ಆ್ಯಪ್ನಗರ

ಸಾವಿರಾರು ಗಿಡಗಳನ್ನು ನೆಡಲು ಮುಂದಾದ ದರ್ಶನ್‌

ಇಲ್ಲಿಯವರೆಗೆ ಪ್ರಾಣಿ ಪ್ರಿಯ ಎನ್ನಿಸಿಕೊಂಡಿದ್ದ ನಟ ದರ್ಶನ್‌ ಈಗ ಹಸಿರು ಪ್ರಿಯ. ನಟ ದರ್ಶನ್‌ ವನ್ಯ ಸಂರಕ್ಷಣಾ ರಾಯಭಾರಿಯಾದ ಬೆನ್ನಲ್ಲೇ ಈಗ ತಮ್ಮ ತೋಟದಲ್ಲಿ 1,800 ವಿವಿಧ ಜಾತಿಯ ಗಿಡಗಳನ್ನು ನೆಡಲು ಮುಂದಾಗಿದ್ದಾರೆ.

Vijaya Karnataka 8 Jun 2018, 5:00 am
ದರ್ಶನ್‌ ಮೈಸೂರಿನಲ್ಲಿ ಫಾರ್ಮ್‌ಹೌಸ್‌ ಮಾಡಿದ್ದು, ಇಲ್ಲಿ ಅನೇಕ ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ. ನಿರಂತರವಾಗಿ ಅಲ್ಲಿಗೆ ಹೋಗಿ ತಾವೇ ಖುದ್ದಾಗಿ ಅವುಗಳನ್ನು ನೋಡಿಕೊಳ್ಳುತ್ತಾರೆ. ಇವರ ಪರಿಸರ ಕಾಳಜಿ ನೋಡಿ ಅರಣ್ಯ ಇಲಾಖೆ ಬ್ರಾಂಡ್‌ ಅಂಬಾಸಡರ್‌ ಮಾಡಿದೆ. ಪರಿಸರ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ದರ್ಶನ್‌ ಹೆಗಲಿಗೆ ಹಾಕಿದೆ. ಈಗ ಸ್ವತಃ ದರ್ಶನ್‌ ತಮ್ಮ ತೋಟದಲ್ಲೇ ಅಪರೂಪದ ತಳಿಗಳನ್ನು ಬೆಳೆಸಿ ಇತರರಿಗೆ ಮಾದರಿಯಾಗಲು ಹೊರಟಿದ್ದಾರೆ. ಇದನ್ನು ನಟಿ ಸುಮಲತಾ ಹೊಗಳಿದ್ದಾರೆ.
Vijaya Karnataka Web darshan


ಸುಮಲತಾ ದರ್ಶನ್‌ರನ್ನು ಹೊಗಳಿ ಟ್ವೀಟ್‌ ಮಾಡಿದ್ದಾರೆ. 'ದರ್ಶನ್‌ ತಮ್ಮ ಸಾವಿರಾರು ಅಭಿಮಾನಿಗಳಿಗೆ ಬಾಸ್‌ ಆಗಲು ಈ ಒಂದು ಉದಾಹರಣೆ ಸಾಕು' ಎಂದಿದ್ದಾರೆ.

ಕಳೆದ 13 ವರ್ಷಗಳಿಂದ ತೋಟದಲ್ಲಿ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೆ, ಮೈಸೂರು ಝೂನಲ್ಲೂ ಒಂದು ಆನೆ ಮತ್ತು ಹುಲಿಯನ್ನು ದತ್ತು ಪಡೆದು, ವರ್ಷದ ಖರ್ಚನ್ನು ಭರಿಸುತ್ತಿದ್ದಾರೆ ದರ್ಶನ್‌. ಈಗ ಅವರು ಪರಿಸರವನ್ನು ಹಸಿರು ಮಾಡಲು ನಿರ್ಧರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌