ಆ್ಯಪ್ನಗರ

ಮಕ್ಕಳ ಮನಸ್ಸನ್ನು ಹೇಳುವ ಮನ್‌ತ್ರಿ

ಮಕ್ಕಳು ಹಾದಿ ತಪ್ಪಲು ಯಾರು ಕಾರಣ ಎಂಬ ಪ್ರಶ್ನೆ ಸದಾ ಎಲ್ಲರನ್ನು ಕಾಡುತ್ತಿರುತ್ತದೆ. ಇಂಥದ್ದೊಂದು ಪ್ರಶ್ನೆಯನ್ನು ಇಟ್ಟುಕೊಂಡು ಕತೆ ಬರೆದ ಅಶೋಕ್‌ ಮನ್‌ತ್ರಿಯಲ್ಲಿ ಉತ್ತರ ಹುಡುಕುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Vijaya Karnataka 6 Apr 2018, 5:00 am
ಮಕ್ಕಳು ಹಾದಿ ತಪ್ಪಲು ಯಾರು ಕಾರಣ ಎಂಬ ಪ್ರಶ್ನೆ ಸದಾ ಎಲ್ಲರನ್ನು ಕಾಡುತ್ತಿರುತ್ತದೆ. ಇಂಥದ್ದೊಂದು ಪ್ರಶ್ನೆಯನ್ನು ಇಟ್ಟುಕೊಂಡು ಕತೆ ಬರೆದ ಅಶೋಕ್‌ ಮನ್‌ತ್ರಿಯಲ್ಲಿ ಉತ್ತರ ಹುಡುಕುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
Vijaya Karnataka Web mantri


ಮೂವರು ಮಕ್ಕಳ ಬದುಕಿನ ಕತೆ ಹೇಳುವ ಚಿತ್ರ ಮನ್‌ತ್ರಿ ಸೆಟ್ಟೇರಿದೆ. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹ ನಿರ್ದೇಶಕರಾಗಿ ಜನಪ್ರಿಯ ನಿರ್ದೇಶಕರ ಜತೆ ಕೆಲಸ ಮಾಡಿರುವ ಅನುಭವ ಇರುವ ಅಶೋಕ್‌ ಸಾಮ್ರಾಟ್‌ ಮಕ್ಕಳ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಲು ಮುಂದಾಗಿದ್ದಾರೆ.

ಮಕ್ಕಳ ಪಾತ್ರಕ್ಕೆ ಸಹಜತೆ ಬರಲಿ ಎಂಬ ಕಾರಣಕ್ಕೆ ನಿರ್ದೇಶಕರು ಅನಾಥಾಲಯದ ಮಕ್ಕಳನ್ನೇ ಪಾತ್ರಗಳಿಗೆ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಶಿವಮೊಗ್ಗದ ಮಕ್ಕಳ ಅನಾಥಾಶ್ರಮ 'ತಾಯಿಮನೆ'ಯಿಂದ ಆಕಾಶ್‌ ಎಂಬ ಬಾಲಕ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಕತೆ, ಚಿತ್ರಕತೆ ಬರೆದಿದ್ದಾರೆ ಅಶೋಕ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌