತ್ಸವ ಆಗಬೇಕು, ಅದರಲ್ಲಿ ಪಾಲ್ಗೊಳ್ಳಬೇಕು ಎಂಬ ಕನಸಿತ್ತು. ಆದರೆ ಅದು ನನಸಾಗಲಿಲ್ಲ. ಆದರೆ ನನಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ" ಎಂದಿದ್ದಾರೆ.

ಅಪ್ಪಾಜಿ ವಿಷಯವನ್ನು ಮಾತನಾಡುವ ವೇಳೆ ನಟ ಶಿವಣ್ಣ ಸಾಕಷ್ಟು ಭಾವುಕರಾಗಿದ್ದರು. ಶಿವಣ್ಣ ಭಾವಯಕರಾಗುತ್ತಿದ್ದಂತೆ ಅಲ್ಲಿ ನೆರೆದಿದ್ದ ಅದೆಷ್ಟೋ ಜನರ ಕಣ್ಣಾಲಿಗಳು ತನ್ನಿಂದ ತಾನೇ ಒದ್ದೆಯಾಗಿದ್ದವು. ಅಂದಹಾಗೆ, ಧರ್ಮಸ್ಥಳದ ಸಾಮೂಹಿಕ ವಿವಾಹ ಕಾರ್ಯಕ್ರಮ ಎಂದರೆ ಬಹಳಷ್ಟು ಜನರಿಗೆ ಇಂದಿಗೂ ಡಾ ರಾಜ್ ಕುಮಾರ್ ನೆನಪಾಗುತ್ತಾರೆ.

ಕಾರಣ, ಬಹಳಷ್ಟು ವರ್ಷಗಳ ಹಿಂದೆ, ಡಾ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನವಜೋಡಿಗಳಿಗೆ ಶುಭ ಹಾರೈಸಿದ್ದು ಇಂದಿಗೂ ಹಲವರ ಕಣ್ಣಲ್ಲಿ ಶಾಶ್ವತ ನೆನಪಾಗಿ ಉಳಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌