ಆ್ಯಪ್ನಗರ

ಜೆಡಿಎಸ್ ಶಾಸಕನಿಗೆ ತಣ್ಣಗೆ ತಿರುಗೇಟು ಕೊಟ್ಟ ದರ್ಶನ್!

ಕೆಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅವರು, ನಮ್ಮ ಸರ್ಕಾರ ಇದೆ. ನಟರ ಅಕ್ರಮದ ತನಿಖೆ ನಡೆಸುತ್ತೇವೆ. ನಟರು ಪ್ರಚಾರಕ್ಕೆ ಬಂದು ಜೆಡಿಎಸ್ ವಿರುದ್ಧ ಮಾತನಾಡಬಾರದು ಎಂದೆಲ್ಲಾ ಹೇಳಿದ್ದರು. ಈ ಬಗ್ಗೆ ಸಮಾಧಾನದಿಂದಲೇ ನಟ ದರ್ಶನ್ ಅವರು ಉತ್ತರಿಸಿದ್ದಾರೆ.

Vijaya Karnataka Web 21 Mar 2019, 11:13 am
ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಧಮ್ಕಿ ಹಾಕಿದ ಶಾಸಕನಿಗೆ ಸಮಾಧಾನವಾಗಿಯೇ ತಿರುಗೇಟು ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ, ರೆಬಲ್ ಸ್ಟಾರ್ ಪತ್ನಿ ಸುಮಲತಾ ಅಂಬರೀಷ ಪರ ನಟ ದರ್ಶನ್ ಅವರು ಪ್ರಚಾರಕ್ಕೆ ತೆರಳಿದ್ದರು. ಆ ವೇಳೆ ಕೆಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣ ಗೌಡ ಅವರು ದರ್ಶನ್ ಅವರಿಗೆ "ನಮ್ಮ ಸರ್ಕಾರ ಇದೆ. ನಟರ ಅಕ್ರಮದ ತನಿಖೆ ನಡೆಸುತ್ತೇವೆ. ನಟರು ಪ್ರಚಾರಕ್ಕೆ ಬಂದು ಜೆಡಿಎಸ್ ವಿರುದ್ಧ ಮಾತನಾಡಬಾರದು" ಎಂದು ಧಮ್ಕಿ ಹಾಕಿದ್ದಾರೆ.
Vijaya Karnataka Web darshan17032


ಈ ಬಗ್ಗೆ ಸಮಾಧಾನದಿಂದ ಉತ್ತರ ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು "ನಾನು ಇಲ್ಲಿ ನಿಂತಿದ್ದಕ್ಕೆ ಹಳೆ ಮ್ಯಾಟರ್ ಓಪನ್ ಆಗುತ್ತಿದೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಏನಾಗುತ್ತೋ ಆಗಲಿ. ಅದರಿಂದ ನನಗೆ ಸಂತೋಷ ಹಾಗೂ ಪ್ರೀತಿ ಎಲ್ಲವೂ ಬರುತ್ತೆ. ನಮ್ಮ ಬಗ್ಗೆ ಏನೇ ಮಾತನಾಡಿದರೂ ಕೋಪ ಮಾಡಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ನಮಗ್ಯಾರಿಗೂ ನೋವು ಕೂಡ ಆಗಲ್ಲ. ನಾವು ತಿರುಗಿ ಯಾರಿಗೂ ಏನೂ ಅನ್ನಲ್ಲ. ಅಮ್ಮನ ಪರವಾಗಿ ಇಂದಿನಿಂದಲೇ ನಾವು ಪರೇಡ್ ಶುರು ಮಾಡಿದ್ದೇವೆ. ನಿಮ್ಮ ಸೌಂಡ್ ಕೂಡ ಹೀಗೇಯೇ ಇರಬೇಕು" ಎಂದು ಹೇಳಿದ್ದಾರೆ.

ಕೆಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅವರು, ನಮ್ಮ ಸರ್ಕಾರ ಇದೆ. ನಟರ ಅಕ್ರಮದ ತನಿಖೆ ನಡೆಸುತ್ತೇವೆ. ನಟರು ಪ್ರಚಾರಕ್ಕೆ ಬಂದು ಜೆಡಿಎಸ್ ವಿರುದ್ಧ ಮಾತನಾಡಬಾರದು ಎಂದೆಲ್ಲಾ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಮಾತನಾಡಿದ ದರ್ಶನ್, ನಮ್ಮ ಬಗ್ಗೆ ಯಾರು ಏನೇ ಮಾತನಾಡಿದರೂ, ನಾವು ಬೇಜಾರು ಮಾಡಿಕೊಳ್ಳುವುದಿಲ್ಲ. ಕೋಪ ಮಾಡಿಕೊಳ್ಳುವುದಿಲ್ಲ. ಯಾರಿಗೂ ಏನೂ ಹೇಳುವುದಿಲ್ಲ. ನಮಗೆ ಮಂಡ್ಯ ಜನರ ಆಶೀರ್ವಾದ ಬೇಕಾಗಿದೆ. ಮಂಡ್ಯ ಜನ ಪಂಚೆ ಎತ್ತಿ ಕಟ್ಟಿ ನಿಂತರೆ ಏನೆಲ್ಲಾ ಆಗುತ್ತದೆ ಎಂಬುದನ್ನು ನಾನು ಬಲ್ಲೆ ಎಂದು ದರ್ಶನ್ ಹೇಳಿದ್ದಾರೆ.

ಸುಮಲತಾ ಅವರು ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿ " ತಾವು ಮಂಡ್ಯದ ಸೊಸೆ. ಅದರಲ್ಲೂ ಮುಖ್ಯವಾಗಿ ಮಂಡ್ಯದ ಮಳವಳ್ಳಿ ಸೊಸೆ. ದಿವಂಗತ ಅಂಬರೀಷ್ ಅವರು ಕನಸಾಗಿದ್ದ ಮಂಡ್ಯದ ಜನರ ಸೇವೆ ಮಾಡಲು ಚುನಾವಣೆಗೆ ನಿಂತಿದ್ದೇನೆ ಹೊರತೂ ಅಧಿಕಾರದ ಆಸೆಯಿಂದ ಅಲ್ಲ. ನನಗೆ ಅಧಿಕಾರದ ದಾಹ ಇದ್ದಿದ್ದರೆ ನಾನು ಈಗಿರುವ ಪಕ್ಷಗಳನ್ನೇ ಸೇರಿಕೊಂಡು ಅಧಿಕಾರ ಪಡೆದು ಹಾಯಾಗಿ ಇರಬಹುದಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆಲ್ಲುವ ರಿಸ್ಕ್ ತೆಗದುಕೊಳ್ಳಬೇಕಾಗಿರಲಿಲ್ಲ" ಎಂದು ಹೇಳಿ ಭಾರಿ ಚಪ್ಪಾಳೆ ಗಿಟ್ಟಿಸಿದ್ದಾರೆ.

ಒಟ್ಟಿನಲ್ಲಿ, ನಟಿ, ರೆಬಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಪರ ನಟರಾದ ದರ್ಶನ್, ಯಶ್ ಹಾಗೂ ಸುದೀಪ್ ಅವರು ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ. ಆದರೆ, ನಟ ಪುನೀತ್ ಅವರು "ತಮಗೂ ರಾಜಕಾರಣಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಂದಹಾಗೆ, ಮಂಡ್ಯದ ರಾಜಕೀಯದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಮುಂದೇನಾಗುತ್ತೊ ಕಾದು ನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌