ಆ್ಯಪ್ನಗರ

ತಮಿಳಿನ ಖ್ಯಾತ ಹಾಸ್ಯನಟ ಕ್ರೇಜಿ ಮೋಹನ್ ವಿಧಿವಶ

1952ರಲ್ಲಿ ಜನಿಸಿದ ಕ್ರೇಜಿ ಮೋಹನ್ 1973ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದಾರೆ. ಎಂಜಿನಿಯರ್ ಶಿಕ್ಷಣ ಪಡೆಯುವಾಗಲೇ ನಾಟಕಗಳಿಗೆ ಸ್ಕ್ರಿಪ್ಟ್ ಬರೆಯುತ್ತಿದ್ದರು. ಕ್ರೇಜಿ ಮೋಹನ್ ಸಹೋದರ ಮಧು ಬಾಲಾಜಿ ನಾಟಕ ಕಂಪೆನಿಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿದ್ದಾರೆ.

TIMESOFINDIA.COM 10 Jun 2019, 4:40 pm
ಕಾಲಿವುಡ್‌ನ ಖ್ಯಾತ ಹಾಸ್ಯನಟ ಕ್ರೇಜಿ ಮೋಹನ್ ಹೃದಯಾಘಾತದಿಂದ ಚೆನ್ನೈನಲ್ಲಿ ಸೋಮವಾರ (ಜೂನ್ 10) ವಿಧಿವಶರಾಗಿದ್ದಾರೆ. ಸೋಮವಾರ ಮಧ್ಯಾಹ್ನ ಹೃದಯಾಘಾತವಾಗಿದ್ದು ಕುಟುಂಬಿಕರು ಅವರನ್ನು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಸಾಗಿಸಿದರು. ಆದರೆ ವೈದ್ಯರು ಮಾಡಿದ ಪ್ರಯತ್ನ ಫಲಿಸದೆ ಕಣ್ಣುಮುಚ್ಚಿದ್ದಾರೆ.
Vijaya Karnataka Web crazy-mohan


1952ರಲ್ಲಿ ಜನಿಸಿದ ಕ್ರೇಜಿ ಮೋಹನ್ 1973ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದಾರೆ. ಎಂಜಿನಿಯರ್ ಶಿಕ್ಷಣ ಪಡೆಯುವಾಗಲೇ ನಾಟಕಗಳಿಗೆ ಸ್ಕ್ರಿಪ್ಟ್ ಬರೆಯುತ್ತಿದ್ದರು. ಕ್ರೇಜಿ ಮೋಹನ್ ಸಹೋದರ ಮಧು ಬಾಲಾಜಿ ನಾಟಕ ಕಂಪೆನಿಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿದ್ದಾರೆ.

ಕೆ ಬಾಲಚಂದರ್ ನಿರ್ದೇಶನದ 'ಪೊಯಿಕಲ್ ಕುದುರೈ' ಸಿನಿಮಾ ಮೂಲಕ ನಟನಾಗಿ ಬೆಳ್ಳಿತೆರೆಗೆ ಪ್ರವೇಶಿಸಿದ್ದರು. ವೆನ್ ಬಾ ಎಂಬ ಒಂದು ಸಾಲಿನ ಚುಟುಕುಗಳನ್ನು ಬರೆಯುತ್ತಿದ್ದರು. ಇದುವರೆಗೆ 40 ಸಾವಿರ ವೆನ್‌ಬಾಗಳನ್ನು ರಚಿಸಿದ್ದಾರೆ. ಇವರು ಚಿತ್ರಕಲಾವಿದರೂ ಆಗಿದ್ದರು.

ಅಪೂರ್ವ ಸಹೋದರಂಗಳ್, ಮೈಕೇಲ್ ಮದನ ಕಾಮರಾಜನ್, ಸತಿ ಲೀಲಾವತಿ, ತೆನಾಲಿ, ಪಂಚತಂತ್ರ, ಕಾದಲ ಕಾದಲ, ಭಾಮನೆ ಸತ್ಯಭಾಮನೆ, ವಸೂಲಿ ರಾಜಾ ಎಂಬಿಬಿಎಸ್ ಇನ್ನಿತರ ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳ ಮೂಲಕ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕ್ರೇಜಿ ಥೀವ್ಸ್ ಇನ್ ಪಾಲವಾಕ್ಕಂ ಎಂಬ ಎಂಬ ನಾಟಕದ ಬಳಿಕ ಇವರಿಗೆ ಕ್ರೇಜಿ ಎಂಬ ಹೆಸರು ಅಂಟಿಕೊಂಡಿತು. ಕ್ರೇಜಿ ಮೋಹನ್ ನಿಧನಕ್ಕೆ ತಮಿಳು ಚಿತ್ರೋದ್ಯಮ ಕಂಬನಿ ಮಿಡಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌