ಆ್ಯಪ್ನಗರ

ನನ್ನ ಪಾತ್ರಕ್ಕಿಂತ ಕತೆಯ ಮೇಲೆ ನಂಬಿಕೆ ಇತ್ತು

ಪವನ್ ಒಡೆಯರ್ ನಿರ್ದೇಶನದ ಜೆಸ್ಸಿ ಸಿನಿಮಾದಲ್ಲಿ ಇಬ್ಬರು ನಾಯಕರು. ಅದರಲ್ಲಿ ರಘು ಮುಖರ್ಜಿ ಕೂಡ ಒಬ್ಬರು. ರಘು ಈ ಚಿತ್ರದಲ್ಲಿ ಸಾಫ್ಟ್‌ವೇರ್ ಹಿನ್ನೆಲೆ ಇರುವ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಇವರ ಜತೆಗಿನ ಮಾತುಕತೆ ಇಲ್ಲಿದೆ.

Vijaya Karnataka Web 23 Mar 2016, 4:50 am
* ಶರಣು ಹುಲ್ಲೂರು
Vijaya Karnataka Web character tale faith
ನನ್ನ ಪಾತ್ರಕ್ಕಿಂತ ಕತೆಯ ಮೇಲೆ ನಂಬಿಕೆ ಇತ್ತು


ಜೆಸ್ಸಿ ತ್ರಿಕೋನ ಪ್ರೇಮಕತೆ ಹೊಂದಿರುವ ಚಿತ್ರ. ಧನಂಜಯ್, ಪರೂಲ್ ಯಾದವ್ ಮತ್ತು ರಘು ಮುಖರ್ಜಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಶುಕ್ರವಾರ (ಮಾ.25) ಚಿತ್ರ ರಿಲೀಸ್ ಆಗುತ್ತಿದ್ದು, ತಮ್ಮ ಪಾತ್ರದ ಕುರಿತು ಹಲವು ಅನುಭವಗಳನ್ನು ತೆರೆದಿಟ್ಟಿದ್ದಾರೆ ರಘು.

* ಈಗಾಗಲೇ ಹಲವು ರೀತಿಯ ಪಾತ್ರಗಳನ್ನು ಪೋಷಿಸಿದ್ದೀರಿ. ಜೆಸ್ಸಿ ಸಿನಿಮಾದ ಕ್ಯಾರೆಕ್ಟರ್ ಅನ್ನು ಒಪ್ಪಿಕೊಂಡಿದ್ದು ಏಕೆ?

- ನಿರ್ದೇಶಕ ಪವನ್ ಒಡೆಯರ್ ಬಂದು ಪಾತ್ರದ ಬಗ್ಗೆ ಹೇಳಿದರು. ನನಗೆ ನನ್ನ ಪಾತ್ರಕ್ಕಿಂತಲೂ ಕತೆಯ ಮೇಲೆ ನಂಬಿಕೆ ಬಂತು. ತುಂಬ ಸುಂದರವಾದ ಕತೆಯನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ಡೈರೆಕ್ಟರ್. ಹೀಗಾಗಿ ಸಿನಿಮಾ ಮಾಡಲು ಒಪ್ಪಿಕೊಂಡೆ.

* ಇಲ್ಲಿ ಎಂಥ ಪಾತ್ರವನ್ನು ನಿರ್ವಹಿಸಿದ್ದೀರಿ? ಅದರ ಹಿನ್ನೆಲೆ ಏನು?

- ಸಾಫ್ಟ್‌ವೇರ್ ಹಿನ್ನೆಲೆಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಗುರಿ ಮುಟ್ಟುವ ತನಕ ಬೇರೆ ಏನನ್ನೂ ಯೋಚಿಸದ ವ್ಯಕ್ತಿ ಇವನು. ತುಂಬಾ ಗಟ್ಟಿಗ ಕೂಡ. ತಾನು ಪ್ರೀತಿಸುವವರಿಗಾಗಿ ಎಂತಹ ಕೆಲಸವನ್ನೂ ಮಾಡೋಕೆ ರೆಡಿ. ಅಲ್ಲದೇ ಎಂತಹ ತ್ಯಾಗಕ್ಕೂ ಸಿದ್ಧ. ಹೀಗಾಗಿ ಪಾತ್ರ ತುಂಬಾನೇ ವಿಭಿನ್ನವಾಗಿದೆ.

* ಸಿನಿಮಾಗಾಗಿ ವಿಶೇಷ ತಯಾರಿ ಮಾಡಿಕೊಳ್ಳಬೇಕು ಅಂತ ಅನಿಸಿತ್ತಾ?

- ಯಾವುದೇ ಕಸರತ್ತನ್ನೂ ಮಾಡದೇ, ನಾನು ಹೇಗೆ ಇದ್ದೇನೋ ಹಾಗೇ ಪಾತ್ರವನ್ನು ಮಾಡಬೇಕು ಅಂತ ನಿರ್ದೇಶಕರು ಹೇಳಿದ್ದರು. ಅಲ್ಲದೇ ಯಾವ ಪಾತ್ರಗಳು ಹೇಗಿರಬೇಕು ಅನ್ನುವ ಸ್ಪಷ್ಟ ಕಲ್ಪನೆ ನಿರ್ದೇಶಕರಲ್ಲಿತ್ತು. ಹೀಗಾಗಿ ತಯಾರಿ ಮಾಡಿಕೊಳ್ಳುವಂತಹ ಸಂದರ್ಭ ಬರಲಿಲ್ಲ. ನೈಜ ಎನ್ನುವಂತೆ ಪಾತ್ರ ಮಾಡಿದ್ದೇನೆ.

* ಜೆಸ್ಸಿಗೆ ಇಬ್ಬರು ನಾಯಕರು. ನಿಮ್ಮ ಮತ್ತು ಮತ್ತೊಬ್ಬ ನಾಯಕರ ನಡುವೆ ಕಾಂಪಿಟೇಷನ್ ಏರ್ಪಟ್ಟಿತ್ತಾ?

- ನಾನು ಮತ್ತು ಧನಂಜಯ್ ಇಬ್ಬರೂ ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದೇವೆ. ಅದು ಖುಷಿ ಸಂಗತಿ. ಪಾತ್ರದ ಬಗ್ಗೆ ಹೇಳುವುದಾದರೆ, ಇಬ್ಬರದ್ದೂ ವಿಭಿನ್ನ ಕ್ಯಾರೆಕ್ಟರ್. ಎರಡೂ ಪಾತ್ರಗಳು ಹೀಗೇ ಬರಬೇಕು ಅನ್ನುವುದು ಮೊದಲೇ ಫಿಕ್ಸ್ ಆಗಿತ್ತು. ಹೀಗಾಗಿ ನಮ್ಮ ಪಾತ್ರಗಳನ್ನು ನಾವೇ ಚೆನ್ನಾಗಿಯೇ ನಿಭಾಯಿಸಿದ್ದೇವೆ. ಧನಂಜಯ್ ಸಿಂಪಲ್ ವ್ಯಕ್ತಿ. ಹೀಗಾಗಿ ಕಾಂಪಿಟೇಷನ್ ಅಂತ ಏನೂ ಇರಲಿಲ್ಲ.

* ಪರೂಲ್ ಯಾದವ್ ಮತ್ತು ನಿಮ್ಮ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಹೇಗೆ ಮೂಡಿಬಂದಿದೆ?

- ಪರೂಲ್ ಕೂಡ ತುಂಬ ಚೆನ್ನಾಗಿ ನಟಿಸಿದ್ದಾರೆ. ಪ್ಯಾರ‌್ಗೆ ಆಗ್ಬುಟ್ಟೈತೆ ಹಾಡಿನಲ್ಲಿ ಸಖತ್ ಆಗಿ ಕಾಣಿಸಿದ್ದರು ಇವರು. ಜೆಸ್ಸಿ ಸಿನಿಮಾದಲ್ಲಿ ಇನ್ನಷ್ಟು ಕಲರ್‌ಫುಲ್ ಆಗಿ ಕಂಡಿದ್ದಾರೆ. ಗ್ಲಾಮ್ ಮತ್ತು ನಟನೆಗೆ ಹೇಳಿ ಮಾಡಿಸಿದ ನಟಿ.

* ಮತ್ತೆ ಕಿರುತೆರೆಗೆ ಹಾರಿದ್ದೀರಿ. ಸಿನಿಮಾದಿಂದ ಕೊಂಚ ಬಿಡುವು ಬೇಕು ಅಂತ ಅಲ್ಲಿಗೆ ಹೋಗಿದ್ದೀರಾ?

- ಹಾಗೇನೂ ಇಲ್ಲ. ಈ ಬಾರಿಯ ಷೋ ವಿಭಿನ್ನವಾಗಿತ್ತು. ಅಲ್ಲದೇ ಹುಡುಗಿಯರು ತಮ್ಮ ಸಾಮರ್ಥ್ಯ ತೋರಿಸುವ ಕಾರ‌್ಯಕ್ರಮ ಇದಾಗಿತ್ತು. ಹೀಗಾಗಿ ಒಪ್ಪಿಕೊಂಡೆ. ಈ ಮಧ್ಯೆ ಮೂರ‌್ನಾಲ್ಕು ಸಿನಿಮಾ ಕತೆಯನ್ನೂ ಕೇಳಿದ್ದೇನೆ.

---- ಜೀವನದಲ್ಲಿ ಇಂಥದ್ದೂ ಆಗಬಹುದಾ ಅನ್ನುವ ಕುತೂಹಲದ ಕತೆ ಜೆಸ್ಸಿ ಸಿನಿಮಾದಲ್ಲಿದೆ. ಅಲ್ಲದೇ ಪವನ್ ಟೀಮ್ ತುಂಬಾ ಸ್ಟ್ರಾಂಗ್. ಹೀಗಾಗಿ ಈ ಸಿನಿಮಾ ಮಾಡುವುದಕ್ಕೆ ಒಪ್ಪಿಕೊಂಡೆ. ಈ ಪಾತ್ರ ತುಂಬ ಖುಷಿ ಕೊಟ್ಟಿದೆ.

- ರಘು ಮುಖರ್ಜಿ, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌