ಆ್ಯಪ್ನಗರ

ಗಣೇಶ್‌-ರಶ್ಮಿಕಾ ಫಸ್ಟ್‌ ನೈಟ್‌ 'ಚಮಕ್‌' ಸೂಪರ್‌

ಕೆಲ ತಿಂಗಳ ಹಿಂದೆ 'ಆಪರೇಷನ್‌ ಅಲಮೇಲಮ್ಮ'ನಂತಹ ಸೂಪರ್‌ ಹಿಟ್‌ ಚಿತ್ರ ನೀಡಿದ ಸುನಿ, ಈಗ ಚಮಕ್‌ ಕೊಡಲು ರೆಡಿಯಾಗಿದ್ದಾರೆ.

Vijaya Karnataka Web 28 Nov 2017, 12:25 pm
'ಸಿಂಪಲ್ಲಾಗೊಂದ್‌ ಲವ್‌ಸ್ಟೋರಿ' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ನಿರ್ದೇಶಕ ಸುನಿ. ಸಿಂಪಲ್‌ ಕಥೆಗಳನ್ನೇ ಇಂಟ್ರೆಸ್ಟಿಂಗ್‌ ಆಗಿ ಪ್ರೇಕ್ಷಕರ ಮುಂದಿಡುವುದರಲ್ಲಿ ಸುನಿ ಸಿದ್ಧ ಹಸ್ತರು. ಕೆಲ ತಿಂಗಳ ಹಿಂದೆ 'ಆಪರೇಷನ್‌ ಅಲಮೇಲಮ್ಮ'ನಂತಹ ಸೂಪರ್‌ ಹಿಟ್‌ ಚಿತ್ರ ನೀಡಿದ ಸುನಿ, ಈಗ ಚಮಕ್‌ ಕೊಡಲು ರೆಡಿಯಾಗಿದ್ದಾರೆ.
Vijaya Karnataka Web check out chamak teaser
ಗಣೇಶ್‌-ರಶ್ಮಿಕಾ ಫಸ್ಟ್‌ ನೈಟ್‌ 'ಚಮಕ್‌' ಸೂಪರ್‌


'ಚಮಕ್‌' ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜತೆ 'ಕಿರಿಕ್‌ ಪಾರ್ಟಿ' ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವುದು ಮತ್ತೊಂದು ವಿಶೇಷ. ಜುಲೈ 2, ಗಣೇಶ್‌ ಹುಟ್ಟುಹಬ್ಬದಂದು 'ಚಮಕ್‌' ಚಿತ್ರದ ಸಣ್ಣ ವೀಡಿಯೋ ತುಣುಕೊಂದು ಬಿಡುಗಡೆಯಾಗಿತ್ತು. ಅದರಲ್ಲಿ ಗಣೇಶ್‌ ಮದುಮಗನ ಗೆಟಪ್‌ನಲ್ಲಿ ಕಾಣಿಸಿಕೊಂಡು ಸಖತ್‌ 'ಚಮಕ್‌' ನೀಡಿದ್ದರು.



ಇದೀಗ 'ಚಮಕ್‌' ಟೀಸರ್‌ ಬಿಡುಗಡೆಯಾಗಿದ್ದು, ಸಖತ್‌ ವೈರಲ್‌ ಆಗುತ್ತಿದೆ. ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಫಸ್ಟ್‌ ನೈಟ್‌ ದೃಶ್ಯವನ್ನು ಮಜವಾಗಿ ತೋರಿಸಿದ್ದಾರೆ ಸಿಂಪಲ್‌ ಸುನಿ. ಇನ್ನು ಟೀಸರ್‌ ನೋಡಿದ ಗೋಲ್ಡನ್‌ ಸ್ಟಾರ್‌ ಅಭಿಮಾನಿಗಳು ಟ್ರೇಲರ್‌ ಹಾಗೂ ಚಿತ್ರದ ಬಿಡುಗಡೆಗೆ ತುದಿಗಾಲಲ್ಲಿ ಕಾಯುತ್ತಿರುವುದಂತೂ ಸುಳ್ಳಲ್ಲ. ಮುಂದಿನ ತಿಂಗಳು ಡಿಸೆಂಬರ್‌ ಕೊನೆಯಲ್ಲಿ 'ಚಮಕ್‌' ಬಿಡುಗಡೆಯಾಗುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌