ಆ್ಯಪ್ನಗರ

ಅಭಿಮಾನ ಪಕ್ಕಕ್ಕಿಡಿ; ಸ್ವಾಭಿಮಾನದಿಂದ ವೋಟ್ ಮಾಡಿ ಎಂದ ದರ್ಶನ್

ಮಲ್ಲನಕುಪ್ಪೆ ಗ್ರಾಮದಿಂದ ಪ್ರಚಾರ ಆರಂಭಸಿದ ಚಾಲೆಂಜಿಂಗ್ ಸ್ಟಾರ್ ಇಂದು ಮದ್ದೂರು ತಾಲೂಕಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಮಲ್ಲಮಕುಪ್ಪೆ ಗ್ರಾಮಸ್ಥರು ನಟ ದರ್ಶನ್‌ಗೆ ಅದ್ದೂರಿ ಸ್ವಾಗತಕೋರಿದ್ದಾರೆ. ಗ್ರಾಮಸ್ಥರು ಹೂ ಮಳೆಗರೆದು, ಹಾರ ಹಾಕಿ ಭರ್ಜರಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

Vijaya Karnataka Web 14 Apr 2019, 4:34 pm
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ಪ್ರಚಾರ ಮಾಡುತ್ತಿರುವ ಯಶ್ ಹಾಗೂ ದರ್ಶನ್ ಎರಡೂ ಸ್ಟಾರ್ ನಟರಿಗೆ ಪ್ರತಿ ಹಳ್ಳಿಗಳಲ್ಲೂ ಭರ್ಜರಿ ಸ್ವಾಗತ ಸಿಗುತ್ತಿದೆ. 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಹವಾ ಅಂತೂ ಮಂಡ್ಯದಲ್ಲಿ ತುಸು ಜೋರಾಗಿಯೇ ಇದೆ. ಹೋದಲೆಲ್ಲಾ ದರ್ಶನ್ ನೋಡುವುದಕ್ಕೆ ನೂಕುನುಗ್ಗಲು ಸೃಷ್ಟಿಯಾಗುತ್ತಿದೆ. ದರ್ಶನ್ ಸೌಜನ್ಯತೆ, ಅಭಿಮಾನಿಗಳ ಮೇಲಿಟ್ಟಿರುವ ಅಭಿಮಾನ ಎಲ್ಲವೂ ಪ್ರಚಾರದ ವೇಳೆ ಮತ್ತಷ್ಟು ಪ್ರಬಲವಾಗುತ್ತಿದೆ.
Vijaya Karnataka Web darshan14-2


ಈ ವೇಳೆ 'ಸಿನೆಮಾ ನಟರನ್ನ ನೋಡಲು ಜನ ಬರ್ತಾರೆ ಓಟ್ ಹಾಕಲ್ಲ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ಡಿ ಬಾಸ್ ದರ್ಶನ್ ತಿರುಗೇಟು
ಕೊಟ್ಟಿದ್ದಾರೆ. "ನಮ್ಮನ್ನ‌ ನೋಡಲು ಜನ ಬರ್ತಾರೆ, ಆದ್ರೆ ಆ ಜನ ಓಟ್ ಹಾಕಲ್ಲ ಅಂತಾರೆ. ನೀವು ಈಗ ನನ್ನ ನೋಡಲು ಬಂದಿದ್ದೀರಾ, ಇಲ್ಲ ಓಟ್ ಹಾಕಲು ಬಂದಿದ್ದೀರಾ" ಎಂದು ಜನರನ್ನು ದರ್ಶನ್ ಪ್ರಶ್ನೆ ಮಾಡಿದ್ದಾರೆ. ಆಗ ದರ್ಶನ್‌ಗೆ ಜನರು "ನಾವು ಓಟ್ ಹಾಕಲು ಬಂದಿದ್ದೇವೆ" ಎಂದು ಕೂಗಿ ಹೇಳಿದ್ದಾರೆ.

"ಒಂದು ಜೋಡೆತ್ತು ತೆಗೆದುಕೊಳ್ಳಲು ಒಂದುವರೆ ಲಕ್ಷ ಬೇಕು. ಹಸು ಕೊಳ್ಳಲು 70 ಸಾವಿರ ಬೇಕು. ನಾಯಿ ತಗೋತೀನಿ ಅಂದ್ರೂ 20 ಸಾವಿರ ಬೇಕು. ಅಂತದ್ರಲ್ಲಿ ನಮ್ಮ‌ ಮತಗಳನ್ನ 500-1000 ರೂ.ಗೆ ಮಾರಿಕೊಂಡು ನಾವು ಪ್ರಾಣಿಗಳಿಗಿಂತಲೂ ಕೀಳಾಗೋದು ಬೇಡ. ಈ ಬಾರಿ ಅಭಿಮಾನ ಪಕ್ಕಕ್ಕಿಟ್ಟು ಸ್ವಾಭಿಮಾನಕ್ಕಾಗಿ ಮತ ಚಲಾಯಿಸೋಣ. ಸುಮ ಅಮ್ಮನಿಗೆ ಮತಹಾಕಿ. ಒಂದು ಬಾರಿ ಅವಕಾಶ ಮಾಡಿಕೊಡಿ" ಎಂದು ಮದ್ದೂರಿನ ಮಲ್ಲನಕುಪ್ಪೆ ಗ್ರಾಮದಲ್ಲಿ ದರ್ಶನ್ ಹೇಳಿದ್ದಾರೆ.

ಮಲ್ಲನಕುಪ್ಪೆ ಗ್ರಾಮದಿಂದ ಪ್ರಚಾರ ಆರಂಭಸಿದ ಚಾಲೆಂಜಿಂಗ್ ಸ್ಟಾರ್ ಇಂದು ಮದ್ದೂರು ತಾಲೂಕಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಮಲ್ಲಮಕುಪ್ಪೆ ಗ್ರಾಮಸ್ಥರು ನಟ ದರ್ಶನ್‌ಗೆ ಅದ್ದೂರಿ ಸ್ವಾಗತಕೋರಿದ್ದಾರೆ. ಗ್ರಾಮಸ್ಥರು ಹೂ ಮಳೆಗರೆದು, ಹಾರ ಹಾಕಿ ಭರ್ಜರಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ದರ್ಶನ್ ಪ್ರಚಾರದ ವೇಳೆ, 'ಡಿ ಬಾಸ್' ಎಂಬ ಘೋಷಣೆ ಜೋರಾಗಿ ಮೊಳಗುತ್ತಿತ್ತು. ದರ್ಶನ್ ನೋಡಲು ಯುವಜನತೆ ಓಡೋಡಿ ಬಂದು ಮುಗಿ ಬೀಳುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌