ಆ್ಯಪ್ನಗರ

ಚಾಲೆಂಜಿಂಗ್ ಸ್ಟಾರ್ ಮತ್ತೆ ಕ್ಯಾಮೆರಾ ಮುಂದೆ ನಿಲ್ಲೋದು ಯಾವಾಗ?

ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಏಪ್ರಿಲ್ 18ರ ಬಳಿಕ ಪಾಲ್ಗೊಳ್ಳಲಿದ್ದಾರೆ ಎಂದಿವೆ ಮೂಲಗಳು. ದರ್ಶನ್‍ರ ಮುಂದಿನ ಸಿನಿಮಾ ತರುಣ್ ಸುಧೀರ್ ಆ್ಯಕ್ಷನ್ ಕಟ್‌‍ನಲ್ಲಿ ಮೂಡಿಬರುತ್ತಿದ್ದು 'ರಾಬರ್ಟ್' ಎಂದು ಹೆಸರಿಡಲಾಗಿದೆ.

TIMESOFINDIA.COM 22 Mar 2019, 2:34 pm
ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಸುಮಲತಾ ಪರ ಪ್ರಚಾರದಲ್ಲಿ ಬಿಝಿಯಾಗಿದ್ದಾರೆ. ಏಪ್ರಿಲ್ 18ರ ತನಕ ಅವರು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದು, ಅಲ್ಲಿಯವರೆಗೂ ಬಿಝಿಯಾಗಿರುತ್ತಾರೆ.
Vijaya Karnataka Web darshan


ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಏಪ್ರಿಲ್ 18ರ ಬಳಿಕ ಪಾಲ್ಗೊಳ್ಳಲಿದ್ದಾರೆ ಎಂದಿವೆ ಮೂಲಗಳು. ದರ್ಶನ್‍ರ ಮುಂದಿನ ಸಿನಿಮಾ ತರುಣ್ ಸುಧೀರ್ ಆ್ಯಕ್ಷನ್ ಕಟ್‌‍ನಲ್ಲಿ ಮೂಡಿಬರುತ್ತಿದ್ದು 'ರಾಬರ್ಟ್' ಎಂದು ಹೆಸರಿಡಲಾಗಿದೆ.

ಸದ್ಯಕ್ಕೆ ಚುನಾವಣಾ ಪ್ರಚಾರದಲ್ಲಿ ಸಖತ್ ಬಿಝಿಯಾಗಿರುವ ದರ್ಶನ್ ಅದು ಮುಗಿದ ಬಳಿಕವಷ್ಟೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ. ಹೊಸ ಚಿತ್ರದ ಚಿತ್ರೀಕರಣ ಏಪ್ರಿಲ್ 19ರಿಂದ ಆರಂಭವಾಗಲಿದೆ. ಚಿತ್ರತಂಡ ಸಹ ದರ್ಶನ್ ಆಗಮನಕ್ಕಾಗಿ ಕಾಯುತ್ತಿದೆ.

ರಾಬರ್ಟ್ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಇದಾಗಿರುವ ಕಾರಣ ದರ್ಶನ್ ಬೇಕಾಗಿದ್ದಾರಂತೆ. ಮೊದಲ ಹಂತದ ಚಿತ್ರೀಕರಣದಲ್ಲಿ ಆರ್ಮುಗಂ ರವಿಶಂಕರ್ ಸಹ ಪಾಲ್ಗೊಳ್ಳುತ್ತಿದ್ದಾರೆ. ಈ ಹಂತ ಮುಗಿದ ಬಳಿಕವಷ್ಟೇ ಉಳಿದ ತಾರಾಗಣದ ಆಯ್ಕೆ ನಡೆಯಲಿದೆ ಎಂದಿವೆ ಮೂಲಗಳು. ಇನ್ನೂ ಹೀರೋಯಿನ್ ಸಹ ಅಂತಿಮವಾಗಿಲ್ಲ.

ಇನ್ನೊಂದು ಕಡೆ ದರ್ಶನ್ ಅವರ 'ಒಡೆಯ' ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ. ಎಂಡಿ ಶ್ರೀಧರ್ ನಿರ್ದೇಶನದ ಸಿನಿಮಾ ಇದು. ಈಗಾಗಲೆ ಬಿಡುಗಡೆಯಾಗಿರುವ ಯಜಮಾನ ಸಿನಿಮಾ ಯಶಸ್ವಿ ನಾಲ್ಕನೇ ವಾರಕ್ಕೆ ಅಡಿಯಿಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌