ಆ್ಯಪ್ನಗರ

ಬೆಂಗಳೂರಿನಲ್ಲಿ ಚಿರಂಜೀವಿ ಮಗಳ ಮದುವೆ

ತೆಲುಗಿನ ಸೂಪರ್ ಸ್ಟಾರ್, ರಾಜಕಾರಣಿ ಚಿರಂಜೀವಿಯವರ ಚಿಕ್ಕ ಮಗಳು ಶ್ರೀಜಾ ವಿವಾಹ ನಿಶ್ಚಯವಾಗಿದ್ದು, ಈ ಸಮಾರಂಭವನ್ನು ರಾಜಸ್ಥಾನದಲ್ಲಿ ಮಾಡುವ ಬದಲು ಬೆಂಗಳೂರಿನಲ್ಲಿ ನೆರವೇರಿಸಲು ಕುಟುಂಬ ನಿರ್ಧರಿಸಿದೆ.

ಏಜೆನ್ಸೀಸ್ 8 Mar 2016, 7:04 pm
ಬೆಂಗಳೂರು: ತೆಲುಗಿನ ಸೂಪರ್ ಸ್ಟಾರ್, ರಾಜಕಾರಣಿ ಚಿರಂಜೀವಿಯವರ ಚಿಕ್ಕ ಮಗಳು ಶ್ರೀಜಾ ವಿವಾಹ ನಿಶ್ಚಯವಾಗಿದ್ದು, ಈ ಸಮಾರಂಭವನ್ನು ರಾಜಸ್ಥಾನದಲ್ಲಿ ಮಾಡುವ ಬದಲು ಬೆಂಗಳೂರಿನಲ್ಲಿ ನೆರವೇರಿಸಲು ಕುಟುಂಬ ನಿರ್ಧರಿಸಿದೆ.
Vijaya Karnataka Web chiranjeevis daughter to wed in bengaluru
ಬೆಂಗಳೂರಿನಲ್ಲಿ ಚಿರಂಜೀವಿ ಮಗಳ ಮದುವೆ


ಶ್ರಿಜಾ ಮದುವೆಯನ್ನು ಎಲ್ಲಿ ಮಾಡುವರೆಂಬ ಕುತೂಹಲ ಎಲ್ಲರಲ್ಲಿತ್ತು. ಈ ಮೊದಲು ಜೈಪುರ ಅಥವಾ ಉದಯಪುರನಲ್ಲಿ ನಡೆಯಲಿದೆ ಎಂದೂ ಸುದ್ದಿಯಾಗಿತ್ತು. ವಿವಾಹ ಮಾರ್ಚ್ 28ರಂದು ನಡೆಯಲಿದೆ.

ರಾಜಸ್ಥಾನದಲ್ಲಿ ತಾಪಮಾನ ವಿಪರೀತ ಏರಿದೆ. ಇದು ವಿವಾಹದ ಸ್ಥಳ ಬದಲಾವಣೆಗೆ ಮುಖ್ಯ ಕಾರಣ ಎನ್ನಲಾಗಿದೆ. ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ ಬೆಂಗಳೂರು ಸಮೀಪ ದೇವನಹಳ್ಳಿಯಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಮದುವೆ ಸಮಾರಂಭ ನಡೆಸಲು ನಿರ್ಧರಿಸಿದ್ದಾರೆ. ಈ ಶುಭಕಾರ್ಯದಲ್ಲಿ ಎರಡೂ ಕುಟುಂಬಗಳ ಸದಸ್ಯರ ಜತೆ ಕೆಲ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌