ಆ್ಯಪ್ನಗರ

ತೆಲುಗಿನಲ್ಲಿ ಕಿರಿಕ್‌ ಬೆಡಗಿಯ ಮಿಂಚು

ಕಿರಿಕ್‌ ಪಾರ್ಟಿ ಚಿತ್ರ ಹಿಟ್‌ ಆಗಿದ್ದೇ ತಡ, ಚಿತ್ರದಲ್ಲಿ ಅಭಿನಯಿಸಿದ ಹೊಸ ಮುಖಗಳಿಗೆ ಭರ್ಜರಿ ಆಫರ್‌ಗಳ ಸುರಿಮಳೆಯೇ ಆಗುತ್ತಿದೆ.

Vijaya Karnataka Web 19 Nov 2017, 12:45 pm
'ಕಿರಿಕ್‌ ಪಾರ್ಟಿ' ಚಿತ್ರ ಹಿಟ್‌ ಆಗಿದ್ದೇ ತಡ, ಚಿತ್ರದಲ್ಲಿ ಅಭಿನಯಿಸಿದ ಹೊಸ ಮುಖಗಳಿಗೆ ಭರ್ಜರಿ ಆಫರ್‌ಗಳ ಸುರಿಮಳೆಯೇ ಆಗುತ್ತಿದೆ. ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದವರಲ್ಲಿ ರಶ್ಮಿಕಾ ಮಂದಣ್ಣ ಒಬ್ಬರು. ಸಾನ್ವಿಯಾಗಿ ಕನ್ನಡಿಗರ ಹೃದಯಕ್ಕೆ ಲಗ್ಗೆಯಿಟ್ಟ ಚೆಲುವೆ ಈಗ ತೆಲುಗಿನಲ್ಲೂ ಮಿಂಚಲು ಸಿದ್ಧರಾಗಿದ್ದಾರೆ.
Vijaya Karnataka Web check out the chalo movie teaser starrer rashmika
ತೆಲುಗಿನಲ್ಲಿ ಕಿರಿಕ್‌ ಬೆಡಗಿಯ ಮಿಂಚು


ರಶ್ಮಿಕಾ ಮಂದಣ್ಣ ಕನ್ನಡವಷ್ಟೇ ಅಲ್ಲದೆ ಟಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಟಾಲಿವುಡ್‌ನಲ್ಲಿ ರಶ್ಮಿಕಾ ಅಭಿನಯದ 'ಚಲೋ' ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಸಖತ್‌ ವೈರಲ್‌ ಆಗಿದೆ. ಈಗಾಗಲೇ ಪೋಸ್ಟರ್‌ ಮೂಲಕ ಕುತೂಹಲ ಹೆಚ್ಚಿಸಿದ್ದ ಈ ಚಿತ್ರ, ಟೀಸರ್‌ ಮೂಲಕ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.



ಅಂದಹಾಗೆ ಚಿತ್ರದ ಟೀಸರ್‌ನಲ್ಲಿ ರಶ್ಮಿಕಾ ಕನ್ನಡಕ ಹಾಕಿಕೊಂಡು, ಪುಸ್ತಕ ಹಿಡಿದು ಸಖತ್ತಾಗಿ ಮಿಂಚಿದ್ದಾರೆ. 'ಕಿರಿಕ್‌ ಪಾರ್ಟಿ'ಯ ಸಾನ್ವಿ ಛಾಯೆ ಇಲ್ಲಿಯೂ ಮುಂದುವರೆದಿರುವುದು ವಿಶೇಷ. 'ಚಲೋ' ಚಿತ್ರದಲ್ಲಿ ನಾಗ ಶೌರ್ಯ ನಾಯಕನಾಗಿ ಅಭಿನಯಿಸಿದ್ದಾರೆ. ವೆಂಕಿ ಕುದುಮುಲಾ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ಕನ್ನಡದ ನಟ ಅಚ್ಯುತ್‌ ಕುಮಾರ್‌ ಕೂಡ ಪಾತ್ರವೊಂದನ್ನು ನಿಭಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌