ಆ್ಯಪ್ನಗರ

ಹಂಬಲ್‌ ಪೊಲಿಟಿಶಿಯನ್‌ ಆಗಿ ಡ್ಯಾನಿಶ್‌ ಮಿಂಚಿಂಗ್‌

ಡ್ಯಾನಿಶ್‌ ಸೇಟ್‌ ಅಭಿನಯದ 'ಹಂಬಲ್‌ ಪೊಲಿಟಿಶಿಯನ್‌ ನೋಗರಾಜ್‌' ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ವಿಕ ಸುದ್ದಿಲೋಕ 2 May 2017, 3:06 pm
ಡ್ಯಾನಿಶ್‌ ಸೇಟ್‌ ಅಭಿನಯದ 'ಹಂಬಲ್‌ ಪೊಲಿಟಿಶಿಯನ್‌ ನೋಗರಾಜ್‌' ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Vijaya Karnataka Web chekout humble politician nograj official teaser
ಹಂಬಲ್‌ ಪೊಲಿಟಿಶಿಯನ್‌ ಆಗಿ ಡ್ಯಾನಿಶ್‌ ಮಿಂಚಿಂಗ್‌


ತಮ್ಮ ಕಾಮಿಡಿ ಮಾತುಗಳಿಂದಲೇ ಎಲ್ಲರನ್ನೂ ಮರಳು ಮಾಡುವ ಡ್ಯಾನಿಶ್‌, ಟೀಸರ್‌ನಲ್ಲೂ ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ. ಸಖತ್‌ ಪಂಚಿಂಗ್‌ ಡೈಲಾಗ್‌ಗಳು ತುಂಬಿರುವ ಈ ಟೀಸರ್‌ ಎಲ್ಲರನ್ನೂ ಆಕರ್ಷಿಸುತ್ತಿದೆ. ರಾಜಕಾರಣಿಯೊಬ್ಬನ ಸುತ್ತ ಸುತ್ತುವ ಈ ಕಥೆ, ಸಿನಿರಸಿಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಈ ಚಿತ್ರದಲ್ಲಿ ಹಂಬಲ್‌ ಪೊಲಿಟಿಶಿಯನ್‌ ಆಗಿ ಸೋಷಿಯಲ್‌ ಮೀಡಿಯಾ ಸ್ಟಾರ್‌ ಡ್ಯಾನಿಶ್‌ ಸೇಟ್‌ ಮಿಂಚಿದ್ದಾರೆ. ಚಿತ್ರದ ತಾರಾಗಣದಲ್ಲಿ ಶ್ರುತಿ ಹರಿಹರನ್‌, ರೋಜರ್‌ ನಾರಾಯಣ್‌, ಸುಮುಖಿ ಸುರೇಶ್‌, ವಿಜಯ್‌ ಚೆಂದೂರುಹಾಗೂ ಇನ್ನಿತರರು ಕಾಣಿಸಿಕೊಂಡಿದ್ದಾರೆ. 'ಹಂಬಲ್‌ ಪೊಲಿಟಿಶಿಯನ್‌ ನೋಗರಾಜ್‌' ಚಿತ್ರವನ್ನು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ, ಹೇಮಂತ್‌ ಎಮ್‌ ರಾವ್‌ ಮತ್ತು ನಟ ರಕ್ಷಿತ್‌ ಶೆಟ್ಟಿ ಜಂಟಿಯಾಗಿ ನಿರ್ಮಿಸಿದ್ದಾರೆ.



ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಸಾದ್‌ ಖಾನ್‌ ನಿಭಾಯಿಸಿದ್ದು, ಜೀತ್‌ ಸಿಂಗ್‌ ಸಂಗೀತ ಸಂಯೋಜಿಸಿದ್ದಾರೆ. ತುಂಬ ಮಜವಾಗಿರೋ ಈ ಟೀಸರನ್ನ ನೀವೂ ಒಮ್ಮೆ ನೋಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌